Sunday, September 8, 2024

ಮಾಂಡಿ ಮೂರುಕೈ: ವಾರದ ಸಂತೆ ಆರಂಭ

ಮಡಾಮಕ್ಕಿ: ಗ್ರಾಮೀಣ ಭಾಗದ ಸುತ್ತ ಮುತ್ತಲಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯಲಿದೆ. ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಸ್ಥಳೀಯರು ವಾರದ ಸಂತೆಯಲ್ಲಿ ವಸ್ತುಗಳನ್ನು ಖರೀದಿಸುವುದರೊಂದಿಗೆ ಪ್ರೋತ್ಸಾಹ ನೀಡಬೇಕು. ಕೃಷಿಕರು ತಾವು ಬೆಳೆಸಿದ ತರಕಾರಿ, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಹೇಳಿದರು.

ಅವರು ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಡಿಮೂರುಕೈ ಪೇಟೆಯಲ್ಲಿ ಪ್ರತಿ ಗುರುವಾರದಂದು ನಡೆಯಲಿರುವ ನಮ್ಮೋರ ವಾರದ ಸಂತೆಗೆ ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಪ್ರಥಮ ಗ್ರಾಹಕಿಯಾಗಿ ತರಕಾರಿ ಖರೀದಿಸುವ ಮೂಲಕ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಮಡಾಮಕ್ಕಿ, ಶಿರಂಗೂರು, ಹಂಜ, ಕಾರಿಮನೆ, ಯಡಮಲೆ, ಕಾಸನ್‌ಮಕ್ಕಿ, ಹಳೆಸೋಮೇಶ್ವರ, ಕೆರ್ಜಾಡಿ, ಗುಡ್ಡೆಯಂಗಡಿ, ಅರಸಮ್ಮಕಾನು, ಶೇಡಿಮನೆ, ಬೆಪ್ಡೆ, ಆರ್ಡಿ, ಕೊಂಜಾಡಿ ಸೇರಿದಂತೆ ಸುತ್ತ ಮುತ್ತಲಿನ ಜನರಿಗೆ ವಾರದ ಸಂತೆಯಿಂದ ಹೆಚ್ಚಿನ ಪ್ರಯೋಜವಾಗಲಿದೆ, ಮುಂದಿನ ದಿನಗಳಲ್ಲಿ ಪ್ರತಿ ಗುರುವಾರದಂದು ನಡೆಯಲಿರುವ ವಾರದ ಸಂತೆಯಲ್ಲಿ ವ್ಯಾಪಾರಸ್ಥರಿಗೆ ಇನ್ನಷ್ಟು ಅವಕಾಶವಿದೆ, ಎಲ್ಲರ ಸಹಕಾರ,ಪ್ರೋತ್ಸಾಹ ಅಗತ್ಯವಿದೆ ಎಂದರು.

ಮಡಾಮಕ್ಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಯಾನಂದ ಪೂಜಾರಿ ಮಡಾಮಕ್ಕಿ, ಹಾಗೂ ಸದಸ್ಯರು, ಪಿಡಿ‌ಓ ವಿಲಾಸಿನಿ, ಕಾರ್ಯದರ್ಶಿ ಭಾಸ್ಕರ ಶೆಟ್ಟಿ, ಸ್ಥಳೀಯರು, ಕೃಷಿಕರು ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!