Thursday, November 21, 2024

ಉಚಿತ ಟ್ಯಾಬ್ ವಿತರಣೆ ಸರಕಾರದ ಮಹತ್ವಕಾಂಕ್ಷಿ ಯೋಜನೆ- ಬಿ.ಎಂ. ಸುಕುಮಾರ ಶೆಟ್ಟಿ


ಶಂಕರನಾರಾಯಣ: ಸರಕಾರ ಸ್ಮಾರ್ಟ್ ಕರ್ನಾಟಕ ಯೋಜನೆಯಡಿಯಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳುದಕ್ಕಾಗಿ ಟ್ಯಾಬ್ ವಿತರಣೆ ಮಾಡುತ್ತಿದೆ. ಇದು ಸರಕಾರದ ಮಹತ್ವಂಕಾಶಿ ಯೋಜನೆಯಾಗಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಿಸಿಕೊಂಡು, ತಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವಂತಾಗಲಿ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಹೇಳಿದರು.


ಅವರು ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೋವಿಡ್ ನಿಯಮಾವಳಿಯಂತೆ ಬುಧವಾರ ಸ್ಮಾರ್ಟ್ ಕರ್ನಾಟಕ ಯೋಜನೆಯ ಅಡಿಯಲ್ಲಿ ಹತ್ತು ಆಯ್ದ ವಿದ್ಯಾರ್ಥಿಗಳಿಗೆ ನೀಡಲ್ಪಟ್ಟ ಉಚಿತ ಟ್ಯಾಬ್ ವಿತರಣೆ ಮತ್ತು ಐಸಿಟಿ ತರಗತಿಗಳ ಉದ್ಘಾಟನೆ ಮಾಡಿ ಮಾತನಾಡಿದರು.


ಕಾಲೇಜಿನಲ್ಲಿ ಈ ಭಾರೀ 250 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಇನ್ನೂ ಹೆಚ್ಚಿನ ದಾಖಲೆಯಾಗುವ ನಿರೀಕ್ಷೆ ಇದೆ. ಕಾಲೇಜಿನಲ್ಲಿ ಸುಸಜ್ಜಿತವಾದ ಕಟ್ಟಡ, ಉತ್ತಮ ಪರಿಸರ ಹೊಂದಿದೆ. ಉತ್ತಮ ಉಪನ್ಯಾಸಕರ ತಂಡ ಹೊಂದಿದ್ದು, ಒಳ್ಳೆಯ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರಿ ಬಸ್ ಓಡಿಸುವ ಬಗ್ಗೆ ಸರಕಾರದೊಂದಿಗೆ ಮತನಾಡುತ್ತೇನೆ ಎಂದು ಹೇಳಿದರು.


ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷೆ ಲತಾ ಡಿ.ಎಸ್., ಉಪಾಧ್ಯಕ್ಷ ರವಿ ಕುಲಾಲ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವಾನಂದ ವೈದ್ಯ, ಕಾಲೇಜಿನ ಉಪನ್ಯಾಸಕರಾದ ಗಿರೀಶ್ ಶಾನ್‌ಭೋಗ್, ಜಗದೀಶ ಜಿ.ಬಿ., ದ್ವಿತೀಯ ದರ್ಜೆ ಸಹಾಯಕ ಗಿರೀಶ್ ನಾಯ್ಕ ಎಸ್. ಜಿ., ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬಂದಿಗಳು ಮತ್ತು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.


ಪ್ರಾಂಶುಪಾಲ ಡಾ| ಉದಯ ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಎಸ್ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಮಹಬೂಬ ಸುಭಾನಿ ಟ್ಯಾಬ್ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ವಿಜಯ ಬಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲಕ ಡಾ| ಕುಮಾರ ಎಂ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!