Thursday, November 21, 2024

ಚತುಷ್ಪಥದ ಗೊಂದಲ ನಿವಾರಣೆಗೆ ಚುನಾಯಿತ ಪ್ರತಿನಿಧಿಗಳು ಸಭೆ ನೆಡೆಸಲಿ


ಸುಬ್ರಹ್ಮಣ್ಯ ಪಡುಕೋಣೆ, ಸಂಪಾದಕ
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟೀಯ ಹೆದ್ದಾರಿಯ ಚತುಷ್ಪಥ ಮಾರ್ಗವು ಸದಾ ಗೊಂದಲದಲ್ಲಿಯೆ ಇದೆ. ಅವೈಜ್ಞಾನಿಕ ಕಾಮಗಾರಿ, ಕಳಪೆ ನಿರ್ವಹಣೆ, ಇಲ್ಲದ ಸೂಚನಾ ಫಲಕ, ಚರಂಡಿಯೇ ಕಾಣದ ರಸ್ತೆ, ರಸ್ತೆಯ ಮೇಲೆ ನೀರು, ಅಪಘಾತಕ್ಕೀಡಾಗುವ ತಿರುವು ಹೀಗೆ ಹಲವಾರು ಅವ್ಯವಸ್ಥೆಯನ್ನು ಚತುಷ್ಪಥ ಮಾರ್ಗದಲ್ಲಿ ನೋಡ ಬಹುದಾಗಿದೆ. ದುಬಾರಿ ಟೋಲ್‌ನ್ನು ಕೊಟ್ಟು ಸಂಚರಿಸಬೇಕಾದ ಮಾರ್ಗದಲ್ಲಿ ಸಾಕಷ್ಟು ಎಡರು ತೊಡರುಗಳನ್ನು ನೋಡಬಹುದಾಗಿದೆ. ದೇಶಮಟ್ಟದ ಒಂದು ರಸ್ತೆ ನಿರ್ಮಾಣವಾಗುವಾಗ ಒಂದು ಪರಿಪೂರ್ಣ ಇಂಜಿನಿಯರ್ ಇದಕ್ಕೆ ಸಿಗುವುದಿಲ್ಲವೇ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಹೊಸದಾಗಿ ರಸ್ತೆ ನಿರ್ಮಾಣವಾಗುವಾಗ ಇದ್ದ ತಿರುವುಗಳನ್ನು ಬದಲಾಯಿಸಲು ಸರಕಾರಕ್ಕೆ ಸಾಧ್ಯವಾಗದಿರುವುದು ವಿಷಾದದ ಸಂಗತಿ. ಅದಕ್ಕೆ ಜವಬ್ದಾರಿಯುತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡ ಬೇಕಾಗುತ್ತದೆ. ಸಾಕಷ್ಟು ಕಡೆಗಳಲ್ಲಿ ರಸ್ತೆಯ ಮೇಲೆ ನೀರುಹೋಗುವುದನ್ನು ನೋಡ ಬಹುದು. ಅದು ಇಕ್ಕೆಲಗಳಲ್ಲಿ ಹಾರಿ ವಾಹನಗಳು ಅಪಘಾತಕ್ಕೀಡಾಗುವುದನ್ನು ನಿತ್ಯವೂ ನೆಡೆಯುತ್ತದೆ. ರಸ್ತೆಯ ನಿರ್ಮಾಣ ಹಂತದಲ್ಲೇ ಎಡವಿಬಿದ್ದ ಸರಕಾರಗಳು ಅದನ್ನ ಸರಿಪಡಿಸುವ ನಿಟ್ಟ್ಟಿನಲ್ಲಿ ಮತ್ತೆ ಎಚ್ಚೆತ್ತುಕೊಳ್ಳದಿರ್‍ಳುವುದನ್ನು ಕಾಣಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ಎಂದು ಹಣೆ ಪಟ್ಟಿಕಟ್ಟಿ, ಅಲ್ಲಲ್ಲಿ ಹಿಂದಿ ನಾಮಫಲಕ ಹಾಕಿ ಕೈತೊಳೆದು ಕೊಳ್ಳುವ ಸರಕಾರಗಳು ಜನರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ. ಇತ್ತೀಚಿಗಷ್ಟೆ ಕುಂದಾಪುರದ ಮೇಲ್ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಯಿತು. ಇದನ್ನು ಪೂರ್ತಿಗೊಳಿಸಲು ಹನ್ನೊಂದು ವರ್ಷಗಳೇ ಬೇಕಾಯಿತು. ಇದರಿಂದಾಗಿ ಸರಕಾರದ ಇಲಾಖೆಯ ಬೇಜವಬ್ದಾರಿಯನ್ನು ನಾವು ನೋಡಬಹುದು. ಕೇವಲ ೩೦೦ ಮೀಟರ್ ಅಗಲದ ಮೇಲ್ಸೇತುವೆ ನಿರ್ಮಾಣಕ್ಕೆ ಅಷ್ಟೊಂದು ಕಾಲಾವಕಾಶ ತೆಗೆದುಕೊಳ್ಳಿವ ಸರಕಾರಗಳು, ಇಂಜಿನಿಯರ್‌ಗಳು, ಗುತ್ತಿಗೆದಾರರು ಜನರಿಗೆ ನೀಡುವ ಉತ್ತರವನ್ನು ನಿರೀಕ್ಷಿಸಬಹುದು. ಆಡಳಿತಾತ್ಮಕವಾಗಿ ಸಾಕಷ್ಟು ಗೊಂದಲವನ್ನು ಕಾಣುವ ಇಷ್ಟೊಂದು ಬೇಜವಬ್ದಾರಿಯುತವಾಗಿ ವರ್ತಿಸಿದರೆ ಸರಕಾರದ ವಿರುದ್ದ ಜನ ಮೌನವಾಗಿಯೇ ಉಳಿಯುತ್ತಾರೆ. ಕುಂದಾಪುದಿಂದ ಕಾರವಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಗಮನಿಸಿದರೆ ಕಳಪೆ ಕಾಮಗಾರಿ ದೃಷ್ಟಾಂತ ಕಣ್ಣಿಗೆ ಸಿಗುತ್ತದೆ. ಇನ್ನೂ ಕೂಡ ಸಮರ್ಪಕ ರಸ್ತೆ ನಿರ್ಮಾಣವಾಗಿಲ್ಲ. ನೀರಿನ ಹರಿವು ರಸ್ತೆಯ ಮೇಲೆ ಇದೆ. ಈಗಾಗಲೇ ರಸ್ತೆಯಲ್ಲೆ ನೀರು ನಿಲ್ಲುವ ಅಲ್ಲಲ್ಲಿ ಸಣ್ಣ ಕೆರೆಗಳಂತೆ ನಿರ್ಮಾವಾಗಿದೆ. ಇಲ್ಲಿನ ಚತುಷ್ಪತ ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸಲು ಸಾಧ್ಯವಿಲ್ಲ. ಪ್ರತಿ ಊರುಗಳಲ್ಲಿ ರಸ್ತೆ ವೇಗತಡೆಯನ್ನು ಅಳವಡಿಸಲಾಗಿದೆ. ದೂರದಿಂದ ಬರುವ ವಾಹನ ಚಾಲಕರಿಗೆ‌ಇದು ತಿಳಿಯುವುದೇ ಇಲ್ಲ. ಅಲ್ಲದೆ ಅಲ್ಲಲ್ಲಿ ಇರುವ ಗೊಂದಲದ ತಿರುವುಗಳು ಸಾಕಷ್ಟು ಅಪಘಾತಕ್ಕೆ ಆಹ್ವಾನವನ್ನು ನೀಡುತ್ತಿರುತ್ತದೆ. ಇದರಿಂದಾಗಿ ವಾಹನಗಳು ನಿಧಾನವಾಗಿಯೇ ಚಲಿಸಬೇಕಾಗುತ್ತದೆ. ರಸ್ತೆ ನಿರ್ಮಾಣ ಮಾಡುವ ಇಂಜಿನಿಯರುಗಳಿಗೆ ಮಳೆಗಾಲದಲ್ಲಿ ನೀರು ನಿಲ್ಲುವ ಸೂಚನೆಯೂ ತಿಳಿದಿಲ್ಲವೆ. ಊರಿನ ಅನಕ್ಷರಸ್ತ ಮೇಸ್ತ್ರಿಗೂ ಇರುವ ತಾಂತ್ರಿಕ ನಿಪುಣತೆ ಇಂಜಿನಿಯರ್ ಕಲಿತವರಿಗೆ ಇಲ್ಲವೇ? ಎಂದು ನಾಗರಿಕರು ಕೇಳುವ ಪ್ರಶ್ನೆಗೆ ಉತ್ತರವಿಲ್ಲ ಸರಕಾರದ ಬಳಿ ಇಲ್ಲ. ಸದ್ಯ ಇದನ್ನು ಸರಿಪಡಿಸುವ ಜವಬ್ದಾರಿ ಚುನಾಯಿತ ಪ್ರತಿನಿಧಿಗಳಿಗೆ ಇದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ಒಂದಡೆ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಸಾಕಷ್ಟಗೊಂದವಿದ್ದ ಕಡೆ ಸ್ಥಳ ಬೇಟಿಯನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!