spot_img
Monday, June 8, 2026
spot_img

ನವಶಕ್ತಿ ಮಹಿಳಾ ವೇದಿಕೆ: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮೆನೇಜರ್ ಪ್ರಭಾಕರ್ ಪೂಜಾರಿ ಅವರಿಗೆ ಸನ್ಮಾನ

ಕೊಲ್ಲೂರು: ಬ್ಯಾಂಕ್ ಆಫ್ ಬರೋಡಾ ಕೊಲ್ಲೂರು ಶಾಖೆಯಲ್ಲಿ ಮೆನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಭಾಕರ್ ಪೂಜಾರಿಯವರು ವಯೋ ನಿವೃತ್ತಿ ಹೊಂದಿದ್ದು ಅವರನ್ನು ನವಶಕ್ತಿ ಮಹಿಳಾ ವೇದಿಕೆ ರಿ, ಕೊಲ್ಲೂರು ವತಿಯಿಂದ ಗುರುವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ್ ಪೂಜಾರಿ ಅವರು ಗ್ರೀಷ್ಮಾ ಗಿರಿಧರ್ ಭಿಡೆ ಆರಂಭಿಸಿದ ನವಶಕ್ತಿ ಮಹಿಳಾ ವೇದಿಕೆ ಸಂಘ ಇನ್ನು ಎತ್ತರಕ್ಕೆ ಬೆಳೆಯಲಿ ಹಾಗೂ ಮೂಕಾಂಬಿಕೆಯ ಅನುಗ್ರಹದಿಂದ ಯಶಸ್ಸು ಹೊಂದಲಿ ಎಂದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮತ್ತು ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷರಾದ ಗ್ರೀಷ್ಮಾ ಗಿರಿಧರ್ ಭಿಡೆ, ಬ್ಯಾಂಕ್ ಶಾಖಾಧಿಕಾರಿ ಸಂತೋಷ್ ಕುಮಾರ್, ಬ್ಯಾಂಕ್ ಸಿಬ್ಬಂದಿಗಳಾದ ರಘವರನ್, ಶೇಖರ್, ಅರುಣ್, ಉಮೇಶ್ ಹಾಗೂ ಸಂಘದ ಸದಸ್ಯರಾದ ಶಾರದಾ ಆಚಾರ್ಯ, ಸುಜಾತ ಆಚಾರ್ಯ, ರತ್ನ, ಉಷಾ, ಜಯಂತಿ, ಯಶೋದ, ಜಯಲಕ್ಷ್ಮಿ, ಸುಗುಣ, ಸಂಗೀತ, ಶಾಂತ, ರೂಪ ಭಟ್, ನಾಗವೇಣಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಜ್ಯೋತಿ ರಾಘವೇಂದ್ರ ಸ್ವಾಗತಿಸಿದರು, ಸುಷ್ಮಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!