spot_img
Wednesday, January 22, 2025
spot_img

ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸಿ‌ಎಚ್ ಅಬ್ದುಲ್ ಮುತ್ತಾಲಿ ವಂಡ್ಸೆ ನೇಮಕ

ಕುಂದಾಪುರ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಉಡುಪಿ ಜಿಲ್ಲಾ ವಕ್ಫ್‌ಬೋರ್ಡ್ ಸಲಹ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳ ನೇಮಕ ಮಾಡಿದ್ದು ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸಿ‌ಎಚ್ ಅಬ್ದುಲ್ ಮುತ್ತಾಲಿ ವಂಡ್ಸೆ ಇವರನ್ನು ನೇಮಿಸಲಾಗಿದೆ.

ಸಿ‌ಎಚ್ ಅಬ್ದುಲ್ ಮುತ್ತಾಲಿ ವಂಡ್ಸೆ ಅವರು ಈಗಾಗಲೇ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾ ಉಪಾಧ್ಯಕ್ಷರಾಗಿ, ಕುಂದಾಪುರ ತಾಲೂಕು ಜನತಾ ವೇದಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಂಡ್ಸೆ ಜುಮ್ಮಾ ಮಸೀದಿ ಅಧ್ಯಕ್ಷರಾಗಿ, ಸ.ಪ.ಪೂ ಕಾಲೇಜು ವಂಡ್ಸೆ-ನೆಂಪು ಇದರ ಪ್ರೌಢಶಾಲಾ ವಿಭಾಗದ ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಿಂದ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆ ಹಾಗೂ ಅಲ್ಪಸಂಖ್ಯಾತ ಮೋರ್ಛಾದಲ್ಲಿ ಗುರುತಿಸಿಕೊಂಡಿದ್ದಾರೆ.

ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾಗಿ ದಾವೂದ್ ಅಬೂಬಕರ್, ಮಹಮ್ಮದ್ ಅಬ್ದುಲ್ ಸುಹಾನ್, ಬದ್ರುದ್ದೀನ್ ಎನ್‌ಎ, ಎಮ್‌ಡಿ ಅಫ್ಸಾರ್ ಉಚ್ಚಿಲ, ಎಮ್.ಎಸ್ ಅಬ್ದುಲ್ ರಜಾಕ್, ಮೌಲಾನ ದಸ್ತಗೀರ್, ಅಬ್ದುಲ್ ರೆಹಮಾನ, ಎಮ್.ಪಿ.ಮೊಹಿದ್ದೀನಬ್ಬ, ಸದಸ್ಯರಾಗಿ ಶೈಕ್ ಅಸಿಫ್ ಕಟಪಾಡಿ, ಜುನೈದ್ ಉಡುಪಿ, ಅಜಾಜ್ ಅಹಮ್ಮದ್, ಶಯಕ್ ಫಯಾಜ್, ಅಬ್ದುಲ್ ಖಾಲಿಕ್, ಕೆ. ಅಬ್ದುಲ್ ಖಾದರ್, ಆದಾಮ್, ಅಬ್ದುಲ್ಲಾ, ಅಬೂಬಕರ್, ಸುಭಾನ್ ಹೊನ್ನಾಳ, ಮಹಮ್ಮದ್ ಶರೀಫ್ ಹಾಗೂ ಅಬ್ದುಲ್ ರಹಮಾನ್ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!