Sunday, September 8, 2024

‘ರಜಾರಂಗು-2021’ ಆನ್ ಲೈನ್ ಉಚಿತ ಶಿಬಿರ ಉದ್ಘಾಟನೆ


ಕುಂದಾಪುರ: ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಮಲ್ಯಾಡಿ ಲೈವ್ ಸಹಕಾರದೊಂದಿಗೆ ಜೂ. 24ರಿಂದ ಜು. 1ರವರೆಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕೋಟ ಸುದರ್ಶನ ಉರಾಳ ಉದ್ಘಾಟಿಸಿದರು.


ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿಗಳ ಮನಸ್ಸು ಅರಳುವ ಕಾಯಕವನ್ನು ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಹಲವಾರು ವರ್ಷಗಳಿಂದ ವಿವಿಧ ಬಗೆಯಲ್ಲಿ ಮಾಡುತ್ತಾ ಬಂದಿದೆ. ರಂಗದಲ್ಲಿ ಶಿಕ್ಷಣ ಎನ್ನುವ ವಿಷಯದ ಮೂಲಕ ಜೀವನ ಪರೀಕ್ಷೆಯಲ್ಲಿ ಮೌಲ್ಯ ಪಡೆಯಬೇಕಾದರೆ ಏನು ಬೇಕು? ಅದನ್ನು ತಿಳಿಸುವ ಕಾರ್ಯ ಈ ಕಲಾಕ್ಷೇತ್ರ ಮಾಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ರಂಗ ಶಿಕ್ಷಣದ ಮೂಲಕ ಯಾರು ಅಧ್ಯಯನ ನಡೆಸುತ್ತಾರೆ ಅವರು ಎಲ್ಲಾ ವಿಧದಲ್ಲಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಕರಾವಳಿಯ ಜನರು ಪಠ್ಯೇತರ ಚಟುವಟಿಕೆಗಳಲ್ಲಿ ಯಾಕೆ ಮುಂದಿದ್ದಾರೆ ಕೇಳಿದರೆ ಇಲ್ಲಿ ಹಲವಾರು ವರ್ಷಗಳಿಂದ ನಮ್ಮ ಕಣ್ಣಮುಂದೆ ಇರುವಂತಹ ಯಕ್ಷಗಾನ ಎನ್ನುವ ರಂಗಕಲೆಯಿಂದಾಗಿ. ಹಾಗೆ ಇದರೊಂದಿಗೆ ನಾಟಕ, ಸಾಹಿತ್ಯ, ಇತರ ಕಲಾಪ್ರಕಾರಗಳಿವೆ. ಇಂತಹ ಬೇರೆ ಬೇರೆ ವಿಷಯಗಳ ಮೂಲಕ ನಾವು ಅಧ್ಯಯನ ಮಾಡುವ ಮೂಲಕ ನಮ್ಮ ಪಠ್ಯಕ್ಕೆ ಪೂರಕವಾಗಿ ನಾವು ನಮ್ಮನ್ನು ಬೆಳೆಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇಲ್ಲಿ ಈ ಆನ್ ಲೈನ್ ವೇದಿಕೆಯ ಮೂಲಕ ಒಳ್ಳೆಯ ವಿಚಾರಗಳನ್ನು ಮನನ ಮಾಡಿಕೊಳ್ಳಿ ಎಂದರು.


ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ರಂಗಸಂಪದ ಕೋಟ ಇದರ ಕಾರ್ಯದರ್ಶಿ ರಾಘವೇಂದ್ರ ತುಂಗ, ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊಕೂರು, ಪ್ರಶಾಂತ್ ಮಲ್ಯಾಡಿ, ಶಂಕರನಾರಾಯಣ ಉಪಾಧ್ಯ, ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಕ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ನಿರ್ವಹಣೆ ಮಾಡಿದರು. ಉಳಿದ ದಿನಗಳಲ್ಲಿ ಮಂಡ್ಯ ರಮೇಶ್, ಮೇಘ ಸಮೀರ, ಸತ್ಯನಾ ಕೊಡೇರಿ, ಅಭಿಲಾಷ ಹಂದೆ, ಸುಧಾ ಅಡುಕಳ ಇನ್ನೂ ಹಲವಾರು ಸುಪ್ರಸಿದ್ಧರು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!