spot_img
Sunday, May 10, 2026
spot_img

ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರದ್ದು ರಾಜಕೀಯ ದಿವಾಳಿತನದ ಹೇಳಿಕೆ- ಕುಂದಾಪುರ ಬ್ಲಾಕ್ ಕಾಂಗ್ರೆಸ್


ಕುಂದಾಪುರ: ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರದ್ದು ಜನ್ಮ ಭೂಮಿ ಪುತ್ತೂರು ಆದರೂ ಅವರ ಕರ್ಮ ಭೂಮಿ ಉಡುಪಿ ಜಿಲ್ಲೆ. ವಿನಯ ಕುಮಾರ್ ಸೊರಕೆ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಅವರ ಪಕ್ಷದ ನಾಯಕರುಗಳಂತೆ ಧರ್ಮ, ಜಾತಿಯ ಆದಾರದ ಮೇಲೆ ರಾಜಕಾರಣಕ್ಕೆ ಬಂದವರಲ್ಲ್ಲ, ಸೊರಕೆಯವರು ಪುತ್ತೂರು ಶಾಸಕರಾಗುವ ಮೊದಲೇ ಜನಪರ ಹೋರಾಟಗಳ ಮೂಲಕ ಜನಸೇವೆಯ, ಜನಪರ ಹೋರಾಟಗಳ ಮೂಲಕ ರಾಜಕಾರಣಕ್ಕೆ ಬಂದವರು, ಉಡುಪಿ ಲೋಕಸಭಾ ಕ್ಷೇತ್ರ, ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ದಿಸಿ ಜನರಿಂದ ಆಯ್ಕೆಯಾದವರು ಸೊರಕೆಯವರು, ಇವರನ್ನಾ ಪುನಃ ಪುತ್ತೂರಿಗೆ ಹೋಗಿ ಎಂದು ಹೇಳುವ ನೈತಿಕತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಇಲ್ಲ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ ತಿಳಿಸಿದ್ದಾರೆ.


ನಾವು ಅವರಂತೆ ಕೀಳು ಮನಸ್ಥಿತಿಯವರಲ್ಲ, ಅವರ ಪಕ್ಷದ ಯಾವುದೇ ಜನಪ್ರತಿನಿಧಿಗಳಿಗೆ ಪುನಃ ಅವರ ಪ್ರದೇಶಕ್ಕೆ ಹೋಗಿ ಎನ್ನುವುದಿಲ್ಲ, ಏಕೆಂದರೆ ನಾವು “ವಸುದೈವ ಕುಟುಂಬಿಕಮ್”ಎನ್ನುವ ಧ್ಯೇಯ ವಾಕ್ಯದಡಿ ನಂಬಿಕೆಯಿರುವವರು, ಸುರೇಶ್ ನಾಯಕರ ಮೇಲೆ ಯಡಮೊಗೆಯ ಕೊಲೆ ಪ್ರಕರಣದ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪವಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಸೊರಕೆಯಂತಹ ನಾಯಕರ ಬಗ್ಗೆ ಇಲ್ಲಸಲ್ಲದ ಹೇಳಿಕೆ ಕೊಡುವುದು ಸರಿಯಲ್ಲ್ಲ ಹಾಗೂ ಇದು ಅವರ ರಾಜಕೀಯ ದಿವಾಳಿತನದ ಹೇಳಿಕೆಯಾಗಿದೆಯೆಂದು ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!