spot_img
Thursday, April 2, 2026
spot_img

ಕೊಲ್ಲೂರು ಯುವಕ ಬೈಕ್‌ನಲ್ಲಿ ಲಡಾಕ್‌ಗೆ ಪಯಣ

ಕೊಲ್ಲೂರು: ಲಾಂಗ್ ರೈಡ್‌ಗೆ ತೆರಳೋದು ಪ್ರತಿಯೊಬ್ಬ ಬೈಕರ್‌ಗಳ ಕನಸು. ಅಂತಹ ಸುಂದರ ಕನಸು ನನಸು ಮಾಡಿದ ಯುವಕ ಸಾಹಸಗಾಥೆ ಇದು.

ಕೊಲ್ಲೂರಿನಿಂದ ಆರಂಭಿಸಿ ಲೇಹ್ ಸೇರಿದಂತೆ ಲಡಾಕ್ ನಗರದ ನಾನಾ ಪ್ರವಾಸಿ ತಾಣಗಳನ್ನು ಸುತ್ತುತ್ತಾ ಕುಂದಾಪ್ರ ಕನ್ನಡದಲ್ಲಿಯೇ ವ್ಲಾಗಿಂಗ್ ಅನುಭವ ಹಂಚಿಕೊಂಡು ಗಮನ ಸೆಳೆದಿದ್ದಾರೆ ಕೊಲ್ಲೂರಿನ ಯುವಕ ಜಿತೇಂದ್ರ ಕುಮಾರ್.

ತನ್ನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ನಲ್ಲಿ ಚಂಡೀಗಢ ಮಾರ್ಗವಾಗಿ ತೆರಳಿ, ಭಾನುವಾರ ಲೇಹ್ ತಲುಪಿರುವ ಜಿತೇಂದ್ರ, ಭಾರತದ ಎತ್ತರದ ಮೋಟೋರೆಬಲ್ ತಾಣವಾದ ಕಾರ್ದುಂಗ್ಲಾ ಲಾ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ತೆರಳಿ ಬಳಿಕ ಶ್ರೀನಗರ ಮೂಲಕ ಊರಿನ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

ಅವರು ಕುಂದಾಪ್ರ ಕನ್ನಡದ ವಿವರಣೆಯುಳ್ಳ ವ್ಲಾಗಿಂಗ್ ಎಲ್ಲರ ಗಮನ ಸೆಳೆಯುತ್ತದೆ. ಲಡಾಕ್, ಶ್ರೀನಗರದ ವಿವಿಧೆಡೆಗಳಿಗೆ ತೆರಳುವ ಅವರು ಕುಂದಾಪ್ರ ಕನ್ನಡದಯೇ ವ್ಲಾಗ್ ಮಾಡುತ್ತಿದ್ದಾರೆ. ಅಲ್ಲದೇ ಲೇಹ್ ನಗರದಲ್ಲಿನಮ್ಮ ಕುಂದಾಪ್ರ ಎಂಬ ಟಿ-ಶರ್ಟ್ ಧರಿಸಿ ರೆಡ್ ಮಾಡಿದ್ದಾರೆ. ಕೊಲ್ಲೂರು ನಿವಾಸಿ ಜಯಾನಂದ ಹಾಗೂ ಪ್ರೇಮ ದಂಪತಿ ಪುತ್ರನಾದ ಜಿತೇಂದ್ರ ಕುಮಾರ್ ಎಲ್.ಎಲ್.ಬಿ ಪದವಿ ಮುಗಿಸಿದ್ದಾರೆ. ವಿವಿಧ ಕಿರುಚಿತ್ರಗಳಲ್ಲಿ ನಟನೆ, ಸಂಕಲನದ ಮೂಲಕವೂ ಗುರುತಿಸಿಕೊಂಡಿದ್ದಾರೆ.

ಬೈಕ್ ರೈಡಿಂಗ್ ನನ್ನ ಹವ್ಯಾಸವಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ಪ್ರತಿಯೊಂದು ರಾಜ್ಯಗಳಿಗೂ ಬೈಕ್ ರೈಡ ಮಾಡುವ ಹಾಗೂ ಅದನ್ನು ಕುಂದಾಪ್ರ ಕನ್ನಡದ ವ್ಲಾಗಿಂಗ್ ಮೂಲಕ ತೋರಿಸುವ ಆಕಾಂಕ್ಷೆ ಇದೆ

-ಜಿತೇಂದ್ರ ಕುಮಾರ್ ಕೊಲ್ಲೂರು, ಬೈಕರ್

(ಬರೆಹ: ವಿನಾಯಕ ಆಚಾರ್ಯ ಕೊಲ್ಲೂರು)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!