Sunday, September 8, 2024

ವಂಡ್ಸೆ ಮಾದರಿ ಶಾಲೆಗೆ 5 ಕೆವಿ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಕೊಡುಗೆ


ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಶಾಲಾ ಪೂರ್ವ ವಿದ್ಯಾರ್ಥಿ ವಂಡ್ಸೆ ಕಟ್ಟೆಮನೆ ಸುಧಾಕರ ಶೆಟ್ಟಿ ಯವರ ಕೊಡುಗೆಯಾಗಿ ಅಂದಾಜು ರೂ. 8 ಲಕ್ಷ ಮೊತ್ತದಲ್ಲಿ 5 ಕೆ ವಿ ಸಾಮರ್ಥ್ಯದ ಸೋಲಾರ್ ಅಳವಡಿಕೆಯಾಗಿದ್ದು ಆ.19ರಂದು ಶಾಲಾ ಬಳಕೆಗೆ ಹಸ್ತಾಂತರಿಸಲಾಯಿತು.


ಶಾಲಾ ಬೇಡಿಕೆಗಳಲ್ಲಿ ಒಂದಾದ ಸೋಲಾರ್ ವ್ಯವಸ್ಥೆಯು ಅತೀ ಅಗತ್ಯವಾಗಿದ್ದು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಿದೆ. ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಾಜೆಕ್ಟರ್ ಇದ್ದು ಸೋಲಾರ್ ಅಳವಡಿಕೆ ಹೆಚ್ಚು ಅನುಕೂಲವಾಗಿದೆ. ಶಾಲೆಯ ಬಳಕೆಯಾಗಿ ಉಳಿಕೆ ವಿದ್ಯುತ್‌ನ್ನು ಮೆಸ್ಕಾಂಗೆ ನೀಡುವ ಯೋಜನೆಯೂ ಕೂಡಾ ಇದರೊಂದಿಗೆ ಜೋಡಿಸಿಕೊಳ್ಳಲಾಗಿದೆ.
ಶಾಲೆಗೆ ಉಪಯೂಕ್ತವಾದ ಸೌರ ವಿದ್ಯುತ್ ಘಟಕವನ್ನು ಒದಗಿಸಿದ ದಾನಿಗಳಾದ ವಂಡ್ಸೆ ಕಟ್ಟೆಮನೆ ಸುಧಾಕರ್ ಶೆಟ್ಟಿಯವರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ ಕೃತಜ್ಞತೆ ಸಲ್ಲಿಸಿದರು.


2016ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆಯಲ್ಲಿ 2016ರಲ್ಲಿ 89 ವಿದ್ಯಾರ್ಥಿಗಳಿದ್ದು ಬಳಿಕ, ಆಂಗ್ಲಮಾಧ್ಯಮ ವಿಭಾಗ, ಪೂರ್ವ ಪ್ರಾಥಮಿಕ ತರಗತಿಗಳ ಆರಂಭ, ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ 1ರಿಂದ 7ನೇ ತರಗತಿ ತನಕ 319 ವಿದ್ಯಾರ್ಥಿಗಳಿದ್ದು, ಪೂರ್ವಪ್ರಾಥಮಿಕ ತರಗತಿ ಸೇರಿದಂತೆ 399 ವಿದ್ಯಾರ್ಥಿಗಳಿದ್ದಾರೆ. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್, ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್, ರೋಟರಿ ಸಂಸ್ಥೆ ಸೇರಿದಂತೆ ದಾನಿಗಳ ಮೂಲಕ ಹಲವು ಮೂಲ ಸೌಕರ್ಯಗಳನ್ನು ಹೊಂದಿಸಿಕೊಂಡು ಮುನ್ನೆಡೆಯುತ್ತಿದೆ.


ಈಗಾಗಲೇ ಶಾಲೆ ದಾನಿಗಳು, ಹಳೆ ವಿದ್ಯಾರ್ಥಿಗಳ ಉದಾರ ಕೊಡುಗೆಯಿಂದ ವಿವಿಧ ಸೌಕರ್ಯಗಳು ಶಾಲೆಗೆ ದೊರಕಿದ್ದು, ಗುಣಾತ್ಮಕ ಶಿಕ್ಷಣ ನೀಡುವಿಕೆಯಲ್ಲಿ ಸಕ್ರಿಯವಾಗಿರುವ ಅಧ್ಯಾಪಕ ವೃಂದದ ಪರಿಶ್ರಮದಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡಾ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!