Sunday, September 8, 2024

ಬಾರ್ಕೂರು: ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಅಭಿನಂದನೆ

ಕುಂದಾಪುರ: ಪ್ರಸಕ್ತ ಸಾಲಿನಲ್ಲಿ ತೇರ್ಗಡೆಗೊಂಡ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಬಾರ್ಕೂರು ಬ್ರಹ್ಮಲಿಂಗ ವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ದೇವಳದ ಆಡಳಿತ ಮೊಕ್ತೇಸರರಾದ ಡಾ. ಸಿ. ಜಯರಾಮ ಶೆಟ್ಟ್ಟಿಗಾರ ಅವರು, ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಆದರ್ಶ ವಿದ್ಯಾರ್ಥಿಯಾಗಿ ಸಮಾಜದ ಋಣ ತೀರಿಸಿ ಎಂದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ ಅವರು ಮಾತನಾಡಿ, ಗಳಿಸಿದ ಜ್ಞಾನವನ್ನು ಉಪಯುಕ್ತವಾಗಿ ಬಳಸಿಕೊಂಡು ಕೌಶಲ್ಯಯುಕ್ತ ಶಿಕ್ಷಣ ತಮ್ಮದಾಗಲಿ ಎಂದು ಶುಭಹಾರೈಸಿ, ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್. ಎ. ಗೋಪಾಲ ಅವರು, ಸಮಾಜ ಸೇವಾ ಕೈಂಕರ್ಯದಿಂದ ತನ್ನ ಏಳಿಗೆಯೊಂದಿಗೆ ಎಲ್ಲರ ಏಳಿಗೆ ಸಾಧಿಸಲು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿ ಸಾಧಿಸಿ ಎಂದರು.

ಇದೇ ಸಂದರ್ಭದಲ್ಲಿ ತೇರ್ಗಡೆಗೊಂಡ ಎಲಾ ವಿಧ್ಯಾರ್ಥಿಗಳಿಗೆ ಗೌರವಧನ ನೀಡಿದ ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ ಮತ್ತು ಮೋಹನದಾಸ್ ಅವರನ್ನು ಗೌರವಿಸಲಾಯಿತು.

ಸಭೆಯಲ್ಲಿ ಸಹಮೊಕ್ತೇಸರರಾದ ರಾಮ ಶೆಟ್ಟಿಗಾರ ಕೊಡ್ಲಾಡಿ, ಚಂದ್ರಶೇಖರ ಶೆಟ್ಟಿಗಾರ ಹೊಸಾಳ, ಸುರೇಶ ಹೆಂಗವಳ್ಳಿ, ವಿನಯ ಸಾಸ್ತಾನ, ರಘುರಾಮ ಶೆಟ್ಟಿಗಾರ, ಚಂದ್ರಾವತಿ, ಸುಧಾಕರ ವಕ್ವಾಡಿ, ಗುರಿಕಾರ ಕೃಷ್ಣಯ್ಯ ಶೆಟ್ಟಿಗಾರ, ಮಹಿಳಾ ವೇದಿಕೆಯ ಆಶಾ ವಿಠಲ ಶೆಟ್ಟಿಗಾರ, ಪಿ. ವಿ. ಶೆಟ್ಟಿಗಾರ, ನಾರಾಯಣ ಶೆಟ್ಟಿಗಾರ ಸುರತ್ಕಲ್, ಕೋಶಾಧಿಕಾರಿ ಅರುಣ್ ಕುಮಾರ ಕಾರ್ಯದರ್ಶಿ ಭಾಸ್ಕರ ಶೆಟ್ಟಿಗಾರ, ಕವಿತಾ ಜಯರಾಂ, ಸಾವಿತ್ರಿ ನಾರಾಯಣ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!