16.6 C
New York
Friday, September 30, 2022

Buy now

spot_img

ಲಸಿಕೆ ಎಲ್ಲರಿಗೂ ಸಿಗಲಿ


-ಸುಬ್ರಹ್ಮಣ್ಯ ಪಡುಕೋಣೆ (ಸಂಪಾದಕ)
ಲಸಿಕೆ ನೀಡುವಿಕೆಯಲ್ಲಿ ಮತ್ತು ಲಸಿಕೆ ತೆಗೆದುಕೊಳ್ಳಿವಿಕೆಯಲ್ಲಿ ತೋರಿದ ಉದಾಸೀನವೇ ಕರೊನಾ ವ್ಯಾಪಿಸಲು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ. ಸರಕಾರ ಲಸಿಕೆಯನ್ನು ತಯಾರಿಸಿ ಅದನ್ನು ಪ್ರಚಾರಕ್ಕಾಗಿ ಬಳಸಿಕೊಂಡು ಬೇಜವಬ್ದಾರಿಯಿಂದ ವರ್ತಿಸಿದರೆ, ದೇಶದ ನಾಗರಿಕ ಅದರ ಬಗ್ಗೆ ಉದಾಸೀನ ಮಾಡಿದ್ದಾನೆ. ಆದರೆ ಲಸಿಕೆಯನ್ನು ಜನರಿಗೆ ನೀಡಬೇಕು ಅದನ್ನು ಆಂದೋಲನವನ್ನಾಗಿ ಮಾಡಬೇಕೆಂಬ ಆಲೊಚನೆ ಸರಕಾರ ಮಾಡಲಿಲ್ಲ. ಅಷ್ಟಕ್ಕೂ ಸರಕಾರದ ಬಳಿ ದೇಶದ ಜನರಿಗಾಗುವಷ್ಟು ಲಸಿಕೆ ಇಲ್ಲ. ಅ ನಿಟ್ಟಿನಲ್ಲಿ ಸರಕಾರವೂ ಎಚ್ಚರವಹಿಸಲಿಲ್ಲ. ಕಳೆದ ಬಜೆಟ್ಟಿನಲ್ಲಿಯೇ ಮುವತ್ತಾರು ಸಾವಿರ ಕೋಟಿ ಹಣವನ್ನು ಲಸಿಕೆಗಾಗಿ ಮೀಸಲಿಟ್ಟಿದ್ದರೂ ಲಸಿಕೆ ತಯಾರಿಸುವಲ್ಲಿ ಹಿನ್ನಡೆ ಕಂಡಿದೆ. ಇನ್ನು ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಲಾಗದ ಸರಕಾರ ಜನರಿಂದ ಮುಂಗಡ ನೊಂದಾವಣೆ ಎಂಬ ಕಾರ್ಯಕ್ರಮವನ್ನು ಹಾಕಿಕೊಂಡಿತು. ದೇಶದ ಎಲ್ಲ ಜನರ ಬಳಿಯೂ ಮೊಬೈಲ್ ಇದೆ ಎಂಬ ನಂಬಿಕೆ ಆಡಳಿತಶಾಹಿಯದ್ದು. ಯಾಕೆಂದರೆ ಸರಕಾರವೆಂದರೆ ವಿದ್ಯಾವಂತರು, ಅಧಿಕಾರಿಗಳು, ನಗರ ಪ್ರದೇಶದಲ್ಲಿರುವವರು ಮತ್ತು ಅವರು ಮೊಬೈಲನ್ನು ಉಪಯೋಗಿಸ ಬಲ್ಲವರು. ಅವರ ನೇರಕ್ಕೆ ಮತ್ತು ಅನುಕೂಲತೆಗೆ ಸರಿಯಾಗಿ ಆದೇಶಗಳು ಹೊರ ಬೀಳುತ್ತವೆ. ದೇಶದ ಜನತೆ ಬಳಿ ಇನ್ನೂ ಸಮರ್ಪಕ ಮೊಬೈಲ್ ಇಲ್ಲ ಎಂಬ ಅರಿವು ಅವರಲ್ಲಿ ಇಲ್ಲ. ಅವಿದ್ಯಾವಂತರು, ಗ್ರಾಮೀಣ ಭಾಗದವರು ಎಲ್ಲಿ ನೊಂದಾವಣೆ ಮಾಡಿಕೊಳ್ಳುತ್ತಾರೆ. ಇದು ಕೂಡ ಲಸಿಕೆ ನೀಡಲು ಸಾದ್ಯವಿಲ್ಲದಿದ್ದುದರಿಂದ ಆಳುವ ವರ್ಗಗಳು ಕಂಡುಕೊಂಡ ಹೊಸ ಮಾರ್ಗ. ಇದರಿಂದಗಿ ಲಸಿಕೆ ನೀಡುವಲ್ಲಿ ತಡವಾದರೂ ತೊಂದರೆ ಇಲ್ಲ ಎಂಬ ಭಾವನೆ ಅವರಿಗೆ. ಲಸಿಕೆ ನೀಡಲು ಸರಕಾರದ ಬಳಿ ಲಸಿಕೆ ಇಲ್ಲ. ಅದಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಮೊದಲ ಆದ್ಯತೆ ಎಂಬ ಆದೇಶವನ್ನು ಹೊರಡಿಸಿ ತನ್ನ ಬೇಜವಬ್ದಾರಿತನವನ್ನು ಮುಚ್ಚಿಡಲು ಪ್ರಯತ್ನಿಸಿತು. ಇದರಿಂದಾಗಿ ಅಲ್ಲಲ್ಲಿ ಲಸಿಕೆ ನೀಡಲಾಗಿದೆ ಎಂಬ ಸಮಧಾನವನ್ನು ಸರಕಾರ ಮಾಡಿಕೊಂಡಿತು. ಸರಕಾರಕ್ಕೆ ಒಂದು ವೇಳೆ ಕೊರೊನಾ ನಿಗ್ರಹಿಸಬೇಕೆಂಬ ಇಚ್ಚೆ ಇದ್ದಿದಲ್ಲಿ ಪ್ರಾರಂಭದಲ್ಲೆ ಲಸಿಕೆಯನ್ನು ಕಡ್ಡಾಯವಾಗಿ ಮಾಡುತ್ತಿತು. ಸರಕಾರಕ್ಕೆ ಲಸಿಕೆ ಬಗ್ಗೆ ನಂಬಿಕೆ ಇಲ್ಲವೆಂಬಂತೆ ವರ್ತಿಸಿತು. ಇದರಿಂದ ಸರಕಾರದ ಬಳಿ ಲಸಿಕೆ ಇಲ್ಲ ಎಂಬುದು ಸಾಭೀತಾಯಿತು. ಅಲ್ಲದೆ ಮುಖ್ಯವಾಗಿ ಜನರು ಎಚ್ಚತ್ತು ಕೊಳ್ಳುವ ಹಾಗೆ ಲಸಿಕೆಯ ಪ್ರಾಮುಖ್ಯತೆಯ ಬಗ್ಗೆಯೂ ಜಾಗೃತಿ ಮೂಡಿಸಬಹುದಿತ್ತು. ಆ ಕಾರ್ಯವೂ ಕೂಡ ಸರಕಾರದಿಂದ ಆಗಲಿಲ್ಲ. ಲಸಿಕೆ ಮಾಡಿದ್ದೇವೆ. ಜನ ಸ್ವೀಕರಿಸಲಿಲ್ಲ ಎಂಬ ಹಣೆಪಟ್ಟಿಯನ್ನು ಕಟ್ಟಿ ಸರಕಾರ ಕೈತೊಳೆದುಕೊಂಡಿತು. ಒಂದು ರಾಷ್ಟ್ರ ಸಾಂಕ್ರಮಿಕ ರೋಗವನ್ನು ತಡೆಗಟ್ಟುವಲ್ಲಿ ತೆಗೆದುಕೊಳ್ಳುವ ತೀರ್ಮಾನ ಅತ್ಯಂತ ಪ್ರಾಮುಖ್ಯವಾದುದು. ಅದನ್ನು ಕಡ್ಡಾಯವಾಗಿ ಹಾಕಿಸ ಬೇಕಾದುದು ಸರಕಾರಗಳ ಕರ್ತವ್ಯ. ಅದನ್ನು ಬಿಟ್ಟು ಕಾಟಾಚಾರಕ್ಕಾಗಿ ಸರಕಾರ ಲಸಿಕೆ ನೀಡುವ ಕಾರ್ಯಕ್ರಮ ಸರಿಯಲ್ಲ. ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವಿಕೆ ಸಾಧ್ಯವಾಗಿಲ್ಲ. ಅಲ್ಲಲ್ಲಿ ಲಸಿಕೆ ನೀಡುವಿಕೆ ನೆಡೆಯುತ್ತಿದೆ. ಕರೋನಾ ನಗರ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತದೆ. ಅಲ್ಲಿಂದ ಅದು ಹಳ್ಳಿಗೆ ತಲುಪುತ್ತದೆ. ಆದರಿಂದ ನಗರ ಪ್ರದೇಶದಲ್ಲಿ ಮೊದಲು ಎಚ್ಚರಿಕೆ ಮತ್ತು ಮುಂಜಾಗೃತಾ ಕಾರ್ಯಕ್ರಮಗಳನ್ನು ತೆಗೆದುಕೊಳ್ಳ ಬೇಕು. ಆದರೆ ಪ್ರಚಾರಕ್ಕಾಗಿ ಲಸಿಕೋತ್ಸವವನ್ನು ಸರಕಾರ ಮಾಡುತ್ತಿದೆ. ಅದನ್ನು ಎಲ್ಲಾ ಜನರಿಗೆ ನೀಡಿದ್ದರೆ ಎರಡನೆ ಅಲೆಯಲ್ಲಿನ ಸಾವುನೊವುಗಳನ್ನು ತಪ್ಪಿಸ ಬಹುದಾಗಿತ್ತು. ಇದೀಗ ಕಾಲೇಜು ಮಕ್ಕಳಿಗೆ ಲಸಿಕೆ ನೇಡುವಿಕೆ ಆರಂಭಗೊಂಡಿದೆ. ಆದರೆ ಇದು ಹೆಚ್ಚುವರಿ ಅಲ್ಲ. ಈಗ ಸಾರ್ವಜನಿಕರಿಗೆ ಕೊಡುತಿದ್ದ ಲಸಿಕೆಯನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ ಅಷ್ಟೆ. ಆದರೆ ಖಾಸಗಿಯಾಗಿ ಲಸಿಕೆಯನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲಿ ಎಷ್ಟು ಬೇಕಾದರೂ ಸಿಗುತ್ತದೆ. ಸಾಮಾನ್ಯ ಜನರಿಗೆ ನೀಡುವಿಕೆಯಲ್ಲಿ ಸರಕಾರಗಳ ಜಾಣ ಮೌನ. ಲಸಿಕೆ ನೀಡುವಿಕೆಯಲ್ಲಿ ಎಲ್ಲವೂ ಅಪೂರ್ಣ. ಎರಡನೆ ಅಲೆಯಂತೂ ಆಳುವ ವರ್ಗದ ಬೇಜವಬ್ದಾರಿತನದಿಂದಲೇ ವ್ಯಾಪಿಸಿದ್ದು. ಈಗಾಗಲೇ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಇನ್ನು ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡಿಲ್ಲ. ಯಾಕೆಂದರೆ ಸರಕಾರದ ಬಳಿ ಲಾಕ್‌ಡೌನ್ ಎಂಬ ಸಿದ್ದ ಅಸ್ತ್ರ ಸಿದ್ದವಿದೆ. ತಕ್ಷಣವೇ ಸರಕಾರ ಮತ್ತು ಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ಲಸಿಕೆ ಎಲ್ಲರಿಗೂ ಸಿಗಲಿ.

Related Articles

Stay Connected

21,961FansLike
3,505FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!