spot_img
Thursday, April 2, 2026
spot_img

ಎ.ಜಿ ಕೊಡ್ಗಿಯವರು ಪಕ್ಷಾತೀತವಾಗಿ ಗೌರವಿಸಲ್ಪಡುವ ವ್ಯಕ್ತಿ-ಕೆ.ಪ್ರತಾಪಚಂದ್ರ ಶೆಟ್ಟಿ

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎ.ಜಿ ಕೊಡ್ಗಿಯವರಿಗೆ ಶ್ರದ್ದಾಂಜಲಿ ಸಭೆ

ಕುಂದಾಪುರ: ಒಬ್ಬ ನಾಯಕರಾಗಿ ವೇದಿಕೆ, ಅವಕಾಶಗಳನ್ನು ಬಯಸದೆ ಜನರ ನೋವು ನಲಿವುಗಳಿಗೆ ಸ್ಪಂದಿಸುವ, ಜನರೊಂದಿಗೆ ಸಿಗುವ ವ್ಯಕ್ತಿ ಎ.ಜಿ ಕೊಡ್ಗಿಯವರಾಗಿದ್ದರು. ಪಕ್ಷಾತೀತವಾಗಿ ಗೌರವಿಸುವ ವ್ಯಕ್ತಿತ್ವ ಅವರು ಹೊಂದಿದ್ದರು. ಜಿಲ್ಲೆಯ ಮನೆಮನಗಳಲ್ಲಿ ಅವರ ವ್ಯಕ್ತಿತ್ವ, ವಿಚಾರಧಾರೆ ತಿಳಿದಿದೆ. ಓರ್ವ ಮುತ್ಸದ್ಧಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಕುಂದಾಪುರ ಹೋಟೆಲ್ ಶರೋನ್ ಸಭಾಂಗಣದಲ್ಲಿ ನಡೆದ ಮಾಜಿ ಶಾಸಕ, ಸಹಕಾರಿ ಧುರೀಣ ಎ.ಜಿ.ಕೊಡ್ಗಿಯವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ದೀಪ ಬೆಳಗಿಸಿ, ನುಡಿನಮನ ಸಲ್ಲಿಸಿದರು.

ಖರ್ಚು ಮಾಡಿ ಚುನಾವಣೆ ಎದುರಿಸಬಾರದು, ಖರ್ಚಿಲ್ಲದೇ ಚುನಾವಣೆ ಎದುರಿಸಬೇಕು ಎನ್ನುವ ವಿಚಾರಧಾರೆ ಎ.ಜಿ ಕೊಡ್ಗಿ ಅವರಲ್ಲಿತ್ತು. ತನ್ನ ಹುದ್ದೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಯ್ದೆ, ಕಾನೂನಾತ್ಮಕ ಜ್ಞಾನವನ್ನು ಅಧ್ಯಯನಗಳ ಮೂಲಕ ಪಡೆದುಕೊಳ್ಳುತ್ತಿದ್ದರು. ಜಿಲ್ಲಾ ಪರಿಷತ್ ಸಭೆಗಳಿಗೆ ಕೊಡ್ಗಿಯವರು ಬರುತ್ತಿದ್ದರೆಂದರೆ ಅಧಿಕಾರಿಗಳು ಹೆದರುತ್ತಿದ್ದರು. ರಾಜಕೀಯವಾಗಿ ನಿವೃತ್ತರಾದ ಬಳಿಕಗೂ ತನ್ನೂರಿನ ಶ್ರೇಯೋಭಿವೃದ್ದಿಗಾಗಿ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ನ್ನು ಸ್ಥಾಪಿಸಿ ಜನಸೇವೆಗೆ ಮುಂದಾಗಿದ್ದರು. ಪ್ರತೀ ಮನೆಗೂ ಸೋಲಾರ್ ಮೂಲಕ ಕ್ರಾಂತಿಯನ್ನೇ ಮಾಡಿದ್ದರು ಎಂದು ಹೇಳಿದರು.

ಮಾಣಿಗೋಪಾಲ ಮಾತನಾಡಿ, ಎ.ಜಿ ಕೊಡ್ಗಿಯವರು ದೇವರಾಜ ಅರಸು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರಿಗೆ ಅರಸು ಸಂಪುಟದಲ್ಲಿ ಸಚಿವರಾಗುವ ಅವಕಾಶಗಳಿದ್ದವು. ಸ್ವತಃ ಭೂಮಾಲಿಕರಾಗಿದ್ದರೂ ಕೂಡಾ ಅವರು ಭೂ ಮಸೂದೆಯ ಸಂದರ್ಭದಲ್ಲಿ ಜನರ ಪರ ನಿಂತಿದ್ದರು. ಜಿಲ್ಲಾ ಪರಿಷತ್ ಮೂಲಕವೂ ಅನೇಕ ಕೊಡುಗೆಯನ್ನು ಅವರು ನೀಡಿದ್ದರು. ಜಾತಿ, ಮತ, ಪಂಥವನ್ನು ಮೀರಿದ ವ್ಯಕ್ತಿ ಅವರದ್ದಾಗಿದ್ದರು ಎಂದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಎ.ಜಿ ಕೊಡ್ಗಿಯವರು ನೇರ ನಿಷ್ಠುರವಾದಿ. ತನ್ನದೇಯಾದ ಶಿಸ್ತನ್ನು ಅವರು ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಮೈಗೂಡಿಸಿಕೊಂಡವರು. ರಾಜಕೀಯ ಕ್ಷೇತ್ರದಲ್ಲಿ ದಿಟ್ಟ ಹೋರಾಟಗಾರರಾಗಿ ಗುರುತಿಸಿಕೊಂಡವರು. ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದರು. ರಾಜಕಾರಣದಿಂದ ನಿವೃತ್ತಿ ಪಡೆದ ಬಳಿಕ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ ಮೂಲಕ ತನ್ನೂರಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡವರು ಎಂದು ಅಭಿಪ್ರಾಯ ಪಟ್ಟರು.

ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಕುಂದರ್, ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆ. ಸದಾನಂದ ಶೆಟ್ಟಿ, ಹರಿಪ್ರಸಾದ್, ಸತೀಶ ಕಿಣಿ ಬೆಳ್ವೆ, ಬಿ. ಹಿರಿಯಣ್ಣ, ಸಂಪಿಗೆಡಿ ಸಂಜೀವ ಶೆಟ್ಟಿ, ಕೃಷ್ಣದೇವ ಕಾರಂತ, ದೇವಾನಂದ ಶೆಟ್ಟಿ, ಜ್ಯೋತಿ ಪುತ್ರನ್ , ವಿಕಾಸ್ ಹೆಗ್ಡೆ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಯರಾಮ ಶೆಟ್ಟಿ ಬೆಳ್ವೆ, ಶರತ ಹೆಗ್ಡೆ ಕೆದೂರು, ದರ್ಮ ಪ್ರಕಾಶ್, ದೇವಕಿ ಸಣ್ಣಯ್ಯ, ದಿನೇಶ ಹೆಗ್ದೆ, ಎ. ಪಿ. ಚಾತ್ರ, ಇಚ್ಚಿತಾರ್ಥ ಶೆಟ್ಟಿ, ನಾರಾಯಣ್ ಆಬಾರ್, ಅಶ್ವತ್ ಕುಂದಾಪುರ, ನಟರಾಜ್ ಹೊಳ್ಳ, ಅಭಿಜಿತ್ ಪೂಜಾರಿ, ಪ್ರಭಾವತಿ ಶೆಟ್ಟಿ, ನ್ಯಾಯವಾದಿ ರವಿರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ನ ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ಕೃಷ್ಣ ಪೂಜಾರಿ ಅಮಾಸೆಬೈಲು ವಂದಿಸಿದರು. ಸೂರ್ಯಪ್ರಕಾಶ್ ದಾಮ್ಲೆ ಶ್ರದ್ದಾಂಜಲಿ ಸಭೆಯನ್ನು ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!