spot_img
Thursday, April 2, 2026
spot_img

ವಿಶ್ವ ಕುಂದಾಪುರ ರಚಿತ ‘ನಾವು ಎಳೆಯರು ಸ್ವಾತಂತ್ರ್ಯ ವೀರರು’ ನಾಟಕ ಪ್ರದರ್ಶನ

ಕೋಲಾರ: ಹಿರಿಯ ಪತ್ರಕರ್ತ ವಿಶ್ವ ಕುಂದಾಪುರ ರಚಿತ ‘ನಾವು ಎಳೆಯರು ಸ್ವಾತಂತ್ರ್ಯ ವೀರರು’ ಕಿರು ನಾಟಕದ ಮೊದಲ ಪ್ರದರ್ಶನ ಜೂನ್ 24ರಂದು ಕೋಲಾರದ ತೇರಹಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರದರ್ಶನಗೊಂಡಿತು. 24 ಮತ್ತು 25ರಂದು ನಡೆದ ವಿದ್ಯಾರ್ಥಿಗಳ ಅಧ್ಯಯನ ಶಿಬಿರದ ಭಾಗವಾಗಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸಂಜೆಯಲ್ಲಿ ಹುದುಕುಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ವಿಮೋಚನಾ ಸಮರದಲ್ಲಿ ವಿದ್ಯಾರ್ಥಿಗಳು ವಹಿಸಿದ್ದ ಪಾತ್ರವನ್ನು ಬಿಂಬಿಸುವ ಕಿರು-ನಾಟಕಗಳ ಗುಚ್ಛ ಇದಾಗಿದ್ದು ಬಂಗಾರಪೇಟೆಯ ವಿದ್ಯಾರ್ಥಿ ನಾಯಕ ಅಜಯ್ ಕುಮಾರ್ ಆರ್ ನಾಟಕವನ್ನು ನಿರ್ದೇಶಿಸಿದ್ದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಿರಿಯರಿಗೆ ಹೆಗಲೆಣೆಯಾಗಿ ವಿದ್ಯಾರ್ಥಿಗಳೂ ಭಾಗವಹಿಸಿ ಅಪಾರ ತ್ಯಾಗ ಬಲಿದಾನ ಮಾಡಿದ ನೈಜ ಘಟನೆಗಳನ್ನು ಆಧರಿಸಿದ ನಾಟಕವಿದು.

ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿಮೋಚನೆಗಾಗಿ ನಡೆದ ಸಂಗ್ರಾಮದಲ್ಲಿ ವಿದ್ಯಾರ್ಥಿ ಸಮುದಾಯವೂ ಪಾಲ್ಗೊಂಡ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಇಂದಿನ ವಿದ್ಯಾರ್ಥಿ ಸಮುದಾಯ ತಮ್ಮ ಪೂರ್ವಜರ ತ್ಯಾಗವನ್ನು ಸ್ಮರಿಸಿಕೊಂಡು ಜವಾಬ್ದಾರಿಯುತ, ಸಮ-ಸಮಾಜ ನಿರ್ಮಾಣದ ಹೋರಾಟದಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ ಹಾಗೂ ಪ್ರೇರೇಪಣೆ ಪಡೆಯಲಿ ಎಂಬುದು ನಾಟಕದ ಆಶಯವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!