Sunday, September 8, 2024

ಕುಂದಾಪುರ ಇ.ಎಸ್.ಐ ಡಿಸ್ಪೆನ್ಸರಿ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ

ಕುಂದಾಪುರ: ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ ಸಿ‌ಐಟಿಯು ಕುಂದಾಪುರ ನೇತೃತ್ವದಲ್ಲಿ ಕುಂದಾಪುರ ಇ.ಎಸ್.ಐ ಡಿಸ್ಪೆನ್ಸರಿ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು.

ಕಾರ್ಮಿಕ ರಾಜ್ಯ ವಿಮಾ ಯೋಜನೆಯ (ಇ.ಎಸ್.ಐ) ಇದರ ಕುಂದಾಪುರ ಡಿಸ್ಪೆನ್ಸರಿಯಲ್ಲಿ ಈ ಭಾಗದ ಸುಮಾರು 10 ಸಾವಿರಕ್ಕೂ ಮಿಕ್ಕಿ ಕಾರ್ಡುದಾರರು ಹಾಗೂ ಅವರ ಕುಟುಂಬ ಸದಸ್ಯರು ವಿಮಾ ಯೋಜನೆಯ ಸದಸ್ಯರಾಗಿದ್ದು ಇಷ್ಟೊಂದು ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಡಿಸ್ಪೆನ್ಸರಿಯಲ್ಲಿ ಖಾಯಂ ವೈದ್ಯರು ಇಲ್ಲ, ಪ್ರಸ್ತುತ ತಾತ್ಕಾಲಿಕ ವ್ಯವಸ್ಥೆಯಲ್ಲಿ 15 ದಿನಗಳಿಗೊಮ್ಮೆ ದಾವಣಗೆರೆ ಇ‌ಎಸ್‌ಐ ವಲಯದಿಂದ ಒಬ್ಬೊಬ್ಬರು ವಿಮಾ ವೈದ್ಯಾಧಿಕಾರಿಗಳನ್ನು ಕಾರಾವಿ ಚಿಕಿತ್ಸಾಯ ಕುಂದಾಪುರ ಕರ್ತವ್ಯಕ್ಕೆ ನೇಮಿಸಲಾಗುತ್ತಿದ್ದು, ಖಾಯಂ ವೈದ್ಯರನ್ನು ನೇಮಕ ಮಾಡಬೇಕು, ಟೈ-ಆಪ್ ಆಸ್ಪತ್ರೆಗಳನ್ನು ನಿಯಂತ್ರಿಸುವಲ್ಲಿ ಆಡಳಿತ ವಿಮಾ ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು, ಕಳೆದ ಮೂರ್‍ನಾಲ್ಕು ದಶಕಗಳಿಂದ ಕಾರಾವಿ ಚಿಕಿತ್ಸಾಲಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೊದಲ ಮಹಡಿಯಲ್ಲಿದ್ದು, ಅನಾರೋಗ್ಯ ಪೀಡಿತರಿಗೆ, ವಯೋವೃದ್ದರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಚಿಕಿತ್ಸಾಲಯವನ್ನು ಇ‌ಎಸ್‌ಐ ಇಲಾಖೆಯ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು, ಇದಕ್ಕಾಗಿ ಕೆಳ ಅಂತಸ್ತಿನಲ್ಲಿ ಸರ್ಕಾರಿ ನಿವೇಶನವನ್ನು ಸಂಬಂಧಪಟ್ಟ ಇಲಾಖೆಗಳು ಮಂಜೂರು ಮಾಡುವಂತೆ ಕ್ರಮ ಕೈಗೊಳ್ಳಬೇಕು, ಇ.ಎಸ್.ಐ ಸ್ಥಳೀಯ ಕಛೇರಿಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗಾಗಿ ೪೫-೫೦ ಕಿ.ಮೀ ದೂರದ ಉಡುಪಿಗೆ ಹೋಗಬೇಕಾದ ಅನಿವಾರ್ಯತೆಯಿದ್ದು ಕುಂದಾಪುರದಲ್ಲಿ ಇ.ಎಸ್.ಐ ಸ್ಥಳೀಯ ಕಛೇರಿ ತೆರೆಯಬೇಕು, ಬಸ್ರೂರು ಅಥವಾ ಕಂಡ್ಲೂರು ಭಾಗದಲ್ಲಿ ಇ.ಎಸ್.ಐ ಇನ್ನೊಂದು ಡಿಸ್ಪೆನ್ಸರಿ ತೆರೆಯಬೇಕು, ಕಾರಾವಿ ಚಿಕಿತ್ಸಾಲಯದ ಸಮಯವನ್ನು ಬೆಳಿಗ್ಗೆ 10ಗಂಟೆಯಿಂದ ಸಂಜೆ 5 ಗಂಟೆವರೆಗೆ ಪರಿಷ್ಕರಿಸಬೇಕು, ಇ.ಎಸ್.ಐ ಚಿಕಿತ್ಸಾಲಯ ಖಾಲಿ ಹುದ್ದೆಗಳ ಭರ್ತಿ ಮಾಡಬೇಕು, ಕುಂದಾಪುರಕ್ಕೆ ಸುಸಜ್ಜಿತ ಲ್ಯಾಬೋರೇಟರಿ, ಪ್ರಯೋಗ ತಜ್ಞರನ್ನು ಒದಗಿಸಬೇಕು, ಉಡುಪಿ ಜಿಲ್ಲೆಗೊಂದು ಸುಸಜ್ಜಿತ ಇ.ಎಸ್.ಐ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷರಾದ ವಿ.ನರಸಿಂಹ, ಕಾರ್ಯದರ್ಶಿ ಎಚ್.ನರಸಿಂಹ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಿಪಿ‌ಐ‌ಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿ‌ಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ ಕೋಣಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ-ಸೇವೆಗಳು ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!