Sunday, September 8, 2024

ಆನ್ಲೈನ್ ಜೂಜು ಒಂದು ಮಾನಸಿಕ ರೋಗವೇ?

22 ವರುಷದ ವೈದ್ಯಕೀಯ ವಿದ್ಯಾರ್ಥಿ ಒಬ್ಬ 32 ಲಕ್ಷ ಸಾಲ ಮಾಡಿದ್ದೇನೆ ಎಂದು ನನ್ನ ಕ್ಲಿನಿಕ್‍ನಲ್ಲಿ ಹೇಳಿದಾಗ ನಿಜವಾಗಿ ಬೆಚ್ಚಿ ಬಿದ್ದೆ. ಹೌದು ಇತ್ತೀಚೆಗೆ ನಮ್ಮ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಂದು ಹೊಸ ಖಾಯಿಲೆ ಆನ್ಲೈನ್ ಜೂಜು. covid ಸಂದರ್ಭದಲ್ಲಿ ಈ ಅಭ್ಯಾಸ ಕಾಳ್ಗಿಚ್ಚಿನಂತೆ ಹಬ್ಬಿ ನಿಂತಿದೆ. ಈ ಆನ್ಲೈನ್ ಗೇಮ್‍ಗಳು covid ಸಂದರ್ಭದಲ್ಲಿ ಮನೆಯಲ್ಲಿ ಕುಳಿತಿದ್ದ ಯುವಕರು, ಕೆಲಸ ಕಳೆದುಕೊಂಡ ಮದ್ಯ ವಯಸ್ಕರು, ಸಮಾಜದಿಂದ ಪ್ರತ್ಯೇಕಿಸಲ್ಪಟ್ಟ ಹಿರಿಯ ನಾಗರಿಕರು, ಹಣದ ಸಮಸ್ಯೆಯಿಂದ ಪರದಾಡುತ್ತಾ ಇದ್ದ ಮಹಿಳೆಯರು ಹೀಗೆ ಸಮಾಜದ ವಿವಿಧ ವರ್ಗದ ಜನರ ಕಾಡುವ ಸಮಸ್ಯೆ ಆಗಿದೆ.

ನಮ್ಮ ಆಸ್ಪತ್ರೆಯ ಕ್ಲಿನಿಕ್‍ನಲ್ಲಿ ಕೂಡ ಈ ಸಮಸ್ಯೆಯಿಂದ ಬಳಲುವ ಅನೇಕರು ಸಹಾಯ ಕೇಳಿ ಬಂದಿದ್ದಾರೆ. ಹಲವಾರು ಜನ ಸಾಲದ ಹೊರೆಯಿಂದ ಖಿನ್ನರಾಗಿ ಇನ್ನೂ ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡಿ ಮನೋವೈದ್ಯಕೀಯ ಚಿಕಿತ್ಸೆಗೆ ಬಂದಿದ್ದಾರೆ. ಮೂವತ್ತು ವರುಷದಿಂದ ನಲವತ್ತು ವರುಷದ ವಯಸ್ಕರು ಹೆಚ್ಚಾಗಿ ಚಿಕಿತ್ಸೆಗೆ ಬರುತ್ತಾ ಇದ್ದಾರೆ.

ಆನ್ಲೈನ್ ಜೂಜು, ಕ್ರಿಕೆಟ್ ಬೆಟ್ಟಿಂಗ್ ಮತ್ತು ಶೇರು ಮಾರುಕಟ್ಟೆಯಲ್ಲಿ ದಿನನಿತ್ಯ ಟ್ರೇಡ್ ಮಾಡಲು ಹೋಗಿ ಹಣ ಕಳೆದುಕೊಂಡು ಬರುವವರು ಅನೇಕರು.

ಇಂತಹ ಪರಿಸ್ಥಿತಿಯಲ್ಲಿ ಆಘಾತಕಾರಿ ಅಂಕಿಅಂಶಗಳು ಬೆಳಕಿಗೆ ಬರುತ್ತ ಇವೆ. ಭಾರತ ದೇಶದಲ್ಲಿ 2024 ರ ವೇಳೆಗೆ ಸುಮಾರು 1.4 ಬಿಲಿಯನ್ ಡಾಲರ್ ಹಣ rummy market ನಲ್ಲಿ ಸಂಚರಿಸುತ್ತದೆ ಅಂತೆ. ಗ್ರಾಮೀಣ ಭಾರತದಲ್ಲಿ ಮೊಬೈಲ್ ಉಪಯೋಗಿಸುವ ಜನರ ಸಂಖ್ಯೆ ಜಾಸ್ತಿ ಆಗುತ್ತಾ ಇದ್ದಂತೆ ಆನ್ಲೈನ್ ಜೂಜು ಜಾಸ್ತಿ ಆಗುತ್ತಾ ಇದೆ.

ಈ ಜೂಜು ನಾವು ಮನೋ ವೈದ್ಯರು ಇದನ್ನು “ವರ್ತನಾ ವ್ಯಸನ” ಎಂದು ಕರೆಯುತ್ತೇವೆ. ಮದ್ಯ, ಮಾದಕ ದ್ರವ್ಯ ವ್ಯಸನದಲ್ಲಿ ನೋಡುವಂತೆ ಇಲ್ಲಿಯೂ ಕೂಡ ಮೊದಲು ಜೂಜು ಕೇವಲ ಮಿತ್ರರ ಒತ್ತಡ ಅಥವಾ “ಹಾಗೆ ಸುಮ್ಮನೆ” ಕುತೂಹಲ ಅಂತ ಪ್ರಾರಂಭವಾಗಿ ಬರುಬರುತ್ತಾ ಕಳೆದುಕೊಂಡ ಹಣ ವಾಪಾಸುಗಳಿಸಬೇಕು ಎಂದೋ ಅಥವಾ competitionಅನ್ನುವಂತೆ ಗೆಲ್ಲಲೇಬೇಕು ಎಂಬ ಹಪಾಹಪಿಯಿಂದಲೋ ಈ ಅಭ್ಯಾಸ ಮುಂದುವರೆಯುತ್ತದೆ. ಹೆಚ್ಚಿನವರು ಹಣಕ್ಕಾಗಿ ಆನ್ಲೈನ್ ಜೂಜು ಆಡಿದರೇ ಕೆಲವರು ಖುಷಿ ಗಾಗಿ ಅಥವಾ ಬೇಸರ ಕಳೆಯಲು ಈ ಜೂಜು ಶುರು ಮಾಡುತ್ತಾರೆ. ಬರುಬರುತ್ತಾ ದಿನ ಪೂರ್ತಿ ಆನ್ಲೈನ್ ಗೇಮ್‍ನಲ್ಲಿ ನಿರತರಾಗಿ ತಮ್ಮ ಕೆಲಸ, ಓದು, ಸಾಮಾಜಿಕ ಜೀವನ ಎಲ್ಲದರಲ್ಲೂ ಸಮಸ್ಯೆಗಳು ಉಂಟಾಗುತ್ತದೆ. ಲಕ್ಷ ಗಟ್ಟಲೆ ಹಣ ಕಳೆದುಕೊಳ್ಳುತ್ತಾರೆ. ಮೊಬೈಲ್ ಫೋನ್ ಬಿಟ್ಟಿರಲು ಮನಸ್ಸು ಒಪ್ಪುವುದಿಲ್ಲ. ಫೋನ್ಇಲ್ಲದಿದ್ದರೆ ಚಡಪಡಿಕೆ, ಸಿಟ್ಟು, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.
ಮೊದಲೇ ಹೇಳಿದಂತೆ ಮದ್ಯ ಮಾದಕ ದ್ರವ್ಯಗಳು ಸಿಗದೆ ಇದ್ದಾಗ ವ್ಯಕ್ತಿಯಲ್ಲಿ ಉಂಟಾಗುವ ಹಿಂತೆಗೆತದ ಚಿಹ್ನೆಗಳನ್ನು ಹೋಲುವ ಚಿಹ್ನೆಗಳು ಫೋನ್ ಅಥವಾ ಆನ್ಲೈನ್ ಗೇಮ್ ಸಿಗದೆ ಇದ್ದಾಗ ಇವರುಗಳಲ್ಲಿ ಉಂಟಾಗುತ್ತದೆ. ಹಾಗೆಯೇ ಮದ್ಯ ಮಾದಕ ದ್ರವ್ಯ ವ್ಯಸನದಂತೆ ಬರುಬರುತ್ತಾ ಈ ಗೇಮ್ ನ ಜೊತೆಗೆ ಸಮಯ ಕಳೆಯುವುದು ಹೆಚ್ಚಾಗುತ್ತದೆ. ಇದನ್ನು ತಾಳಿಕೆ ಎಂದು ನಾವು ಮನೋವೈದ್ಯರು ಕರೆಯುತ್ತೇವೆ. ಮನೋವೈದ್ಯರು ನೋಡುವಾಗ ಈ ವ್ಯಕ್ತಿಗಳು “ಗೇಮ್ ಇಲ್ಲದಿದ್ದರೆ ಜೀವನ ಇಲ್ಲ “ಅನ್ನುವ ಸ್ಥಿತಿಯಲ್ಲಿ ಇರುತ್ತಾರೆ. ಹಲವಾರು ಜನ ಸಮಾಜದಿಂದ ದೂರ ಹೋಗಿ ಮೊಬೈಲ್‍ನ ಜೊತೆಯಲ್ಲಿ ಜೀವನ ನಡೆಸುವ ಪರಿಸ್ಥಿತಿ. ಹಾಗೆಯೇ ಮದ್ಯ ಮಾದಕ ದ್ರವ್ಯ ವ್ಯಸನದಂತೆ ಇದು ಕೂಡ ಮನೆಯ ವಾತಾವರಣ, ಆರ್ಥಿಕ ಪರಿಸ್ಥಿತಿ ಹದೆಗೆಡುವಂತೆ ಮಾಡುತ್ತದೆ.

ವ್ಯಸನ ಚಿಕಿತ್ಸೆಯಲ್ಲಿ ಉಪಯೋಗಿಸುವಂತೆ ಇಲ್ಲಿಯೂ ಕೂಡ cognitive behaviour therapy ಅಂದರೆ ಅರಿವಿನ ವರ್ತನಾ ಚಿಕಿತ್ಸೆ ಉಪಯೋಗ ಮಾಡುತ್ತೇವೆ. ವ್ಯಕ್ತಿ ಹೇಗೆ ಈ ಅಭ್ಯಾಸಗಳ ಮೇಲೆಸ್ವನಿಯಂತ್ರಣ ಸಾಧಿಸಬಹುದು? ಹಾಗೆಯೇ ಜೂಜು ಆಟ ಆಡಲೇ ಬೇಕು ಎನ್ನುವಾಗ ಆ “ತವಕ” ನಿರ್ವಹಣೆ ಹೇಗೆ ಮತ್ತು ಹಾಗೆಯೇ ಮನೆಯವರು ಇಂತಹ ಸಂದರ್ಭದಲ್ಲಿ ಏನು ಮಾಡಬಹುದು? ಈ ಬಗ್ಗೆ ಕೂಡ ಕುಟುಂಬ ಚಿಕಿತ್ಸೆ ಉಪಯೋಗಿಸುತ್ತೇವೆ.

ಹದಿಹರೆಯದ ವಯಸ್ಸಿನ ಮಕ್ಕಳು ಈ ಅಭ್ಯಾಸಗಳಿಗೆ ಬಲಿ ಆದಾಗ ಅವರ ಮನಸ್ಸಿಗೆ ಮುದ ನೀಡುವ ಹಾಗೂ ಅವರ “ಗುರುತಿಸುವಿಕೆಯ ಹಪಾಹಪಿ”ಯನ್ನು ತೃಪ್ತಿ ಪಡಿಸುವ ಪರ್ಯಾಯ ವ್ಯವಸ್ಥೆಯನ್ನು ಮನೋವೈದ್ಯರು ಮಾಡಬೇಕಾಗುತ್ತದೆ. ಪರ್ಯಾಯ ಜೀವನ ಶೈಲಿಯ ಬೆಳವಣಿಗೆ, ಸಮಸ್ಯೆ ಪರಿಹರಿಸುವ ಕಲೆ, ಜೀವನ ಕೌಶಲ್ಯಗಳ ಅಭಿವೃದ್ದಿ ಇವುಗಳು ಈ ಚಿಕಿತ್ಸೆಯಲ್ಲಿ ಬಹಳ ಸಹಾಯಕಾರಿ. ಆನ್ಲೈನ್ ಜೂಜು ಇದಕ್ಕೆ ಬಲಿಯಾದ ಜನರಿಗಾಗಿ ವಿದೇಶಗಳಲ್ಲಿ gamblers anonymous ಎಂಬ alcoholic anonymous ತರಹದ ಸ್ವಸಹಾಯ ಗುಂಪು ಚಿಕಿತ್ಸೆ ಲಭ್ಯವಿದೆ.

ಇತ್ತೀಚಿನ ದಿನಗಳಲ್ಲಿ ಮದ್ಯ ಮಾದಕ ದ್ರವ್ಯ ಚಿಕಿತ್ಸೆಯಲ್ಲಿ ಉಪಯೋಗಿಸುವ naltrexone ಎಂಬ ಮಾತ್ರೆ ಹಾಗೇ ssri ಎಂಬ ಖಿನ್ನತೆ ನಿವಾರಕ ಮಾತ್ರೆಗಳನ್ನು ಕೂಡ ಈ ಜೂಜು ಖಾಹಿಲೆಗೆ ಬಲಿಯಾದ ಜನರಲ್ಲಿ ಉಪಯೋಗಿಸುತ್ತೇವೆ.

ನಮ್ಮ ಅಲ್ಪ ಅನುಭವದಂತೆ ಈ ಜೂಜು ಒಮ್ಮೆಲೆ ನಿಲ್ಲಿಸಲು ಸಾಧ್ಯವಿಲ್ಲ. ವ್ಯಸನ ಚಿಕಿತ್ಸೆಯ ಸೂತ್ರಗಳಲ್ಲಿ ಒಂದಾದ harm reduction approach ಅಂದರೆ ಸಮಸ್ಯೆ ಕಡಿಮೆ ಮಾಡುವ ಒಂದು ಪ್ರಯತ್ನದಂತೆ ಜೂಜು ಆಡುವವವರು ಮೊದಲೇ ನಿರ್ಧರಿಸಿ ನಿಯಮಿತವಾಗಿ ಆಟದ ಸಮಯ ನಿಯಂತ್ರಣ ಅಥವಾ ಇಂತಿಷ್ಟೇ ಹಣ ವಿನಿಯೋಗಿಸುವ ಒಂದು limit ಇಟ್ಟುಕೊಂಡು ಆಡುವುದು ಬೇರೆ ಚಿಕಿತ್ಸೆಗಳಿಗೆ ಹೋಲಿಸಿದರೆ ಫಲಕಾರಿ ಆಗಿದೆ.

ಯುವ ಜನತೆ ಗಮನಿಸಬೇಕಾದ ಅಂಶ ಎಂದರೆ prevention is better than cure.. ಈ ಅಭ್ಯಾಸಕ್ಕೆ ಬಲಿ ಆದರೆ ಹೊರಗೆ ಬರುವುದು ಕಷ್ಟ.ಇದು ಒಂದು ಚಕ್ರವ್ಯೂಹ.

ಸರ್ಕಾರಗಳು ಎಚ್ಚೆತ್ತುಕೊಂಡು ಈ ಆನ್ಲೈನ್ ಜೂಜು ನಿಯಂತ್ರಿಸದೆ ಇದ್ದರೆ ಮುಂದೆ ಬಹಳಷ್ಟು ಅಮಾಯಕರು ಈ ವ್ಯಸನಕ್ಕೆ ಬಲಿಯಾಗುವುದು ಮತ್ತು ಚಿಕಿತ್ಸೆ ಸಿಗದೆ ಪರಿದಾಡುವುದು ನೋಡಬೇಕಾಗುತ್ತದೆ.

ನಿಮ್ಹಾನ್ಸ್ ಸಂಸ್ಥೆ ಈಗಾಗಲೇ ಈ ರೋಗದ ಪರಿಪೂರ್ಣ ಚಿಕಿತ್ಸೆಗಾಗಿ shut clinic( sevice for healthy use of technology ) ಎಂಬ ಒಂದು ಕ್ಲಿನಿಕ್ ತೆಗೆದಿದೆ. ತಮಿಳುನಾಡು ಸರಕಾರ ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಆನ್ಲೈನ್ ಗೇಮ್ ಇದಕ್ಕೆ ಬಲಿಯಾದವರ ನೆರವಿಗಾಗಿ ಚಿಕಿತ್ಸಾ ಕೇಂದ್ರ ತೆರೆಯುತ್ತಾ ಇದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!