spot_img
Monday, March 23, 2026
spot_img

ಮೃತ ಶಿಲ್ಪಾ ಮನೆಗೆ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಭೇಟಿ

ಕುಂದಾಪುರ: ಅಖಿಲ ಭಾರತೀಯ ಸಂತ ಸಮಿತಿ ಪ್ರದೇಶ ಪ್ರಮುಖ್, ಓಂ ಶ್ರೀ ಮಠ ಮಂಗಳೂರು ಇಲ್ಲಿನ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಅವರು ಉಪ್ಪಿನಕುದ್ರುವಿನಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಶಿಲ್ಪಾ ದೇವಾಡಿಗ ಮನೆಗೆ ಭೇಟಿ ನೀಡಿ ಮೃತ ಶಿಲ್ಪಾಳ ಪೋಷಕರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭ ಶಿಲ್ಪ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಇದು ಬಹುಸಂಖ್ಯಾತ ಹಿಂದೂ ಸಮಾಜವನ್ನು ಅಲ್ಪ ಸಂಖ್ಯಾತರನ್ನಾಗಿಸಿ ಮಾಡುವ ಉದ್ದೇಶದಿಂದ ನಡೆಸುವ ಕೃತ್ಯವಾಗಿದೆ. ಈ ಪ್ರಕರಣದ ಆರೋಪಿಗೆ ರಾಷ್ಟ್ರದ್ರೋಹ ಅಪರಾಧದ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಯಾಗುವಂತೆ ಮಾತನಾಡಿದ್ದೇವೆ. ಈ ಪ್ರಕರಣದಿಂದ ಯಾವುದೇ ಆಮಿಷ, ಒತ್ತಡ ಬಂದರೂ ಕೂಡಾ ಹಿಂದೆ ಸರಿಯಬೇಡಿ. ಅಪರಾಧಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಮೃತ ಶಿಲ್ಪಾಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಒಂದು ಹೆಣ್ಣು ಎಂದರೆ ಒಂದು ಪರಂಪರೆ. ಒಂದು ಪರಂಪರೆಯೆ ಕಳಚಿದಂತಾಗಿದೆ. ಅನ್ಯಮತೀಯರ ಇಂತಹ ಕೃತ್ಯಗಳ ಬಗ್ಗೆ ಹಿಂದು ಸಮಾಜದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು. ಪ್ರಾರಂಭದಲ್ಲಿ ತಿದ್ದಿ ಸರಿ ದಾರಿಗೆ ತರಬೇಕು. ಈ ಬಗ್ಗೆ ವಿಹಿಂಪ, ಬಜರಂಗದಳ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಜಾಗರೂಕವಾಗಿದ್ದುಕೊಂಡು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ಏನೇ ಒತ್ತಡ ಬಂದರೂ ಕೂಡಾ ನಮ್ಮ ಮಠದ ಗಮನಕ್ಕೆ ತನ್ನಿ, ನಿಮ್ಮ ನೋವಿನಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಇದೆ ಎಂದರು.

ಈ ಸಂದರ್ಭದಲ್ಲಿ ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾನ ಮಹೀ ಸರಸ್ವತಿ, ಸ್ವಾಮಿ ಶ್ರೀ ಸಾಯಿ ಈಶ್ವರ್ ದ್ವಾರಕಾ ಮಹಿ ಮಠ ಶಂಕರಪುರ ಉಡುಪಿ, ವಿಹಿಂಪ ಮುಖಂಡರಾದ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!