spot_img
Thursday, May 7, 2026
spot_img

ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ :ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ‘ಬೆಸ್ಟ್ ಸ್ಟೂಡೆಂಟ್ ಆಫ್ ದಿ ಇಯರ್- 2021’ ಪ್ರಶಸ್ತಿ ಪ್ರದಾನ

ಕುಂದಾಪುರ: ಕೋವಿಡ್-೧೯ ಸಂಕ್ರಮಣ ಸ್ಥಿತಿಯಲ್ಲಿ ಮಕ್ಕಳ ಕಲಿಕೆಗೆ ಹೆಚ್ಚಿನ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗದ ಕುಂದಾಪುರ ಶಾಖೆಯ ವತಿಯಿಂದ ನೀಡಲಾದ ಬೆಸ್ಟ್ ಸ್ಟುಡೆಂಟ್ ಆಫ್ ದಿ ಇಯರ್-2021 ಪ್ರಶಸ್ತಿ ಪ್ರದಾನ ಸಮಾರಂಭವು ಬಿದ್ಕಲ್ಕಟ್ಟೆ ಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೌತಮ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.

ಭಾರತೀಯ ಜೀವವಿಮಾ ನಿಗಮದ ಮುಖ್ಯ ವ್ಯವಸ್ಥಾಪಕರಾದ ಯು ನಾರಾಯಣಗೌಡ ಅವರು ಎಲ್‌ಐಸಿ ಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಇಲಾಖಾಧಿಕಾರಿಯಾಗಿ, ಬಿದ್ಕಲ್ ಕಟ್ಟೆಯ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ್ ಆಚಾರ್ಯ ಆಗಮಿಸಿದ್ದರು.

ಸಭೆಯಲ್ಲಿ ಭಾರತೀಯ ಜೀವವಿಮಾ ನಿಗಮದ ಮುಖ್ಯ ವ್ಯವಸ್ಥಾಪಕರಾದ ಯು.ನಾರಾಯಣ ಗೌಡ, ಎಲ್ಲೈಸಿಯ ಕುಂದಾಪುರ ವಿಭಾಗದ ಸಹಾಯಕ ಶಾಖಾ ವ್ಯವಸ್ಥಾಪಕರಾದ ಜಿ. ಶ್ರೀನಿವಾಸ್, ಎಲ್ ಐ ಸಿ ಅಭಿವೃದ್ಧಿ ಅಧಿಕಾರಿ ಸುದರ್ಶನ ನಾಯಕ್ ಎ, ಬಿದ್ಕಲ್ ಕಟ್ಟೆ ಸಿ.ಆರ್.ಪಿ ನಾಗರಾಜ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯರಾದ ಉದಯ ಕುಮಾರ್ ಶೆಟ್ಟಿ, ಸಹ ಶಿಕ್ಷಕರಾದ ರಾಜೀವ ಕುಲಾಲ, ಸತೀಶ ಶೆಟ್ಟಿಗಾರ್, ಶಂಕರ ದೇವಾಡಿಗ, ಸಹ ಶಿಕ್ಷಕಿಯರಾದ ಚಿತ್ರಾಕುಮಾರಿ, ಶ್ಯಾಮಲಾ, ಸುಕನ್ಯ, ರಶ್ಮಿ, ಅವಕಾಶ ಫೌಂಡೇಶನ್ ಶಿಕ್ಷಕಿ ಪವಿತ್ರ ಹೆಗ್ಡೆ, ಜ್ಞಾನದೀಪ ಶಿಕ್ಷಕಿ ಮಹಾಲಕ್ಷ್ಮಿ, ಅತಿಥಿ ಶಿಕ್ಷಕಿಯರಾದ ನಾಗರತ್ನ, ಭಾರತಿ, ಗೌರವ ಶಿಕ್ಷಕಿಯರಾದ ಶೋಭಿತ, ಅಕ್ಷತಾ, ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಸೌಮ್ಯ, ದೀಪಿಕಾ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ರಾಜೀವ ಕುಲಾಲ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!