21.3 C
New York
Friday, September 17, 2021

Buy now

spot_img

ವಂಡ್ಸೆ ಎಸ್.ಎಲ್.ಆರ್.ಎಂ.ಘಟಕಕ್ಕೆ ರಾಮಕೃಷ್ಣ ಆಶ್ರಮದ ಏಕಗಮ್ಯಾನಂದಜೀ ಭೇಟಿ


ಕುಂದಾಪುರ, ಜು.17: ಮಂಗಳೂರು ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ ವಂಡ್ಸೆಯ ಎಸ್.ಎಲ್.ಆರ್.ಎಂ.ಘಟಕ ವೀಕ್ಷಣೆಗೆ ಶನಿವಾರ ಭೇಟಿ ನೀಡಿದರು.


ಮಂಗಳೂರು ರಾಮಕೃಷ್ಣ ಆಶ್ರಮದ ಅಂಗಸಂಸ್ಥೆ ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಮೂಲಕ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕಗಳ ಸ್ಥಾಪನೆ ಮಾಡುತ್ತಿದ್ದು ವ್ಯವಸ್ಥಿತ ಘಟಕ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ನೇತೃತ್ವದಲ್ಲಿ ಹಸಿ ಕಸದ ಪರಿಣಾಮಕಾರಿ ವಿಲೇವಾರಿಗೆ ಹರ್ಮಿ ಕಾಂಪೋಸ್ಟ್ ವಿಧಾನ ಅನುಸರಿಸುತ್ತಿದ್ದು, ಆ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ಹರ್ಮಿ ಕಾಂಪೋಸ್ಟ್ ವಿಧಾನವನ್ನು ಮುಂದಿನ ದಿನಗಳಲ್ಲಿ ವಂಡ್ಸೆಯ ನೂತನ ಎಸ್.ಎಲ್.ಆರ್.ಎಂ ಘಟಕದಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು.


ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಗೋವರ್ದನ್ ಜೋಗಿ, ಪ್ರಶಾಂತ್ ಪೂಜಾರಿ, ಸುಬ್ಬು, ಶಶಿಕಲಾ, ಸುಶೀಲ, ಶ್ರೀ ಮೂಕಾಂಬಿಕಾ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ತೊಂಭತ್ತು ಸೀತಾರಾಮ ಶೆಟ್ಟಿ, ರಾಮಕೃಷ್ಣ ಆಶ್ರಮದ ಅಂಗಸಂಸ್ಥೆ ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಆಡಳಿತ ನಿರ್ದೇಶಕ ದಿಲ್‌ರಾಜ್ ಆಳ್ವ, ನಿರ್ದೇಶಕ ಸಚಿನ್, ವಂಡ್ಸೆ ಸ.ಮಾ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ, ಗ್ರಾ.ಪಂ.ಕಾರ್ಯದರ್ಶಿ ಶಂಕರ ಆಚಾರ್ಯ, ರಮೇಶ ಪೂಜಾರಿ ಬಳಿಹಿತ್ಲು ಹಾಗೂ ಎಸ್.ಎಲ್.ಆರ್.ಎಂ.ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳನ್ನು ಗೌರವಿಸಲಾಯಿತು.

Related Articles

Stay Connected

21,961FansLike
2,941FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!