Sunday, September 8, 2024

ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ‘ಯುವಸಿರಿ’ ಪ್ರಶಸ್ತಿ ಪ್ರದಾನ

ಉಡುಪಿ: ಕಾರ್ಕಳದ ಅಜೆಕಾರ್‌ನಲ್ಲಿ ಡಾ. ಶೇಖರ್ ಅಜೆಕಾರ್ ಇವರು ಕಳೆದ 23 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಆದಿ ಗ್ರಾಮೋತ್ಸವ ಜ.25ರಂದು ಜರುಗಿತು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ನೆಲ್ಲಿಕ್ಕಟ್ಟೆ ಸಮೀಪದ ಚೂರಿಪ್ಪಳ್ಳ ಎಂಬಲ್ಲಿರುವ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯಾದ ಡಾ. ವಾಣಿಶ್ರೀ ಕಾಸರಗೋಡು ಇವರಿಗೆ ವೈದ್ಯಕೀಯ ಹಾಗೂ ಸಾಹಿತ್ಯಕ್ಷೇತ್ರದ ಸಾಧನೆಗಾಗಿ ಯುವಸಿರಿ ಎಂಬ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉಡುಪಿ ವಹಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವಾಣಿಶ್ರೀ ವೈದ್ಯಕೀಯ ವೃತ್ತಿಯ ಜೊತೆ ಸಾಹಿತ್ಯವನ್ನು ಸ್ವೀಕರಿಸಿ ನಿರಂತರ ಪರಿಶ್ರಮದಿಂದ ಇಷ್ಟು ಬೆಳೆದು ನಿಂತಿದ್ದೇನೆ. ಕಾಸರಗೋಡಿನ ಎಲ್ಲಾ ಕನ್ನಡ ಮನಸ್ಸುಗಳ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದ ಅವರು, ಯುವ ಮನಸ್ಸುಗಳಿಗೆ ಸಾಹಿತ್ಯದ ಸಂಪತ್ತನ್ನು ನೀಡುವ ಮೂಲಕ, ಸಮಾಜದಲ್ಲಿ ಸಂಸ್ಕೃತಿಯನ್ನು ಸಂವರ್ಧನೆಗೊಳಿಸುವ ಕೆಲಸವನ್ನು ಡಾ. ಶೇಖರ್ ಅಜೆಕಾರ್ ಅವರು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಎಂದರು.

ಕಾಸರಗೋಡಿನ ಗುರುರಾಜ್ ಎಮ್ಆ. ರ್ ಅವರನ್ನು ಗಡಿನಾಡು ಕನ್ನಡಿಗ ಎಂದು ಗೌರವಿಸಲಾಯಿತು. ಹಲವಾರು ಗಣ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!