spot_img
Sunday, April 12, 2026
spot_img

ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ-2022

ಆ.28ಕ್ಕೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ
ಕುಂದಾಪುರ ತಾ. ಯುವ ಬಂಟರ ಸಂಘದ ದಶಮ ಸಂಭ್ರಮದ ಎರಡನೇ ಕಾರ್ಯಕ್ರಮವಾಗಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಆ. 28ರ ಬೆಳಿಗ್ಗೆ 9.30ಕ್ಕೆ ಕೋಟೇಶ್ವರದ ಯುವ ಮೆರಿಡಿಯನ್ ಹಾಲ್‌ನಲ್ಲಿ ನಡೆಯಲಿದೆ.

ಮುಂಬಯಿ ಉದ್ಯಮಿ ಆನಂದ ಶೆಟ್ಟಿ ಹಾಗೂ ಮೈಸೂರು ಮರ್ಕಂಟೇಲ್ ಆಡಳಿತ ನಿರ್ದೇಶಕ ಎಚ್.ಎಸ್. ಶೆಟ್ಟಿ ಉದ್ಘಾಟಿಸಲಿದ್ದು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ಪ್ರತಾಪ್‌ಚಂದ್ರ ಶೆಟ್ಟಿಯವರಿಗೆ ಅಭಿನಂದನೆ, ವಿದ್ಯಾರ್ಥಿ ವೇತನ ವಿತರಣೆ, ದಿ.ಎಂ. ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಕೃಷಿ ಪ್ರಶಸ್ತಿ, ಯುವ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಆಸರೆ ಯೋಜನೆ ಲೋಕಾರ್ಪಣೆ ನಡೆಯಲಿದೆ.

ದಿನಕರ್ ಶೆಟ್ಟಿಯವರಿಗೆ ಡಾ. ಮಧುಕರ್ ಶೆಟ್ಟಿ ಪ್ರಶಸ್ತಿ:
ಮಂಗಳೂರು ಸಹಾಯಕ ಪೋಲಿಸ್ ಆಯುಕ್ತ ದಿನಕರ್ ಶೆಟ್ಟಿಯವರಿಗೆ ಡಾ| ಮಧುಕರ್ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಧಕರಿಗೆ ದಶಮ ಸಂಭ್ರಮ ಪ್ರಶಸ್ತಿ:
ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ ವೈದ್ಯ-ಡಾ. ರಂಜಿತ್ ಕುಮಾರ್ ಶೆಟ್ಟಿ, ಆಡಳಿತ – ಜಯಶೀಲ ಶೆಟ್ಟಿ ಮೊಳಹಳ್ಳಿ, ಶೈಕ್ಷಣಿಕ – ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಸಾಹಿತ್ಯ- ಡಾ| ರೇಖಾ ಬನ್ನಾಡಿ, ಧಾರ್ಮಿಕ-ವಂಡಬಳ್ಳಿ ಜಯರಾಮ ಶೆಟ್ಟಿ, ಯಕ್ಷಗಾನ ಸಂಘಟನೆ-ಕಿಶನ್ ಹೆಗ್ಡೆ ಪಳ್ಳಿ, ಸ್ವೋದ್ಯೋಗ-ವಸಂತಿ ಎಂ ಶೆಟ್ಟಿ, ಮಾಧ್ಯಮ-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಕೃಷಿ-ಮಂಜುನಾಥ ಶೆಟ್ಟಿ ಹೆಂಗವಳ್ಳಿ, ಕ್ರೀಡೆ-ಪ್ರಶಾಂತ್ ಶೆಟ್ಟಿಯವರಿಗೆ ದಶಮ ಸಂಭ್ರಮ ಪ್ರಶಸ್ತಿ ಪ್ರದಾನ ನಡೆಯಲಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಹಲವಾರು ಗಣ್ಯಾತಿಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!