spot_img
Wednesday, January 22, 2025
spot_img

ಉಡುಪಿ ಜಿಲ್ಲೆಯಲ್ಲೇ ಪ್ರಥಮ: ಅಂಪಾರಿನಲ್ಲಿ ‘ಕುಂದನಾಡು ರೈತ ಉತ್ಪಾದಕರ ಕಂಪೆನಿ’ ಉದ್ಘಾಟನೆ

ಕುಂದಾಪುರ, ಜೂ.19: ಕೃಷಿ, ತೋಟಗಾರಿಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಕೃಷಿ ವಲಯವನ್ನು ಉತ್ತೇಜಿಸುವ ಕೆಲಸವೂ ನಡೆಯುತ್ತಿದೆ. ಕೃಷಿ ಕಾಲೇಜುಗಳು, ಸಂಶೋಧನ ಕೇಂದ್ರಗಳು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮದ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಿ, ಕೃಷಿಕ ಬೆಳೆದ ಉತ್ಪನ್ನಗಳಿಗೆ ಉತ್ತಮ ಧಾರಣೆ ಹಾಗೂ ಸೌಲಭ್ಯಗಳನ್ನು ಒದಗಿಸಿಕೊಡುವ ಮಹತ್ವಕಾಂಕ್ಷೆಯಿಂದ ರೈತ ಉತ್ಪಾದಕರ ಕಂಪೆನಿಗಳು ಆರಂಭಗೊಂಡಿರುವುದು ಶ್ಲಾಘನಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವಿನೊಂದಿಗೆ ಕೃಷಿ, ತೋಟಗಾರಿಕೆ, ಜಲಾನಯನ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರ ಸಹಕಾರದಲ್ಲಿ ಆರಂಭಗೊಂಡ ವಂಡ್ಸೆ ಹೋಬಳಿಯ ಕುಂದನಾಡು ರೈತ ಉತ್ಪಾದಕರ ಕಂಪೆನಿ ಜೂ. 19ರಂದು ಅಂಪಾರು ವಿದ್ಯಾದಾಯಿನಿ ಸಭಾಭವನದಲ್ಲಿ ಉದ್ಘಾಟನೆಗೊಳಿಸಿ ಮಾತನಾಡಿದರು.

ಕುಂದನಾಡು ರೈತ ಉತ್ಪಾದಕ ಕಂಪೆನಿಯ ಷೇರುಪತ್ರವನ್ನು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಿತರಿಸಿ, ‘ರೈತ’ ಎಂದು ಹೇಳಿಕೊಳ್ಳುವುದೇ ಹೆಮ್ಮೆ. ಬೇರೆ ಕ್ಷೇತ್ರಗಳ ಹುದ್ದೆಯಂತೆ ರೈತ ಎನ್ನುವುದು ಯಾವುದು ಮಾಜಿ ಆಗುವುದಿಲ್ಲ. ರೈತ ಯಾವತ್ತೂ ಶಾಶ್ವತ ಎಂದು ಹೇಳಿದ ಅವರು, ಕೇಂದ್ರ ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಿಸಿದೆ. ಈ ಕೇಂದ್ರಕ್ಕೆ ನಿವೇಶನ ಒದಗಿಸಿಕೊಡುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುವುದು ಎಂದರು.

ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಬಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇವತ್ತು ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಉತ್ತೇಜನ ನಿಗದಿತ ಮಟ್ಟದಲ್ಲಿ ಸಿಗುತ್ತಿಲ್ಲ. ಸಣ್ಣ ಹಿಡುವಳಿದಾರರು ಸೌಲಭ್ಯಗಳಿಂದ ವಂಚಿತರಾಗುವುದನ್ನು ಕಾಣುತ್ತಿದ್ದೇವೆ. ವ್ಯವಸಾಯಗಾರರಿಗಾಗಿ ಆರಂಭವಾದ ಸಹಕಾರ ಕ್ಷೇತ್ರವೂ ಇವತ್ತು ತನ್ನ ಪ್ರಾರಂಭದ ಉದ್ದೇಶದಡಿಯಲ್ಲಿ ಸಾಗುತ್ತಿಲ್ಲ. ಸೇವಾಮನೋಭಾವ ಇವತ್ತು ಕುಸಿದಿದೆ ಎನ್ನುವುದನ್ನು ಕಾಣುತ್ತಿದ್ದೇವೆ. ಕೃಷಿ ವಲಯ ಎದುರಿಸುವ ಸಮಸ್ಯೆ, ಪೂರಕ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಕಾಲಕ್ಕೆ ಕ್ರಮ ಕೈಗೊಳ್ಳಬೇಕಾದ ಅವಶ್ಯತೆ ಇರುತ್ತದೆ. ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು, ಮೌಲ್ಯವರ್ಧನೆ ಮಾಡುವುದು, ಅವಶ್ಯಕತೆಗಳನ್ನು ಕಲ್ಪಿಸುವುದು ಸಂಬಂಧಿತರ ಜವಬ್ದಾರಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ಕುಂದನಾಡು ರೈತ ಉತ್ಪಾದಕರ ಕಂಪೆನಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವ ನಂಬಿಕೆ ಇದೆ ಎಂದರು.

ರೈತರ ಉತ್ಪಾದಕರ ಸಂಸ್ಥೆಗಳ ಉತ್ಕೃಷ್ಠ ಕೇಂದ್ರ ಬೆಂಗಳೂರು ಇದರ ನಿರ್ದೇಶಕರಾದ ಡಾ.ಅಶೋಕ ಆಲೂರ, ಉಡುಪಿ ಜಿಲ್ಲಾ ಜಂಟೀ ಕೃಷಿ ನಿರ್ದೇಶಕ ಕೆಂಪೇಗೌಡ ಹೆಚ್, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರಾದ ಶ್ರೀಮತಿ ಭುವನೇಶ್ವರಿ, ಅಟಲ್ ಇನ್ಕ್ಯೊಬೇಷನ್ ಸೆಂಟರ್ ನಿರ್ದೇಶಕರಾದ ಡಾ.ಎ.ಪಿ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿರ್ದೇಶಕರುಗಳಾದ ಶರತ್ ಕುಮಾರ್ ಶೆಟ್ಟಿ ದೇವಲ್ಕುಂದ, ಚಂದ್ರಶೇಖರ ಉಡುಪ ಕೆಂಚನೂರು, ಶರತ್‌ಚಂದ್ರ ಶೆಟ್ಟಿ ಗುಲ್ವಾಡಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ವಿವೇಕ ಭಂಡಾರಿ ಗುಲ್ವಾಡಿ, ಉದಯ ಜಿ.ಪೂಜಾರಿ ಚಿತ್ತೂರು, ಸತೀಶ್ ಶೆಟ್ಟಿ ಹಕ್ಲಾಡಿ, ಗೋವಧನ್ ಶೆಟ್ಟಿ ಇಡೂರು, ವಿಜಯ ಶೆಟ್ಟಿ ಮಚ್ಚಟ್ಟು, ಅನುರಾಧ ವಿ ಮಂಜ ಸೇನಾಪುರ, ಮಲ್ಲಿಕಾ ಶೆಟ್ಟಿ ಅಂಪಾರು, ಜ್ಯೋತಿ ಶೆಟ್ಟಿ ಮೂಡುಬಗೆ, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಅಜಿತ್ ಆಚಾರ್ ಉಪಸ್ಥಿತರಿದ್ದರು.

ಉದಯಕುಮಾರ್ ಶೆಟ್ಟಿ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ವಂಡ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಉಮೇಶ್ ಶೆಟ್ಟಿ ಶಾನ್ಕಟ್ಟು ವಂದಿಸಿದರು. ಕೀರ್ತನಾ ಉಮೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಾಗಧ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!