spot_img
Sunday, April 12, 2026
spot_img

ಇಂಜಿನಿಯರ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ-ಡಾ.ಉದಯಶಂಕರ್ ಎಚ್.ಎನ್

ಕುಂದಾಪುರದಲ್ಲಿ ಇಂಜಿನಿಯರ್‍ಸ್ ದಿನಾಚರಣೆ

ಕುಂದಾಪುರ, ಸೆ.16: ಇಂಜಿನಿಯರ್‌ಗಳು ಇವತ್ತು ವಿವಿಧ ಕ್ಷೇತ್ರದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಹಾಗಂತ ಮುಂದೆ ಸಮಸ್ಯೆಗಳೇ ಇಲ್ಲವೆಂದು ಅರ್ಥವಲ್ಲ. ಸಾಕಷ್ಟು ಸವಾಲುಗಳು ನಮ್ಮ ಮುಂದಿದೆ. ಪ್ಲಾಸ್ಟಿಕ್ ಇವತ್ತು ಪರಿಸರವನ್ನಷ್ಟೇ ಹಾಳು ಮಾಡಿದ್ದಲ್ಲ, ನ್ಯಾನೋ ರೂಪದಲ್ಲಿ ಸರ್ವವ್ಯಾಪಿಯಾಗಿದೆ. ರಕ್ತದೊಂದಿಗೆ ಬೆರೆತು ಮಾನವನ ಅಂಗಾಂಗಗಳಿಗೆ ಹಾನಿ ಮಾಡುತ್ತಿದೆ. ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಂದರ್ಭದಲ್ಲಿ ನಾವಿದ್ದೇವೆ ಎಂದು ಮಣಿಪಾಲ ಎಂಐಟಿಯ ನಿವೃತ್ತ ಉಪನ್ಯಾಸಕ, ಭೂ ವಿಜ್ಞಾನಿ ಡಾ.ಉದಯಶಂಕರ್ ಎಚ್.ಎನ್ ಹೇಳಿದರು.

ಅವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್‍ಸ್ ಮತ್ತು ಆರ್ಕಿಟೆಕ್ಟ್ ವತಿಯಿಂದ ಸೆ.15ರಂದು ಕುಂದಾಪುರದ ಫೇರಿ ರಸ್ತೆಯ ಗಿಳಿಯಾರು ಕುಶಲ್ ಹೆಗ್ಡೆ ರೋಟರಿ ಭವನದಲ್ಲಿ ಆಯೋಜಿಸಲಾದ ೧೬ನೇ ಇಂಜಿನಿಯರ್‍ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ರಸ್ತೆಗಳು ಬೇಗನೆ ಹಾಳಾಗುವುದನ್ನು ನೋಡುತ್ತೇವೆ. ಇದರಲ್ಲಿ ಎಲ್ಲವನ್ನು ಕಳಪೆ ಕಾಮಗಾರಿ ಎಂದು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ರಸ್ತೆ ಹಾಳಾಗುವುದರಲ್ಲಿ ಮೂರು ಅಂಶಗಳನ್ನು ಗಮನಿಸಬೇಕು. ಅಂತರ್ಜಲದ ಮಟ್ಟ ರಸ್ತೆಗೆ ತಗುಲುವುದು, ರಸ್ತೆಯ ಕೆಳಭಾಗದಲ್ಲಿ ಮುರಕಲ್ಲು ಇರುವುದು, ಮುಖ್ಯವಾಗಿ ರಸ್ತೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರದ ವಾಹನಗಳು ರಸ್ತೆಯಲ್ಲಿ ಸಂಚರಿಸುವುದರಿಂದ ರಸ್ತೆ ಬೇಗನೇ ಹಾಳಾಗುತ್ತದೆ. ರಸ್ತೆ ನಿರ್ಮಾಣವಾದರಷ್ಟೆ ಸಾಲದು. ಅದರ ನಿರ್ವಹಣೆಗೂ ಆದ್ಯ ಗಮನ ನೀಡಬೇಕು. ಆ ರಸ್ತೆಯ ಸಾಮರ್ಥ್ಯಕ್ಕಿಂತ ಅಧಿಕ ಭಾರದ ವಾಹನಗಳು ಸಂಚರಿಸದಂತೆ ನೋಡಿಕೊಳ್ಳಬೇಕು ಎಂದರು.

ಕುಂದಾಪುರ ಇಂಜಿನಿಯರ್‍ಸ್ ಅಸೋಸಿಯೇಶನ್ ಅಧ್ಯಕ್ಷರಾದ ಎನ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿವೇದನ್ ನೆಂಪೆ ಅತಿಥಿಯಾಗಿ ಭಾಗವಹಿಸಿ ಯುವ ಸಾಧಕರನ್ನು ಸನ್ಮಾನಿಸಿದರು. ಪೂಜಾ ಟೈಲ್ಸ್ ಮತ್ತು ಮಾರ್ಬಲ್ ಬೀಜಾಡಿ ಇದರ ಸುಭಾಶ್ ಭಂಡಾರಿ, ದುರ್ಗಾ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕುಂದಾಪುರ ಇದರ ಗಣೇಶ ಗುಲ್ವಾಡಿ, ಪ್ರಾಯೋಜಕರಾದ ಸತ್ಯನಾರಾಯಣ ಭಟ್, ಕುಂದಾಪುರ ಇಂಜಿನಿಯರ್‍ಸ್ ಅಸೋಸಿಯೇಶನ್ ಕಾರ್ಯದರ್ಶಿ ಪ್ರವೀಣ್ ಯು., ಕೋಶಾಧಿಕಾರಿ ಸತ್ಯಶಂಕರ್ ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸತೀಶ್ ಖಾರ್ವಿ, ಕರಾಟೆಯಲ್ಲಿ ಅಜಯ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಐವರು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪೌರ ಕಾರ್ಮಿಕ ದಿನೇಶ್, ಎಸ್.ಎಲ್.ಆರ್.ಎಂನ ಗೀತಾ ಚಂದನ್, ಕರೋನಾ ವಾರಿಯರ್ಸ್ ಮಾಲತಿ ಖಾರ್ವಿ ಅವರನ್ನು ಗೌರವಿಸಲಾಯಿತು. ಅಶೋಕ್ ಸಾರಂಗ್ ಪ್ರಾರ್ಥನೆ ನೆರವೇರಿಸಿದರು.

ಕುಂದಾಪುರ ಇಂಜಿನಿಯರ್‍ಸ್ ಅಸೋಸಿಯೇಶನ್ ಅಧ್ಯಕ್ಷರಾದ ಎನ್.ಮಂಜುನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ಯು ವರದಿ ಮಂಡಿಸಿದರು. ಕೌಶಿಕ್ ಅತಿಥಿಗಳನ್ನು ಪರಿಚಯಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!