spot_img
Wednesday, January 22, 2025
spot_img

ಉಡುಪಿ: ಕ್ರೋಮಾ ಎಲೆಕ್ಟ್ರಾನಿಕ್ಸ್ ಮೆಗಾಸ್ಟೋರ್ ಆರಂಭ

ಉಡುಪಿ: ಟಾಟಾ ಗ್ರೂಪ್‍ನ ಭಾರತದ ಮೊಟ್ಟಮೊದಲ ಓಮ್ನಿ- ಚಾನೆಲ್ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಕ್ರೋಮಾ, ಉಡುಪಿ- ಮಣಿಪಾಲ ಹೆದ್ದಾರಿಯ ಕಾವೇರಿ ಕಾಂಪ್ಲೆಕ್ಸ್ ನಲ್ಲಿ ತನ್ನ ಹೊಸ ಮಳಿಗೆ ಆರಂಭಿಸುವ ಮೂಲಕ ಕರ್ನಾಟಕದಲ್ಲಿ ತನ್ನ ವಿಸ್ತರಣೆಯನ್ನು ಘೋಷಿಸಿದೆ.

ರಾಜ್ಯದ ಒಂಬತ್ತನೇ ಮಳಿಗೆಯಾಗಿರುವ ಉಡುಪಿ ಮಳಿಗೆ 550 ಕ್ಕೂ ಬ್ರ್ಯಾಂಡ್‍ಗಳಾದ್ಯಂತ 16000 ಕ್ಕೂ ಅಧಿಕ ಉತ್ಪನ್ನಗಳನ್ನು ನೀಡಲಿದೆ. 10,500 ಚದರ ಅಡಿಗಳಷ್ಟು ವಿಸ್ತಾರವಾದ ಜಾಗದಲ್ಲಿ, ಎರಡು ಹಂತಗಳಲ್ಲಿ ಹರಡಿದೆ, ಗ್ರಾಹಕರು ಟಿವಿಗಳು, ಸ್ಮಾರ್ಟ್‍ಫೋನ್‍ಗಳು, ಡಿಜಿಟಲ್ ಸಾಧನಗಳು, ಕೂಲಿಂಗ್ ಪರಿಹಾರಗಳು, ಗೃಹೋಪಯೋಗಿ ಉಪಕರಣಗಳು, ಆಡಿಯೋ ಮತ್ತು ಸಂಬಂಧಿತ ಪರಿಕರಗಳು ಸೇರಿದಂತೆ ಇತ್ತೀಚಿನ ಶ್ರೇಣಿಯ ಉತ್ಪನ್ನಗಳನ್ನು ಅನ್ವೇಷಿಸುವಾಗ ಹೆಚ್ಚಿನ ಜ್ಞಾನವುಳ್ಳ ಕ್ರೋಮಾ ತಜ್ಞರಿಂದ ಶಾಪಿಂಗ್ ಸಹಾಯವನ್ನು ಪಡೆಯಬಹುದು ಎಂದು ಕ್ರೋಮಾ ಇನ್‍ಫಿನಿಟಿ ರೀಟೈಲ್ ಲಿಮಿಟೆಡ್‍ನ ಎಂಡಿ ಮತ್ತು ಸಿಇಓ ಅವಿಜಿತ್ ಮಿತ್ರ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕ್ರೋಮಾ ಉಡುಪಿ ಮಳಿಗೆಯು ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ರಾತ್ರಿ 9.00 ರವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!