ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯ ಉಡುಪಿ ಇದರ ಕಾನೂನು ಪದವಿ ವಿದ್ಯಾರ್ಥಿ ಕುಂದಾಪುರದ ಶ್ರೀಲಕ್ಷ್ಮೀ ಅವರು ಚಿನ್ನದ ಪದಕವನ್ನು ಪಡೆದಿದ್ದಾರೆ.
ಡಾ. ಟಿ.ಎಂ.ಎ.ಪೈ ಚಿನ್ನದ ಪದಕ ಹಾಗೂ ದಿ. ಪ್ರೊ. ಪಿ ಬಾಲಕೃಷ್ಣ ಆರ್. ಶೆಣೈ ಅವರ ಸ್ಮರಣಾರ್ಥ ಚಿನ್ನದ ಪದಕ ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು ಕೊಡಮಾಡುವ ಹಲವು ನಗದು ಪುರಸ್ಕಾರಗಳನ್ನೂ ಪಡೆದಿದ್ದಾರೆ. ಅಲ್ಲದೆ ಪದವಿ ನಂತರದ ಎಲ್.ಎಲ್.ಎಮ್ ಪದವಿಯನ್ನು ಪೂರ್ತಿಗೊಳಿದ್ದಾರೆ.
ಇವರು ಕುಂದಾಪುರ ನಿವಾಸಿ ಆರ್ಡಿ ಪ್ರಕಾಶ ಕಾಮತ್ ಮತ್ತು ಸರೋಜ ಕಾಮತ್ ದಂಪತಿಗಳ ಪುತ್ರಿ.