Sunday, September 8, 2024

ಮೇ 31 ತಂಬಾಕು ವಿರೋಧಿ ದಿನಾಚರಣೆ

ಇಂದಿನ ಅಂಕಣದಲ್ಲಿ ತಂಬಾಕು ಸೇವನೆ, ಗುಟ್ಕಾ, ನಶ್ಯ ಇದರ ದುಷ್ಪರಿಣಾಮಗಳ ಬಗ್ಗೆ ಬರೆದಿರುವೆ ಕಾರಣ ಮೇ 31 ತಂಬಾಕು ವಿರೋಧಿ ದಿನಾಚರಣೆ.

ಬಹಳಷ್ಟು ಜನರಿಗೆ ಈ ಬಗ್ಗೆ ತಿಳಿವಳಿಕೆಯೇ ಇಲ್ಲ .ತಂಬಾಕು ಸೇವನೆಯಿಂದ ಮನೆಯವರಿಗೆ ಸಮಸ್ಯೆ ಆಗುವುದಕ್ಕಿಂತ ಬೀಡಿ ಮತ್ತು ಸಿಗರೇಟು  ಸೇದುವವರಿಗೆ ಅಥವಾ ಗುಟ್ಕಾ ತೆಗೆದುಕೊಳ್ಳುವವರಿಗೆ ,ನಶ್ಯ ಸೇದುವವರಿಗೆ ಸಮಸ್ಯೆ ಹೆಚ್ಚು .ನೆನಪಿಡಿ ಒಂದು ತುಂಡು ಬೀಡಿ ಸಿಗರೇಟಿನಲ್ಲಿ ೪೦೦೦ ಜೀವಕ್ಕೆ ಹಾನಿಕಾರಕ ಕೆಮಿಕಲ್ಸ್ ಗಳು ಇರುತ್ತವೆ . ೬೫ ಕ್ಯಾನ್ಸರ್  ತರುವ ಕೆಮಿಕಲ್ಸ್ ಗಳು. ಗುಟ್ಕಾ ಸಿಗರೇಟು ಗಳಲ್ಲಿ “ನಿಕೋಟಿನ್ “ಎಂಬ ಪದಾರ್ಥ ಇರುತ್ತದೆ .ಇದು ಮನುಷ್ಯನ  ರಕ್ತದ ಒತ್ತಡ ಹೆಚ್ಚಿಸುವುದು ಹಾಗೆ ಹೃದಯಾಘಾತಕ್ಕೆ ಕಾರಣ ಮಾಡುವುದು .ಆತಂಕವನ್ನು ಸೃಷ್ಟಿಸುವುದು.ಎಷ್ಟು ಸೇದಿದರೂ ಇನ್ನು ಬೇಕು ಬೇಕು ಎಂಬ ವ್ಯಸನವನ್ನು ಕೂಡ ಇದು ಸೃಷ್ಟಿಸುತ್ತದೆ .

ನಿಕೋಟಿನ್ ,ಟಾರ್ ,ಅಮೋನಿಯಾ ,ಕ್ಯಾಡ್ಮಿಯಂ ಮುಂತಾದ ಪದಾರ್ಥಗಳು ಮನುಷ್ಯನ ಮೆದುಳು ,ನರಕೋಶಗಳು ,ಲಿವರ್ ಮತ್ತು ಕಿಡ್ನಿ ಇದರ ಸಮಸ್ಯೆಗಳಿಗೆ ಕಾರಣವಾಗಿದೆ .೨೦೩೦ ರ ಒಳಗೆ ಆರರಲ್ಲಿ ಒಂದು ಸಾವಿಗೆ ತಂಬಾಕು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ .ಇಂದಿಗೂ ತಿಂಗಳೊಂದಕ್ಕೆ ಐವತ್ತು ಲಕ್ಷ ಜನ ಈ ತಂಬಾಕಿಗೆ ಬಲಿಯಾಗುತ್ತಿದ್ದಾರೆ .ಬಾಯಿಯ ಕ್ಯಾನ್ಸರ್ ,ಅನ್ನನಾಳದ ಕ್ಯಾನ್ಸರ್ ,ಗಂಟಲಿನ ಕ್ಯಾನ್ಸರ್ ,ಹೊಟ್ಟೆಯ ಕ್ಯಾನ್ಸರ್ ,ಕರುಳಿನ ಕ್ಯಾನ್ಸರ್ ಇವಕ್ಕೆಲ್ಲ ಕಾರಣ ಗುಟ್ಕಾ ಮತ್ತು ಸಿಗೆರಟೆನಲ್ಲಿ  ಇರುವ ತಂಬಾಕು .

ತಂಬಾಕಿನ ಬಳಕೆ ಪ್ರಾರಂಭಿಸಲು ಕಾರಣಗಳೇನು?

ಸಾಧಾರಣವಾಗಿ ಹದಿಹರೆಯ ವಯಸ್ಸಿನಲ್ಲಿ ತಂಬಾಕಿನ ಬಳಕೆ ಪ್ರಾರಂಭವಾಗುತ್ತದೆ. ಇದರ ಬಳಕೆಯನ್ನು ಪ್ರಾರಂಭಿಸುವುದಕ್ಕೆ ಪ್ರಭಾವಬೀರುವ ಅಂಶಗಳನ್ನು ಈ ಕೆಳಗೆ ನಮೂದಿಸಿದಂತೆ ವಿಂಗಡಿಸಿ ಅರ್ಥಮಾಡಿಕೊಳ್ಳಬಹುದು:

1. ಬಯಾಲಾಜಿಕಲ್‌(ಜೈವಿಕ) ಪ್ರಭಾವಗಳು: ಹದಿಹರೆಯ ವಯಸ್ಸಿನಲ್ಲಿ ಕಂಡುಬರುವ ಮುಖ್ಯ ಬದಲಾವಣೆಗಳೆಂದರೆ,ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಹಾಗೂ ಸ್ಥಾಪಿಸಲು ಪ್ರಯತ್ನಿಸುವುದು ತನ್ನದೇ ಆದ ವ್ಯಕ್ತಿತ್ವ ಸ್ಥಾಪಿಸಿ, ತೋರಿಸುವುದು ದೈಹಿಕ ಬದಲಾವಣೆಗಳ ಜೊತೆಗೆ ಮಾನಸಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವುದು

2. ಮಾನಸಿಕ ಪ್ರಭಾವಗಳು: ತನ್ನ ಭಾವನೆಗಳ ಮೇಲೆ ಹತೋಟಿಯಲ್ಲಿಡಲು ಸಾಧ್ಯವಾಗದಿರುವುದು, ಅಪಾಯಕಾರಿ/ ಮೊಂಡುತನದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಇತರೆ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದು

3. ಸಾಮಾಜಿಕ ಪ್ರಭಾವಗಳು: ಪೋಷಕರ ಪ್ರಭಾವ, ಅನಕ್ಷರತೆ, ತನಗೆ ಆದರ್ಶವೆನಿಸುವ ವ್ಯಕ್ತಿಗಳ ಅನುಕರಣೆ, ಇತ್ಯಾದಿ.

ತಂಬಾಕು ಬಿಡಲು ಏನು ಮಾಡಬಹುದು ?

ತಂಬಾಕು ಸೇದುವವರು ಮನಸ್ಸಿನಲ್ಲಿ ಒಂದು ಡೇಟ್ ನಿರ್ಧಾರ ಮಾಡಿಕೊಳ್ಳಿ .ಆ ಡೇಟ್ ನಿಂದ ತಂಬಾಕನ್ನು ಬಿಡುವ ದೃಢವಾದ ಘೋಷಣೆಯನ್ನು ಎಲ್ಲರೊಂದಿಗೆ ಮಾಡಿ .ಆ ತಾರೀಕಿನಿಂದ ಕಿಸೆಯಲ್ಲಿ ಲೈಟರ್ ಇಟ್ಟುಕೊಳ್ಳುವುದು ಅಥವಾ ಸಿಗರೇಟ್ ಪ್ಯಾಕ್ ಇಟ್ಟುಕೊಳ್ಳುವುದು ಕೂಡಲೇ ನಿಲ್ಲಿಸಿ ಬಿಡಿ.ಹೀಗೆಯೇ  ಈ ಹಿಂದೆ ಸಿಗರೇಟ್ ಸೇದಲು ಹೋಗುತ್ತಿದ್ದ ಅಂಗಡಿ ,ಸಿಗರೇಟ್ ಸೇದುತ್ತಿದ್ದ ಸ್ನೇಹಿತರ ಜೊತೆಗೆ ಹೋಗುವುದನ್ನು ನಿಲ್ಲಿಸಿ ಬಿಡಿ .ಸೇದುವ ಆಸೆ ಆಗುವಾಗ ಸೇದುವ ಆಸೆಯನ್ನು ಮೊದಲು ಮುಂದೂಡಿ  .ನಿಮ್ಮ ಮನಸ್ಸನ್ನು ಬೇರೆಡೆಗೆ ಎಳೆದುಕೊಂಡು ಹೋಗಿ .ಉದಾಹರಣೆಗೆ ಯಾರಾದರೂ ಮಿತ್ರರಿಗೆ ಫೋನ್ ಮಾಡುವುದು ಅಥವಾ ಸಿಗರೇಟ್ ನಿಷೇಧಿತ ಜಾಗಕ್ಕೆ ಹೋಗಿಬಿಡುವುದು ಅಥವಾ ಗಟಗಟನೆ ನೀರು ಕುಡಿದು ಬೇರೆ ಏನಾದರೂ ಯೋಚನೆ ಮಾಡಲು ಪ್ರಾರಂಭಿಸುವುದು .ಏಕೆಂದರೆ ಹಲವಾರು ಸರಿ ಈ ಆಸೆ ಕ್ಷಣಿಕವಾದದ್ದು ,ಆ ಕ್ಷಣವನ್ನು ದಾಟಿ ಬಿಟ್ಟರೆ ಪುನಃ ಆಸೆ ಇನ್ನೊಂದು ಗಂಟೆಯೋ ಎರಡು ಗಂಟೆಯೋ ಮರುಕಳಿಸುವುದಿಲ್ಲ .ನಿಮ್ಮ ಉಸಿರಾಟವನ್ನು ಗಮನಿಸಿ ದೀರ್ಘ ನಿಟ್ಟುಸಿರುಗಳನ್ನು ತೆಗೆದುಕೊಳ್ಳಲು ಶುರು ಮಾಡಿ ,ಮನಸ್ಸಿಗೆ ಆರಾಮವಾಗುತ್ತದೆ, ಮನಸ್ಸು ಬೇರೆಡೆಗೆ ಹೋಗುತ್ತದೆ .ಹಲವು ಬಾರಿ ನಮ್ಮ ಬಾಯಲ್ಲಿ ಪೋಲೊ ಮಿಂಟ್ ಅಥವಾ ಚೂಯಿಂಗ್ ಗಮ್ ಇಟ್ಟುಕೊಂಡರೆ ಈ ಸಿಗರೇಟ್ ಸೇದುವುದು ,ಗುಟ್ಕಾ ತಿನ್ನುವುದು ತಪ್ಪುತ್ತದೆ .ಇದೆಲ್ಲ ಮಾಡಿಯೂ ನಿಮ್ಮಿಂದ ಸಿಗರೇಟ್ ಬಿಡಲು ಆಗದೇ ಇದ್ದರೆ ವೈದ್ಯಕೀಯ ಸಹಾಯವನ್ನು ಪಡೆಯಿರಿ .ಸಿಗರೇಟಿನ ಆಸೆಯಾಗುವುದು “ನಿಕೋಟಿನ್” ಎಂಬ ಪದಾರ್ಥದಿಂದ ಈ ನಿಕೋಟಿನ್ ಪದಾರ್ಥವನ್ನು ವೈದ್ಯಕೀಯವಾಗಿ ಪ್ರತ್ಯೇಕವಾಗಿ ಶೇಖರಿಸಲ್ಪಟ್ಟ ನಿಕೋಟಿನ್ ಚೂಯಿಂಗ್ ಗಮ್ ಅಥವಾ ನಿಕೋಟಿನ್ ಪ್ಯಾಚಸ್ ಗಳಲ್ಲಿ ಲಭ್ಯವಿದೆ .ಇದರ ಡೋಸ್ ಅನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬರಲು ವೈದ್ಯರು ನಿಮಗೆ ಸಹಾಯ ಮಾಡುತ್ತಾರೆ .ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ವೈದ್ಯಕೀಯ ಶಾಪ್ಗಳಲ್ಲಿ ನಿಕೋಟಿನ್ ಚೂಯಿಂಗ್ ಗಮ್ಮ ಅನ್ನು ತೆಗೆದುಕೊಳ್ಳಬೇಡಿ ಏಕೆಂದರೆ ಈ ಸಿಗರೇಟು ಬೀಡಿ ಬಿಟ್ಟು ಅದನ್ನು ಅಭ್ಯಾಸ ಮಾಡಿಕೊಂಡರೆ “ದೆವ್ವವನ್ನು ಬಿಟ್ಟು ಭೂತವನ್ನು ಹಿಡಿದುಕೊಂಡ “ಎಂದ ಹಾಗೆ ಆಗುತ್ತದೆ.

ಹಾಗೆಯೇ ನಿಕೋಟಿನ್  ಆಸೆ ಕಡಿಮೆ ಮಾಡುವಂತಹ ಕೆಲವು ಮಾತ್ರೆಗಳು ಲಭ್ಯ .ಬುಪ್ರೋಪಿಯನ್, ನೋರ್ಟ್ರಿಪ್ತಿಲಿನ್ ಮುಂತಾದ ಖಿನ್ನತೆ ನಿವಾರಕ ಮಾತ್ರೆಗಳು,ವರ್ನೆಕ್ಲಿನ್ ಎಂಬ ಮಾತ್ರೆ ಇವುಗಳನ್ನು  ಕೆಲವೊಮ್ಮೆ ವೈದ್ಯರು ಬಳಸುತ್ತಾರೆ .ಒಟ್ಟಿನಲ್ಲಿ ನಾವು ಏನಿಸಿದ ಹಾಗೇ ಬೀಡಿ ಸಿಗರೇಟ್ ಗುಟ್ಕಾ ಬಿಡುವುದು ಅಷ್ಟು ಸುಲಭವಲ್ಲ .ಇದು ಮೆದುಳಿನ ಕಾಯಿಲೆ ,ಇದನ್ನು ಬಿಟ್ಟಾಗ ಹಲವಾರು ಸರಿ ಮನಸ್ಸಿಗೆ ಕಿರಿಕಿರಿ, ಮಲಬದ್ಧತೆ ,ಬೇರೆಯವರ ಮೇಲೆ ಸಿಟ್ಟು ,ನಿದ್ರಾಹೀನತೆ, ಮನಸ್ಸಿಗೆ ಟೆನ್ಷನ್ ಮುಂತಾದ ಹಿಂತೆಗೆತದ ಚಿಹ್ನೆಗಳೂ ಉಂಟಾಗುತ್ತದೆ ಆದ್ದರಿಂದ ವೈದ್ಯರ ಸಹಾಯದಿಂದ ಅದನ್ನು ಬಿಡುವುದು ಒಳ್ಳೆಯದು .

ಈ ವರುಷ ವಿಶ್ವ ತಂಬಾಕು ರಹಿತ ದಿನದ ಧ್ಯೇಯ ವಾಕ್ಯ  “ತಂಬಾಕಿನಿಂದ ಪರಿಸರವನ್ನು ಸಂರಕ್ಷಿಸಿ “ಎಂದು .

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ ಸಿಗರೇಟು ಸುತ್ತುವುದಕ್ಕಾಗಿ ಎಳುಮಿಲ್ಲಿಯನ್ ಟನ್ ಪೇಪರ್ ಬಳಸಲಾಗುತ್ತದೆ.ಒಂದು ಕೆಜಿ ತಂಬಾಕನ್ನು ಹದಾಗೊಳಿಸಲು ಇಪತ್ತು ಕೆಜಿ ಮರ ಬೇಕೆಂದು ಅಂದಾಜು ಮಾಡಲಾಗಿದೆ.

ಒಂದೆಡೆ ತಂಬಾಕು ಬೆಳೆ ತಾನು ಬೆಳೆದ ಪ್ರದೇಶದ ಫಲವತ್ತತೆಯನ್ನೇ ನಾಶಪಡಿಸಿ ಆ ಪ್ರದೇಶವನ್ನು ಮರಳುಗಾಡನ್ನಾಗಿಸುತ್ತದೆ. ಮತ್ತೊಂದೆಡೆ ಒಂದು ಕೆ ಜಿ ತಂಬಾಕು ಎಲೆ ಸಂಸ್ಕರಿಸಲು ಐದರಿಂದ ಎಂಟು ಕೆ ಜಿ ಉರುವಲು ಸೌದೆ ಬೇಕಾಗುತ್ತದೆ. ಒಟ್ಟಾರೆ ವಾಣಿಜ್ಯ ಬೆಳೆ ಎಂದೇ ಪರಿಗಣಿಸಲ್ಪಡುವ ತಂಬಾಕು ತನ್ನ ಈ ಗುಣ-ಲಕ್ಷಣಗಳಿಂದ ಪರಿಸರದ ಶತ್ರು ಎನಿಸಿದೆ .ಹಾಗೆಯೇ ಎಷ್ಟೋ ಪ್ರಾಣಿ ಪಕ್ಷಿಗಳು ಮೀನುಗಳು ಸಿಗರೇಟು ತುಂಡು, ಬೀಡಿ ತುಂಡು,ಗುಟ್ಕಾ ಪ್ಯಾಕೆಟ್ ಗಳನ್ನೂ ಆಕಸ್ಮಿಕವಾಗಿ ತಿಂದು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತವೆ.ಸಿಗರೇಟ್ ಆರೋಗ್ಯಕ್ಕೆ ಹಾನಿಕರ. ಮಾತ್ರವಲ್ಲ ಸೇದಿ ಎಸೆದ ಮೇಲೆ ಪರಿಸರಕ್ಕೂ ಅದು ಮಾರಕ. ಜಗತ್ತಿನಾದ್ಯಂತ ಅಪಾರ ಪ್ರಮಾಣದಲ್ಲಿ ಸಿಗರೇಟ್ ಬಳಕೆಯಾಗ್ತಿದೆ, ದಿನೇ ದಿನೇ ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಸಿಗರೇಟ್ ಉರಿಸಿದ ಬಳಿಕ ರಾಶಿ ರಾಶಿ ಬೂದಿ, ಬಳಸಿ ಬಿಸಾಡಿದ ಸಿಗರೇಟ್ ತುಂಡುಗಳ ರಾಶಿ ಎಲ್ಲಾ ಕಡೆ ಬಿದ್ದಿರುತ್ತೆ. ಪ್ರತಿದಿನ ಉತ್ಪತ್ತಿಯಾಗುತ್ತಿರುವ ಟನ್ ಗಟ್ಟಲೆ ಸಿಗರೇಟ್ ಬೂದಿ ಹಾಗೂ ಸಿಗರೇಟಿನ ಅವಶೇಷದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಸಿಗರೇಟ್ ತುಂಡುಗಳನ್ನು ಸೆಲ್ಯುಲೋಸ್ ಆಸಿಟೋಸ್ ಎಂಬ ಸಿಂಥೆಟಿಕ್ ಪಾಲಿಮರ್​ನಿಂದ ನಿಂದ ತಯಾರಿಸಲಾಗಿದೆ. ಇದು ಪೂರ್ತಿಯಾಗಿ ಕೊಳೆತು ಗೊಬ್ಬರವಾಗಲು 18 ತಿಂಗಳುಗಳಿಂದ 10 ವರ್ಷ ಸಮಯ ಬೇಕು. ಸೆಲ್ಯುಲೋಸ್ ಆಸಿಟೇಟ್ ಜೈವಿಕವಲ್ಲದ ಒಂದು ಪ್ಲಾಸ್ಟಿಕ್ ಫಿಲ್ಟರ್ ಆಗಿದ್ದು, ಪರಿಸರಕ್ಕೆ ಮಾರಕವಾಗುತ್ತಿದೆ.ದಿ ಪಯೋನಿಯರ್’ ವರದಿ ಪ್ರಕಾರ ಭಾರತವೊಂದರಲ್ಲೇ ಪ್ರತಿ ವರ್ಷ 100 ಬಿಲಿಯನ್ ಗೂ ಅಧಿಕ ಸಿಗರೇಟ್ ತುಂಡುಗಳ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರತಿದಿನ 31 ಲಕ್ಷ ಸಿಗರೇಟ್ ತುಂಡುಗಳು ಉತ್ಪಾದನೆಯಾಗುತ್ತವೆ.‘ಸಿಗರೇಟ್ ತ್ಯಾಜ್ಯ ಪರಿಸರಕ್ಕೆ ಅತ್ಯಂತ ಹಾನಿ ಮಾಡುತ್ತದೆ. ಇವುಗಳಿಂದ ಕ್ಯಾನ್ಸರ್ ಬರುವ ಅಪಾಯವಿದೆ, ನೀರಿನಲ್ಲಿ ಮಿಶ್ರಣವಾದ್ರೆ ಅದನ್ನು ಕುಡಿದವರಿಗೆ ಆರೋಗ್ಯದ ತೊಂದರೆ ತಪ್ಪಿದ್ದಲ್ಲ. ಜಗತ್ತಿನಾದ್ಯಂತ ತಾಪಮಾನ ಏರಿಕೆ ಹಾಗೂ ಪರಿಸರ ಮಾಲಿನ್ಯದ ಮುಖ್ಯ ಕಾರಣಗಳಲ್ಲಿ ಸಿಗರೇಟು ತಂಬಾಕು ಸೇವನೆ ಕೂಡ ಮುಖ್ಯ ಪಾತ್ರ ವಹಿಸಿದೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!