27.5 C
New York
Wednesday, August 10, 2022

Buy now

spot_img

ಆವರ್ಸೆ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಆವರ್ಸೆ ಆಯ್ಕೆ


ಕುಂದಾಪುರ: ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ಒಂದಾದ ಆವರ್ಸೆ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ 4ನೇ ಅವಧಿಗೆ ಸುಧಾಕರ ಶೆಟ್ಟಿ ಆವರ್ಸೆ ಆಯ್ಕೆಯಾಗಿದ್ದಾರೆ.


ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸೀತಾರಾಮ ಶೆಟ್ಟಿ ಆವರ್ಸೆ, ಲಕ್ಷ್ಮೀನಾರಾಯಣ ಐತಾಳ್ ಆವರ್ಸೆ,ಅಮರನಾಥ ಶೆಟ್ಟಿ ಆವರ್ಸೆ, ಶಂಕರ ಪೂಜಾರಿ ಆವರ್ಸೆ, ಕೃಷ್ಣ ಕುಲಾಲ ಆವರ್ಸೆ, ಪ್ರಮೋದಾ ವಿಜಯ ಶೆಟ್ಟಿ ಆವರ್ಸೆ, ವಿಜಯ ದಿವಾಕರ ಗಾಣಿಗ ಆವರ್ಸೆ, ಗಣೇಶ ಆವರ್ಸೆ ಇವರುಗಳು ಧಾರ್ಮಿಕ ದತ್ತಿ ಇಲಾಖೆಯಿಂದ ಆಯ್ಕೆಯಾಗಿದ್ದಾರೆ.


ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಧಾಕರ ಶೆಟ್ಟಿಯವರು ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ರೋಟರಿ ಸಹಾಯಕ ಗವರ್ನರ್ ಆಗಿದ್ದಾರೆ. ಬಂಟರ ಯಾನೆ ನಾಡವರ ತಾಲೂಕು ಸಂಘದ ಪದಾಧಿಕಾರಿಯಾಗಿದ್ದು, ಅದರ ಮಾತೃ ಸಂಘ ಮಂಗಳೂರು ಇಲ್ಲಿ 4ನೇ ಅವಧಿಗೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಒಂದು ಅವಧಿಗೆ ಸಹ ಸಂಚಾಲಕರಾಗಿ, ಪ್ರಸ್ತುತ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Articles

Stay Connected

21,961FansLike
3,430FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!