Sunday, September 8, 2024

ಧಾರ್ಮಿಕ ಒಲವು, ಅದರ್ಶ ಸದ್ಗುಣಗಳಿಂದ ಸಂತೃಪ್ತ ಜೀವನ-ಡಾ.ಗೋವಿಂದ ಬಾಬು ಪೂಜಾರಿ

ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿಯ ಜೀರ್ಣೋದ್ಧಾರ ಪ್ರತಿಷ್ಠಾಪನೆಯ ದಶಮಾನೋತ್ಸವ

ಹಿಲಿಯಾಣ: ಯುವ ಜನತೆ ದೈವ-ದೇವರುಗಳ ಬಗ್ಗೆ ಧಾರ್ಮಿಕ ಒಲವು, ಗುರು ಹಿರಿಯರಿಗೆ ಗೌರವವನ್ನು ನೀಡುವ ಆದರ್ಶ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ವ್ಯಕ್ತಿ ತನ್ನ ಸಂಪಾಧನೆಯ ಸ್ವಲ್ಪ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ನೀಡುವ ಮೂಲಕ ಜೀವನದಲ್ಲಿ ಸಂತೃಪ್ತಿಯನ್ನು ಕಾಣ ಬಹುವುದು ಎಂದು ಉಪ್ಪುಂದ ಶ್ರೀವರಲಕ್ಷ್ಮೀ

ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.
ಅವರು ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿಯ ಜೀರ್ಣೋದ್ಧಾರ ಪ್ರತಿಷ್ಠಾಪನೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಬಡತನದಲ್ಲಿ ಹುಟ್ಟಿ ಬೆಳೆದು ಸತತ ಪರಿಶ್ರಮದಿಂದ ದುಡಿದು ಹಲವು ಉದ್ಯಮಗಳನ್ನು ಸ್ಥಾಪಿಸಿ, ಸಾವಿರಾರೂ ಜನರಿಗೆ ಉದ್ಯೋಗ ನೀಡುವುದರೊಂದಿಗೆ ಅಶಕ್ತ ಕುಟುಂಬಗಳಿಗೆ ನೆರವು ನೀಡಿ,ಸಮಾಜಮುಖಿ ಸೇವೆಯ ಮೂಲಕ ಜೀವನದಲ್ಲಿ ಸಂತೃಪ್ತಿ ಪಡೆಯುವಲ್ಲಿ ದೈವ ದೇವರ ಅನುಗ್ರಹ ಪ್ರಾಪ್ತಿಯಿಂದ ಸಾಧ್ಯವಾಗಿದೆ.ಎಂದರು.

ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ,ಯರುಕೋಣೆ ಅಧ್ಯಕ್ಷತೆ ವಹಿಸಿ,
ಹಲವಾರು ವರ್ಷಗಳಿಂದ ಅಜೀರ್ಣವಾಸ್ಥೆಯಲ್ಲಿದ್ದ ಗರೋಡಿಯನ್ನು ಸರ್ಕಾರದ ಅನುಧಾನ, ಜನಪ್ರತಿನಿಧಿಗಳ ಸಹಕಾರ,ಭಕ್ತಾಧಿಗಳ ಕೊಡುಗೆಗಳೊಂದಿಗೆ ೭ ತಿಂಗಳು ೧೩ ದಿನಕ್ಕೆ ಗರೋಡಿ ಜೀರ್ಣೋದ್ಧಾರಗೊಂಡು 2012 ಏ 17 ರಂದು ಪುನರ್ ಪ್ರತಿಷ್ಠಾಪನೆಗೊಂಡಿದೆ. ಗರೋಡಿಯ ಮುಂಭಾಗದಲ್ಲಿ ಶಾಶ್ವತ ತಗಡು ಚಪ್ಪರ, ಸ್ವಾಗತ ಗೋಪುರ, ಅವರಣಗೋಡೆ, ಬ್ರಹ್ಮಾನಂದ ರಂಗವೇದಿಕೆ, ಭೋಜನಾಶಾಲೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು,ಪ್ರತಿ ಸಂಕ್ರಮಣದಂದು ಅನ್ನಸಂತರ್ಪಣೆ ಸೇವೆ ಭಕ್ತಾಧಿಗಳ ಸಹಕಾರದಲ್ಲಿ ನಡೆಯುತ್ತಿದೆ. ಗರೋಡಿಯ ದಶಮಾನೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು, ಸನ್ಮಾನ ಹಾಗೂ ಅನಾರೋಗ್ಯ ಪೀಡಿತ ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಿಸಲಾಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಈ ನಿಟ್ಟಿನಲ್ಲಿ ಊರ-ಪರವೂರ ಭಕ್ತಾಧಿಗಳು, ದಾನಿಗಳ ಸಹಕಾರದ ಅಗತ್ಯವಿದೆ ಎಂದರು.

ವೇ.ಮೂ.ವೆಂಕಟೇಶ್ ಭಟ್,ಹಳ್ಳಿ,ಹಿಲಿಯಣ, ಗರೋಡಿ ಮುಕ್ಕಾಲಿ ಎಚ್.ತಾರಾನಾಥ ಶೆಟ್ಟಿ ಹಿಲಿಯಾಣ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ,ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ,ಸೂರ್‍ಗೋಳಿ,ಅನಿಲ್‌ಕುಮಾರ್ ಶೆಟ್ಟಿ ಹೊರ್ಲಿಮಕ್ಕಿ, ಗರೋಡಿ ಅರ್ಚಕ ಶೀನ ಪೂಜಾರಿ,ಕರುಣಾಕರ ಪೂಜಾರಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಹಿಲಿಯಣ ಶ್ರೀಬ್ರಹ್ಮ ಬೈದರ್ಕಳ ಗರೋಡಿಯ ಜೀರ್ಣೋದ್ಧಾರ ಪ್ರತಿಷ್ಠಾಪನೆಯ ದಶಮಾನೋತ್ಸವದ ಪ್ರಯುಕ್ತ ಸನ್ಮಾನ ಹಾಗೂ ಅನಾರೋಗ್ಯ ಪೀಡಿತ ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಿಸಲಾಯಿತು.

ಗಣೇಶ್ ಅರಸಮ್ಮಕಾನು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ನಾಗರತ್ನ,ಮಾನ್ವಿತಾ,ನಾಗವೇಣಿ ಪ್ರಾರ್ಥಿಸಿದರು.ಮಂಜುನಾಥ ಹಿಲಿಯಣ ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಪೂಜಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!