Thursday, November 21, 2024

ಅಸಂಘಟಿತ ಕಾರ್ಮಿಕರನ್ನು ಒಂದೇ ಸೂರಿನಡೆ ತರಲಿದೆ ಇ-ಶ್ರಮ್ ಯೋಜನೆ


ದೇಶದ ಅಸಂಘಟಿತ ವಲಯಗಳಲ್ಲಿ ಸುಮಾರು 43.7 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾಹಿತಿ ಹಾಗೂ ಸಂಘಟನೆಯ ಕೊರತೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯಬಹುದಾದ ಹಲವು ಯೋಜನೆ, ಸೌಲಭ್ಯಗಳಿಂದ ಈ ಕಾರ್ಮಿಕರು ವಂಚಿತರಾಗುತ್ತಿದ್ದಾರೆ, ಈ ಎಲ್ಲಾ ಕಾರ್ಮಿಕರನ್ನು ಒಂದೇ ಕಡೆಯಲ್ಲಿ ನೊಂದಣಿ ಮಾಡಲು ಆಗಸ್ಟ್ 26 ರಿಂದ ಕೇಂದ್ರ ಸರ್ಕಾರದ ಇ-ಶ್ರಮ್ ನೊಂದಣಿ ಏಕಕಾಲದಲ್ಲಿ ದೇಶಾದ್ಯಂತ ಆರಂಭವಾಗುತ್ತಿದೆ.


ಇ-ಶ್ರಮ್ ನೊಂದಣಿ ಮೂಲಕ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (NDUW)  ಅನ್ನು ರಚಿಸುತ್ತಿದೆ. ಅಸಂಘಟಿತ ಕಾರ್ಮಿಕರ ನೋಂದಣಿಗೆ ಈ ವೆಬ್‍ಸೈಟ್‍ನಲ್ಲಿ ಅನುಕೂಲ ಕಲ್ಪಿಸಲಾಗುವುದು ಹಾಗೂ ಪ್ರತಿ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು, ಇದು ಅನನ್ಯ ಗುರುತಿನ ಸಂಖ್ಯೆಯಾಗಿರುತ್ತದೆ.


ನೊಂದಣಿಯಿಂದ ಅಸಂಘಟಿತ ಕೆಲಸಗಾರರಿಗೆ ಪ್ರಯೋಜನಗಳು: ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ಆಧಾರದ ಮೇಲೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಚಿವಾಲಯಗಳು-ಸರ್ಕಾರಗಳು ಜಾರಿಗೊಳಿಸುತ್ತವೆ. ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಅಡಿಯಲ್ಲಿ ನೋಂದಾಯಿತ ಕೆಲಸಗಾರರು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯನ್ನು ತೆಗೆದುಕೊಳ್ಳಬಹುದು. ಇದರ ಪ್ರೀಮಿಯಂ ರೂ. 12 ಅನ್ನು 1 ವರ್ಷದವರೆಗೆ ಮನ್ನಾ ಮಾಡಲಾಗುತ್ತದೆ.


ಅಸಂಘಟಿತ ಕಾರ್ಮಿಕರ ವಲಯದಲ್ಲಿ, ಸಣ್ಣ ಮತ್ತು ಕನಿಷ್ಠ ರೈತರು, ಕೃಷಿ ಕಾರ್ಮಿಕರು, ಹಂಚಿಕೆದಾರರು, ಮೀನುಗಾರರು, ಪಶು ಸಂಗೋಪನೆಯಲ್ಲಿ ತೊಡಗಿರುವವರು, ಬೀಡಿ ಕಟ್ಟುವವರು, Labelling and packing ,ಕಟ್ಟಡ ಕಾರ್ಮಿಕರು ,ಚರ್ಮದ ಕೆಲಸಗಾರರು, ನೇಕಾರರು, ಬಡಗಿ, ಉಪ್ಪು ಕೆಲಸಗಾರರು, ಇಟ್ಟಿಗೆ ಗೂಡು ಮತ್ತು ಕಲ್ಲಿನ ಕೆಲಸಗಾರರು, ಕ್ವಾರಿಗಳಲ್ಲಿನ ಕಾರ್ಮಿಕರು, ಸಾಮಿಲ್ ಕೆಲಸಗಾರರು, ಗೃಹ ಕಾರ್ಮಿಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಪತ್ರಿಕೆ ಮಾರಾಟಗಾರರು, ರಿಕ್ಷಾಎಳೆಯುವವರು, ಆಟೋ ಚಾಲಕರು, ರೇಷ್ಮೆ ಕೃಷಿ ಕಾರ್ಮಿಕರು, ಬಡಗಿಗಳು, ಟ್ಯಾನರಿ ಕೆಲಸಗಾರರು, ಗೃಹ ಸೇವಕರು, ಬೀದಿ ಬದಿ ವ್ಯಾಪಾರಿಗಳು,MNGRGA Workers, ASHA Workers, ಹಾಲು ಹಾಕುವ ರೈತರು, ವಲಸೆ ಕಾರ್ಮಿಕರು ಸೇರುತ್ತಾರೆ.


ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ನಲ್ಲಿ ನೊಂದಣಿಯಾಗಲು, ಮೇಲಿನ ಅಸಂಘಟಿತ ಕಾರ್ಮಿಕ ವರ್ಗಗಳಲ್ಲಿ ಕೆಲಸ ಮಾಡುತ್ತಿದ್ದು, ವಯಸ್ಸು 16-59 ವರ್ಷಗಳು ಆಗಿರಬೇಕು, ಆದಾಯ ತೆರಿಗೆ ಪಾವತಿಸುವವರಾಗಿರಬಾರದು. EPFO ಮತ್ತು ESIC ಸದಸ್ಯರಾಗಿರಬಾರದು,


ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ನಲ್ಲಿ, ಸಂಘಟಿತ ವಲಯದಲ್ಲಿ ತೊಡಗಿರುವವರು ನೊಂದಣಿಯಾಗಲು ಸಾಧ್ಯವಿಲ್ಲ. ಏಕೆಂದರೆ ಸಂಘಟಿತ ವಲಯವು ಖಾಸಗಿ ಅಥವಾ ಸಾರ್ವಜನಿಕ ವಲಯದ ಕೆಲಸಗಾರರನ್ನು ಒಳಗೊಂಡಿರುತ್ತದೆ, ಅವರು ನಿಯಮಿತ ವೇತನಗಳು, ಭತ್ಯೆಗಳು ಮತ್ತು ಇತರ ಪ್ರಯೋಜನಗಳನ್ನು ಹಾಗೂ ರಜೆಗಳ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಯನ್ನು ಪಡೆಯುತ್ತಾರೆ.


ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ನಲ್ಲಿ ನೊಂದಣಿಯಾಗಲು ಕಾರ್ಮಿಕರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ , ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮತ್ತು ಮೊಬೈಲ್ ನೊಂದಿಗೆ ತಮ್ಮ ಸಮೀಪದ ಯಾವುದೇ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೊಂದಣಿ ಮಾಡಿಕೊಳ್ಳಬಹುದು, ನೊಂದಣಿ ಮಾಡಿಕೊಂಡ ಕಾರ್ಮಿಕರಿಗೆ ಎ4 ಅಳತೆಯ ನೊಂದಣಿ ಪತ್ರ ನೀಡಲಾಗುವುದು.


ಉಡುಪಿ ಜಿಲ್ಲೆಯಲ್ಲಿ ಸುಮಾರು 15000 ಕ್ಕೂ ಅಧಿಕ ಅಸಂಘಟಿತ ಕಾರ್ಮಿಕರಿದ್ದು, ಈ ಕಾರ್ಮಿಕರು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ನಲ್ಲಿ ನೊಂದಣಿಯಾಗುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ನೀಡುವ ಹಲವು ಸೌಲಭ್ಯಗಳನ್ನು ಪಡೆಯಬಹುದು. ಜಿಲ್ಲೆಯಲ್ಲಿ 160 ಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳಿದ್ದು, ಜಿಲ್ಲೆಯಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸಮೀಪದ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಂಡು, ಯೋಜನೆಯ ಪ್ರಯೋಜನ ಪಡೆಯಬೇಕು ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!