Sunday, September 8, 2024

ಗಜವರ್ಣ-2022: ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ

ಕುಂದಾಪುರ: ಸಾಧನಾ ಕಲಾ ಸಂಗಮ (ರಿ) ಕುಂದಾಪುರವು 2009 ರಲ್ಲಿ ಪ್ರಾರಂಭವಾದಂದಿನಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಬಹುಮುಖ್ಯ ಚಟುವಟಿಕೆಯಲ್ಲಿ ಒಂದಾದ ಗಜವರ್ಣ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ. ಇದು ಪ್ರತಿ ವರ್ಷ ಗಣೇಶ ಚೌತಿಯ ಸಂದರ್ಭದಲ್ಲಿ ನಡೆಯುವಂತಹ ಸ್ಪರ್ಧೆ. ಎಂದಿನಂತೆ ಈ ಸ್ಪರ್ಧೆ ಗಜವರ್ಣ 2022 ಯಲ್ಲಿ lkg ಯಿಂದ 10 ನೇ ತರಗತಿಯ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆಯುತ್ತದೆ. ಪ್ರತಿ ವಿಭಾಗದಲ್ಲಿ 5 ಬಹುಮಾನಗಳನ್ನು ನಿಗದಿಪಡಿಸಲಾಗಿದೆ.

ಸ್ಪರ್ಧೆಯ ೩ ವಿಭಾಗಗಳು: 1. 6 ವರ್ಷದೊಳಗಿನವರು, 2. 6 ರಿಂದ 10 ವರ್ಷದೊಳಗಿನವರು ಹಾಗೂ 3. 10 ರಿಂದ 15 ವರ್ಷದವರೆಗಿನ ವಿದ್ಯಾರ್ಥಿಗಳು. ಆದರೆ ಈ ಬಾರಿ ಗಣಪತಿ ಚಿತ್ರ ರಚನೆಯನ್ನು ನಿಮ್ಮ ಮನೆಯಲ್ಲಿ ರಚಿಸಿ ನಮಗೆ ತಲುಪಿಸಬೇಕು.

ನಿಯಮಗಳು : ಸ್ಪರ್ಧಾಳುಗಳು a4 ಡ್ರಾಯಿಂಗ್ ಹಾಳೆಯಲ್ಲಿ (ಬಿಳಿಯ ಚಾರ್ಟ ಪೇಪರ್) ಗಣಪತಿಯ ಚಿತ್ರವನ್ನು ನಿಮ್ಮ ಮನೆಯಲ್ಲೇ ರಚಿಸಬೇಕು. ಚಿತ್ರದ ಹಿಂಬಾಗದಲ್ಲಿ ಸ್ಪರ್ಧಿಯ ಹೆಸರು, ಜನ್ಮ ದಿನಾಂಕ, ವಾಟ್ಸಾಪ್ ಫೋನ್ ನಂಬರ್ ಹಾಗೂ ಇಮೇಲ್ ವಿಳಾಸ ಬರೆಯಿರಿ. ಕಪ್ಪು/ಬಿಳುಪು ಅಥವಾ ಬರೇ ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸದಲ್ಲಿ ಪರಿಗಣಿಸುವುದಿಲ್ಲ. ಯಾವುದೇ ತರಹದ ಬಣ್ಣಗಳನ್ನು ಬಳಸಿಯೇ ಬಿಡಿಸಬೇಕು. ಎಲ್ಲಾ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 2 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ನಮ್ಮ ತೀರ್ಪುದಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಪರ್ಧೆಯ ಫಲಿತಾಂಶವನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ನಿಮ್ಮ ವಾಟ್ಸಾಪ್ ನಂಬರಕ್ಕೆ ಕಳುಹಿಸಲಾಗುವುದು. ಸ್ಪರ್ಧಿಗಳು ಮೂಲತಃ ಉಡುಪಿ ಜಿಲ್ಲೇಯವರಾಗಿರ ಬೇಕು.

ಹೀಗೆ ರಚಿಸಿದ ಚಿತ್ರವನ್ನು ನಮ್ಮ ಕಛೇರಿಗೆ ಆಗಸ್ಟ 27ನೇ ತಾರೀಕು ಶನಿವಾರದೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ. ಸಾಧನ ಕಲಾ ಸಂಗಮ (ರಿ), ಹಳೆಯ ಈರೊ ಕಿಡ್ಸ್ ಕಟ್ಟಡ, ಸಟ್ವಾಡಿ ಸುಂದರ ಶೆಟ್ಟಿ ಅಂಗಡಿಯ ಹಿಂಬಾಗ, ಬಿ ಎಚ್ ಎಮ್ ರಸ್ತೆ, ಕುಂದಾಪುರ.

576201, PH: 8722739038, 8762436950
EMAIL: sadhanakpr2010@gmail.com

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!