Thursday, November 21, 2024

ತೆಂಗು ಉತ್ಪನ್ನ ಮೌಲ್ಯವರ್ಧನೆಗೆ ಒತ್ತು ನೀಡಿ-ಡಾ.ವೈ.ನವೀನ್ ಭಟ್

ಕುಂದಾಪುರದಲ್ಲಿ ಕಲ್ಪರಸ ಸುಸಜ್ಜಿತ ಮಾರಾಟ ಮಳಿಗೆ ಉದ್ಘಾಟನೆ

ಕುಂದಾಪುರ: ಯೋಚನೆಯೊಂದನ್ನು ಯೋಜನೆಯನ್ನಾಗಿಸುವುದು ಸುಲಭ. ಆದರೆ ಅದನ್ನು ಕಾರ್ಯಾನುಷ್ಟಾನಗೊಳಿಸುವುದು ಕಷ್ಟ. ಸಂಬಂಧಪಟ್ಟ ಇಲಾಖೆಗಳ ಪರವಾನಿಗೆ ಪಡೆದುಕೊಂಡು, ತೆಂಗು ಬೆಳೆಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಲ್ಪರಸ ಪ್ರಥಮ ಮಾರಾಟ ಮಳಿಗೆ ಆರಂಭವಾಗುತ್ತಿರುವುದು ಸಂತೋಷದ ವಿಚಾರ. ಎಲ್ಲ ರೈತರು ಸಾಂಘಿಕವಾಗಿ ಅಭಿವೃದ್ದಿಯ ಚಿಂತನೆ ಮಾಡಬೇಕು. ಏಕಬೆಳೆಯ ಮೇಲೆ ರೈತರು ಅವಲಂಬಿತರಾಗದೆ ಉತ್ಪನ್ನಗಳ ಮೌಲ್ಯವರ್ಧನೆಯ ಬಗ್ಗೆ ಆಲೋಚಿಸಬೇಕು ಎಂದು ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಹೇಳಿದರು.

ಉಡುಪಿ ಕಲ್ಪರಸ ಕೋಕೊನಟ್ ಎಂಡ್ ಆಲ್ ಸ್ಪೈಸಸ್ ಪ್ರೊಡ್ಯುಸರ್ ಕಂಪನಿ ಲಿ., (ಉಕಾಸ) ಕುಂದಾಪುರದಲ್ಲಿ ಆರಂಭಿಸಲಾದ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳ ಸುಸಜ್ಜಿತ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಉದ್ಯಮ ವಿಸ್ತರಣೆಯಾದಂತೆ ಗುಣಮಟ್ಟಕ್ಕೆ ಒತ್ತು ನೀಡಬೇಕು. ಸೂಕ್ತ ವಿಮೆಯನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ತೆಂಗುಬೆಳೆಗಾರರನ್ನು ಇಂತಹ ಯೋಜನೆಗಳು ತಲುಪಬೇಕು. ಈ ವಿನೂತನ ಉದ್ಯಮ ಯಶಸ್ವಿಯಾಗಲಿ ಎಂದರು.

ಕೃಷಿ ಇಲಾಖೆ ಉಡುಪಿ ಜಿಲ್ಲೆ ಇದರ ಜಂಟಿ ಕೃಷಿ ನಿರ್ದೇಶಕ ಹೆಚ್.ಕೆಂಪೇಗೌಡ, ಜಿ.ಪಂ.ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಅಬಕಾರಿ ಇಲಾಖೆಯ ಅಶೋಕ್ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘ ಉಡುಪಿ ಪ್ರದೇಶ ರಿ., ಇದರ ಅಧ್ಯಕ್ಷ ನವೀನಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಸಂಜೀವ ನಾಯ್ಕ, ತರಬೇತುದಾರರಾದ ಕೃಷ್ಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಉಕಾಸ ಅಧ್ಯಕ್ಷ ಸತ್ಯನಾರಾಯಣ ಉಡುಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಸ್ಕರ ಉಡುಪ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!