Sunday, September 8, 2024

ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ: ನೂತನ ಪದಾಧಿಕಾರಿಗಳ ಪದಪ್ರದಾನ


ಕುಂದಾಪುರ: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ಹದಿನಾರನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಸೆ. 19ರಂದು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮೊಗವೀರ ಸಂಘಟನೆಯ ಅಧ್ಯಕ್ಷ ಶಿವರಾಮ ಕೆ.ಎಂ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಘಟಕದ ಅಧ್ಯಕ್ಷರಾದ ರವೀಶ್ ಎಸ್. ಕೊರವಡಿ ವಹಿಸಿದ್ದರು.


ಮೊಗವೀರ ಮಹಾಜನ ಸಂಘ ರಿ. ಮುಂಬಯಿ ಇದರ ಕುಂದಾಪುರ ಶಾಖಾಧ್ಯಕ್ಷ ಕೆ.ಕೆ. ಕಾಂಚನ್, ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ಚಾತ್ರಬೆಟ್ಟು, ಬೀಜಾಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷೆ ರತ್ನ ಮರಕಾಲ್ತಿ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗುಣ, ಶ್ರೀ ರಾಮ ಭಜನಾ ಮಂಡಳಿ, ಗೋಪಾಡಿ ಇದರ ಅಧ್ಯಕ್ಷ ಶೇಖರ್ ಚಾತ್ರಬೆಟ್ಟು, ಲೆಕ್ಕಪರಿಶೋಧಕ ಶಂಕರ್ ನಾಯ್ಕ್, ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷ ಸತೀಶ್ ಎಂ. ನಾಯ್ಕ್. ನೂತನ ಅಧ್ಯಕ್ಷರಾದ ಸುನೀಲ್ ಜಿ. ನಾಯ್ಕ್, ನೂತನ ಮಹಿಳಾ ಸಂಘಟನೆ ಅಧ್ಯಕ್ಷೆ ಅನಸೂಯಾ ಕೆದೂರು, ಗೌರವಾಧ್ಯಕ್ಷರಾದ ‘ಸೌರಭ’ ರಾಜೀವ್ ಮರಕಾಲ ಬೀಜಾಡಿ, ಜಿಲ್ಲಾ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ, ಕೋಟೇಶ್ವರ ಘಟಕದ ನೂತನ ಮಹಿಳಾ ಕಾರ್ಯದರ್ಶಿ ನಿಶಾ ಕಾಳಾವರ, ನಿರ್ಗಮನ ಮಹಿಳಾ ಅಧ್ಯಕ್ಷೆ ಶಾರದಾ ಮೂಡು-ಗೋಪಾಡಿ, ಕಾರ್ಯದರ್ಶಿ ಶಾರದಾ ದೊಡ್ಡೋಣಿ ರಸ್ತೆ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಸಾಲಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಮೊಗವೀರ ಸಂಘಟನೆಯ ಅಧ್ಯಕ್ಷ ಶಿವರಾಮ ಕೆ.ಎಂ ಪ್ರತಿಜ್ಣಾವಿಧಿಯನ್ನು ಬೋಧಿಸಿದರು. ಕಾರ್ಯದರ್ಶಿ ರಾಘವೇಂದ್ರ ಹರಪನಕೆರೆ ವಾರ್ಷಿಕ ವದರಿ ಮಂಡಿಸಿದರು, ಕೋಶಾಧಿಕಾರಿ ಮಹೇಶ್ ಕಾಂಚನ್ ಬೇಳೂರು ಲೆಕ್ಕಪತ್ರ ಮಂಡಿಸಿದರು.
ಅಶಕ್ತರಿಗೆ ಧನ ಸಹಾಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಘಟಕ ವ್ಯಾಪ್ತಿಯ ಎಲ್ಲಾ ಗುರಿಕಾರರನ್ನು ಗೌರವಿಸಲಾಯಿತು.


ಸಂಘಟನೆಯ ಗೌರವ ಸಲಹೆಗಾರರಾಗಿದ್ದು ತೆಕ್ಕಟ್ಟೆ ರೋಟರಿ ಕ್ಲಬ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್ ಕಾಂಚನ್ ತೆಕ್ಕಟ್ಟೆ ಇವರನ್ನು ಸನ್ಮಾನಿಸಲಾಯಿತು.
ಕೋಟೇಶ್ವರ ಘಟಕ ನಿರ್ಗಮನ ಅಧ್ಯಕ್ಷ ರವೀಶ್ ಎಸ್. ಕೊರವಡಿ, ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾರದಾ ಮೂಡುಗೋಪಾಡಿ ಮತ್ತು ಕಾರ್ಯದರ್ಶಿ ರಾಘವೇಂದ್ರ ಹರಪನಕೆರೆ ಮಹಿಳಾ ಸಂಘಟನೆ ಕಾರ್ಯದರ್ಶಿ ಶಾರದಾ ದೊಡ್ಡೋಣಿ ರಸ್ತೆ ಇವರ ಸೇವೆಯನ್ನು ಗೌರವಿಸಲಾಯಿತು.


ಕೋಟೇಶ್ವರ ಘಟಕದ ಗೌರವ ಸಲಹೆಗಾರ ಜಗದೀಶ್ ಮೊಗವೀರ ಮಾರ್ಕೋಡು ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ ಮತ್ತು ನೂತನ ಸಾಂಸ್ಕೃತಿಕ ಕಾರ್ಯದರ್ಶಿ ಮಿಥುನ್ ಮೊಗವೀರ ಮೊಗೆಬೆಟ್ಟು ನಿರೂಪಿಸಿದರು. ನೂತನ ಕಾರ್ಯದರ್ಶಿ ಪುಂಡಲೀಕ್ ಮೊಗವೀರ ವಂದಿಸಿದರು. ಉಪಾಧ್ಯಕ್ಷ ನಾಗರಾಜ್ ಬೀಜಾಡಿ, ಕೋಶಾಧಿಕಾರಿ ಪ್ರದೀಪ್ ಮೊಗವೀರ ಹೊದ್ರಾಳಿ, ಶ್ರೀಧರ್ ಬಿ. ಎನ್, ರಾಮ ನಾಯ್ಕ್ ಬೀಜಾಡಿ, ಸುರೇಶ್ ಶಾನಾಡಿ, ರಂಜಿತ್ ಚಾತ್ರಬೆಟ್ಟು, ಉದಯ್ ಹೊದ್ರಾಳಿ, ಭಾಸ್ಕರ್ ಹಳೆ‌ಅಳಿವೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!