Sunday, September 8, 2024

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಬೆಳ್ಳಿ ಹಬ್ಬ ಹಾಗೂ ಶತಮಾನೋತ್ಸವ ಸಂಭ್ರಮ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 66 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಸರ್ಪು ಸದಾನಂದ ಪಾಟೀಲ್, ನಿವೃತ್ತ ಮುಖ್ಯೋಪಾಧ್ಯಾಯರು, ಚೇರ್ಕಾಡಿ, ಉಡುಪಿಯ ಸದಾನಂದ ಶೆಣೈ ಪರ್ಕಳ, ಗಂಗೊಳ್ಳಿಯ ಡಾ. ಕಾಶೀನಾಥ ಪೈ, ಬ್ರಹ್ಮಾವರದ ಸೂರ್ಯನಾರಾಯಣ ಸೋಮಯಾಜಿ ದಂಪತಿಗಳು ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು.
ಸೂತ್ರಕ್ರೀಡೆಯ ಗಾರುಡಿಗರಾದ ದೇವಣ್ಣ ಪದ್ಮನಾಭ ಕಾಮತ್ ಮತ್ತು ಕೊಗ್ಗ ದೇವಣ್ಣ ಕಾಮತ್ ರ ತೈಲಚಿತ್ರ ಗಳನ್ನು ಅತಿಥಿಗಳು ಅನಾವರಣಗೊಳಿಸಿದರು. ನನ್ನ ದೃಷ್ಟಿಯಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪೂಜಾ ತೀರ್ಥಹಳ್ಳಿ, ದ್ವಿತೀಯ ಸ್ಥಾನ ಸೃಗ್ವಿ ಸತೀಶ, ನನ್ನ ಸೂತ್ರದ ಗೊಂಬೆ ಆನ್ ಲೈನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪೂರ್ವಿಕ ಆರ್. ತಾಳಿಕೋಟಿ, ದ್ವಿತೀಯ ಸ್ಥಾನ ಶ್ರೇಯಸ್ ಪೈ, ಸಮಾಧಾನಕರ ಬಹುಮಾನವಾಗಿ ಸಂಜನಾ ಶೆಟ್ಟಿ, ಸೀಮಾ ಬಾಳಿಗಾ ಕಾಮತ್ ಮತ್ತು ಶತಮಾನೋತ್ಸವದ ವಿಶೇಷ ಬಹುಮಾನವಾಗಿ ಮಂಡ್ಯ ಗೊಂಬೆಯಾಟ ತಂಡದ ರೂವಾರಿ ಮೂರ್ತಾಚಾರ್ಯ ಎನ್ ಟಿ. ರವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ತೈಲ ಚಿತ್ರ ರಚಿಸಿದ ಚಿತ್ರಕಲಾ ಶಿಕ್ಷಕರಾದ ರಾಜಶೇಖರ್ ತಾಳಿಕೋಟೆ ದಂಪತಿಯವರನ್ನು ಹಾಗೂ ಖ್ಯಾತ ಗಾಯಕ ಉದಯ ಪ್ರಭು, ಭಟ್ಕಳ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಉಪ್ಪಿನಕುದ್ರು ಗೊಂಬೆಯಾಟದ ಹಿರಿಯ ಸೂತ್ರಧಾರಿ ದಿ. ವಾಮನ್ ಪೈ ಯವರ ಭಾವಚಿತ್ರವನ್ನು ಅವರ ಪುತ್ರ ಸತೀಶ್ ಪೈ ಯವರು ಭಾಸ್ಕರ್ ಕಾಮತ್ ರಿಗೆ ಹಸ್ತಾಂತರಿಸಿದರು. ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಕಲಾವಿದರನ್ನು ಈ ವೇದಿಕೆಯಲ್ಲಿ ಸತ್ಕರಿಸಲಾಯಿತು.

ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿ, ಕುಂದಾಪುರ ದವರ ವಿಷ್ಣು ಸಹಸ್ರನಾಮದವರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗೊಂಬೆಯಾಟ ಮಂಡಳಿಯ ಭಾಗವತ ಉಮೇಶ್ ಸುವರ್ಣ ಹಾಗೂ ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉದಯ ಪ್ರಭು, ಭಟ್ಕಳ ಇವರಿಂದ ಭಕ್ತಿ ಪುಷ್ಪಾಂಜಲಿ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!