spot_img
Thursday, April 2, 2026
spot_img

ಕೆರಾಡಿ: ಉಳುಮೆ ನಿರತ ವ್ಯಕ್ತಿ ಗದ್ದೆಯಲ್ಲಿ ಕುಸಿದು ಬಿದ್ದು ಸಾವು

ಕುಂದಾಪುರ: ಗದ್ದೆಯಲ್ಲಿ ಉಳುಮೆ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿ ಗದ್ದೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಜೂ.29ರ ಬುಧವಾರ ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಳೆ ಹರಲಿಪುರ ಗ್ರಾಮದ ನಿವಾಸಿ ಪ್ರಸ್ತುತ ವಂಡ್ಸೆಯಲ್ಲಿ ವಾಸವಿದ್ದ ಕಾಂತುರಾಜು (40) ಮೃತ ಪಟ್ಟ ವ್ಯಕ್ತಿ.

ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಕೃಷಿ ಮಾಡಲು ಗದ್ದೆಯನ್ನು ಗೇಣಿಗೆ ಪಡೆದುಕೊಂಡು ಗದ್ದೆ ಉಳುಮೆ ಮಾಡಲು ಬೆಳ್ಳಾಲದವರೊಬ್ಬರಿಂದ ಟ್ರಾಕ್ಟರ್‌ನ್ನು ಪಡೆದಿದ್ದರು. ಬುಧವಾರ ಅದರ ಚಾಲಕ ಕಾಂತುರಾಜು ಟ್ರಾಕ್ಟರ್‌ನಿಂದ ಗದ್ದೆ ಉಳುಮೆ ಮಾಡುತ್ತಿದ್ದರು. ಈ ವೇಳೆ ಅವರೊಂದಿಗೆ ಇತರ ನಾಲ್ಕೈದು ಮಂದಿ ಅವರ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ಮಧ್ನಾಹ್ನ ಊಟದ ಸಮಯ ಕಾಂತರಾಜು ಟ್ರಾಕ್ಟರ್‌ನ್ನು ನಿಲ್ಲಿಸಿ ಕೆಸರು ಗದ್ದೆಯಲ್ಲಿ ನಡೆದು ಕೊಂಡು ಹೋಗುತ್ತಿದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಇವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!