Sunday, September 8, 2024

ಜಲವಳ್ಳಿ ವಿದ್ಯಾಧರ ರಾವ್ ಅವರಿಗೆ ಮಯ್ಯ ಯಕ್ಷಶ್ರೀ ಪ್ರಶಸ್ತಿ, ಪ್ರಸಾದ ಕುಮಾರ್ ಅವರಿಗೆ ಮಣೂರು ವಾಸುದೇವ ಮಯ್ಯ ಪ್ರಶಸ್ತಿ ಪ್ರದಾನ

ಕುಂದಾಪುರ: ಸಾಸ್ತಾನ ಐರೋಡಿಯ ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವ ಯಕ್ಷೋತ್ಕರ್ಷ ೨೦೨೨ ಕಾರ್ಯಕ್ರಮದಲ್ಲಿ ಮಯ್ಯ ಯಕ್ಷಶ್ರೀ ಪ್ರಶಸ್ತಿ ಪ್ರದಾನ ಮತ್ತು ಮಣೂರು ವಾಸುದೇವ ಮಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಸಾಸ್ತಾನ ಅಣಲಾಡಿ ಮಠದ ಲಕ್ಷ್ಮೀನರಸಿಂಹ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್‌ನ ಪ್ರವರ್ತಕ ವಸಂತ ಗಿಳಿಯಾರು ಉದ್ಘಾಟಿಸಿದರು. ಅಣಲಾಡಿ ಮಠ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸುಪ್ರಸಿದ್ಧ ಕಲಾವಿದರಾದ ಜಲವಳ್ಳಿ ವಿದ್ಯಾಧರ ರಾವ್ ಅವರಿಗೆ ಈ ಸಾಲಿನ ಮಯ್ಯ ಯಕ್ಷಶ್ರೀ ಪ್ರಶಸ್ತಿ ಹಾಗೂ ಪ್ರಸಂಗಕರ್ತ ಭಾಗವತ ಪ್ರಸಾದ ಕುಮಾರ್ ಮೊಗೆಬೆಟ್ಟು ಅವರಿಗೆ ಮಣೂರು ವಾಸುದೇವ ಮಯ್ಯ ಸ್ಮಾರಕ ಪ್ರಶಸ್ತಿಯನ್ನು ವಾಸುದೇವ ಮಯ್ಯ ಕುಟುಂಬದ ವತಿಯಿಂದ ಪ್ರದಾನ ಮಾಡಲಾಯಿತು.

ಪೆರ್ಡೂರು ಮೇಳದ ಯಜಮಾನ ವೈ.ಕರುಣಾಕರ ಶೆಟ್ಟಿ, ಹಿರಿಯ ಯಕ್ಷ ರಂಗಭೂಮಿ ಕಲಾವಿದ ಹಾಗೂ ಕಿರುತೆರೆ ನಿರ್ದೇಶಕ ರಮೇಶ್ ಬೇಗಾರ್, ಬೆಂಗಳೂರಿನ ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಹರ್ಷ ಆರ್ ಹೇರ್ಳೆ, ರಶ್ಮಿ ಹೇರ್ಳೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, ಪ್ರಸಂಗಕರ್ತ ಪವನ್ ಕಿರಣಕೆರೆ, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ವಾಸ್ತು ತಜ್ಞ ಹಾಗೂ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಕೋಟೇಶ್ವರ, ಕುಂದಾಪ್ರ ಕನ್ನಡದ ರಾಯಭಾರಿ ಮನು ಹಂದಾಡಿ ಉಪಸ್ಥಿತರಿದ್ದರು.

ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ಸಂಸ್ಥಾಪಕ ಋಷಿಕುಮಾರ್ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕರ್ಕೆರಾ ಸ್ವಾಗತಿಸಿದರು. ರಾಜೇಶ್ ಕರ್ಕೆರಾ ಕೋಡಿ ಕಾರ್ಯಕ್ರಮ ನಿರೂಪಿಸಿದರು.

ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗದಾಯುದ್ಧ ಯಕ್ಷಗಾನ, ಪ್ರಸಂಗಕರ್ತರ ಪಾತ್ರ ನಿರ್ವಹಣೆಯಲ್ಲಿ ಪ್ರಮದಾ ಪ್ರಸಂಗ ತಾಳಮದ್ದಳೆ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!