Thursday, November 21, 2024

ಕೊಲ್ಲೂರು-ಹೆಮ್ಮಾಡಿ-ಕುಂದಾಪುರ, ಕೆರಾಡಿ-ಮಾರಣಕಟ್ಟೆ, ಕೆರಾಡಿ ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಆಗ್ರಹಿಸಿ ಎಬಿವಿಪಿಯಿಂದ ಪ್ರತಿಭಟನೆ

ಒಂದು ವಾರದಲ್ಲಿ ಬಸ್ ಓಡಿಸದಿದ್ದರೆ 5000 ವಿದ್ಯಾರ್ಥಿಗಳಿಂದ ಡಿಪೋಗೆ ಮುತ್ತಿಗೆ ಎಚ್ಚರಿಕೆ

ಕುಂದಾಪುರ, ಜೂ.11: ಕೊಲ್ಲೂರು-ಹೆಮ್ಮಾಡಿ-ಕುಂದಾಪುರ ಮತ್ತು ಕೆರಾಡಿ-ಮಾರಣಕಟ್ಟೆ-ಕುಂದಾಪುರ ಮತ್ತು ಕೆರಾಡಿ ಬೆಳ್ಳಾಲ ಕುಂದಾಪುರ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ, ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಕೊಲ್ಲೂರಿನಲ್ಲಿ ಇದ್ದು ಇದುವರೆಗೂ ಕೂಡ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ತೆರಳಲು ದಿನಾಲು ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇಲ್ಲಿ ದಿನಾಲು ಬಸ್ಸನ್ನು ಅವಲಂಬಿಸಿ ಸುಮಾರು ೧೦೦೦ ದಿಂದ ೨೦೦೦ ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ ತೆರಳಲು ಕೊಲ್ಲೂರಿನಿಂದ ಹೊರಟು ಕುಂದಾಪುರದವರೆಗೂ ಸಹ ಅನೇಕ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ, ಇಲ್ಲಿ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ ಎಂದರು.

ಜಗತ್ ಪ್ರಸಿದ್ಧ ಕೊಲ್ಲೂರಿಗೆ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಅತ್ಯಂತ ದುಃಖದ ವಿಷಯ ಹಾಗೂ ಸರಕಾರವು ಈ ಪ್ರಸಿದ್ಧ ಸ್ಥಳಕ್ಕೆ ಇಂದಿಗೂ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡದೇ ಇರುವುದು ಒಂದು ಅತ್ಯಂತ ಗಂಭೀರವಾದ ಹಾಗೂ ಮುಜುಗರದ ವಿಷಯವಾಗಿದೆ. ಕೆರಾಡಿ ಮಾರ್ಗದಲ್ಲಿ ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ 400 ವಿದ್ಯಾರ್ಥಿಗಳು, ಮಾರಣಕಟ್ಟೆ -ಕುಂದಾಪುರ ಮಾರ್ಗದಲ್ಲಿ 500 ಮತ್ತು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಪರವಾನಗಿ ಇದ್ದರೂ ಸಹ ಯಾವುದೇ ಕೆ.ಎಸ್.ಅರ್.ಟಿ.ಸಿ ಬಸ್ ಗಳು ಇದುವರೆಗೂ ಸಂಚರಿಸುತ್ತಿಲ್ಲ. ಈ ಸಮಸ್ಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಶಾಸಕರು ಕೂಡ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.

ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸದ್ದಿದ್ದಲ್ಲಿ ತಾಲೂಕು ಮಟ್ಟದಲ್ಲಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಡಿಪೋ ಮುಂದೆ ಧರಣಿ ಮಾಡಿ ಕೆ.ಎಸ್.ಅರ್.ಟಿ.ಸಿ ಎಲ್ಲಾ ಮಾರ್ಗದ ಬಸ್‌ಗಳನ್ನು ತಡೆಹಿಡಿಯುತ್ತೇವೆ ಎಂದು ಪ್ರತಿಭಟನಾ ನಿರತರ ಎಚ್ಚರಿಸಿದ್ದಾರೆ.

ಮನವಿಯನ್ನು ಸಹಾಯಕ ಆಯಕ್ತರು ಮತ್ತು ತಹಸೀಲ್ದಾರರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವಿದ್ಯಾರ್ಥಿ ಪ್ರಮುಖರಾದ ಧ್ವನಿ, ಭಂಡಾರ್ಕಾಸ್ ಕಾಲೇಜಿನ ನಾಗೇಶ್, ಶ್ರೀನಿಧಿ, ಬಿ.ಬಿ ಹೆಗ್ಡೆ ಕಾಲೇಜಿನ ಅನುಷಾ, ಧನುಷ್, ಬಸ್ರೂರು ಶಾರದಾ ಕಾಲೇಜಿನ ರಂಜಿತ್,ದೀಪಾ, ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನ ಅಭಿಷೇಕ್, ಆರ್.ಎನ್ ಶೆಟ್ಟಿ ಕಾಲೇಜಿನ ನಿತಿನ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!