Thursday, November 21, 2024

ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಕೋವಿಡ್ ವಾರಿಯರ್ಸ್ ಆಗಿ ಘೋಷಿಸಲು ಕೆ.ಪ್ರತಾಪಚಂದ್ರ ಶೆಟ್ಟಿ ಆಗ್ರಹ


ಕುಂದಾಪುರ: ಕೋವಿಡ್ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರಾದ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಾದ ಗ್ರಾ.ಪಂ.ಉಪಾಧ್ಯಕ್ಷರಿಗೆ, ಅದರ ಸದಸ್ಯರಾದ ಪಂಚಾಯಿತಿಯ ಸದಸ್ಯರಿಗೆ ಸಮಿತಿ ಉಳಿದ ಸದಸ್ಯರಂತೆ ಕೋವಿಡ್ ವಾರಿಯರ್ಸ್ ಆರ್ಥಿಕ ಭದ್ರತೆ ನೀಡದೇ ಇರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.


ಕೋವಿಡ್ ನಿಯಂತ್ರಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಕಾರ್ಯಪಡೆಯನ್ನು ರಚಿಸಲಾಗಿದ್ದು ಈ ಕಾರ್ಯಪಡೆಯ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತದೆ. ಇದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕ್ರಮವಾಗಿ ಈ ಕಾರ್ಯಪಡೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿರುತ್ತಾರೆ. ಗ್ರಾಮ ಪಂಚಾಯತಿಯ ಪ್ರತೀ ಗ್ರಾಮದ ಒಬ್ಬ ಸದಸ್ಯರು ಈ ಕಾರ್ಯಪಡೆಯ ಸದಸ್ಯರಾಗಿದ್ದು, ಇತರ ಸದಸ್ಯರಾಗಿ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ,ಕಾರ್ಯದರ್ಶಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.


ಲಾಕ್ ಡೌನ್ ಸಂದರ್ಭದಲ್ಲಿ ಸೋಂಕಿತರನ್ನು ಹೋಂ ಐಸೋಲೇಶನ್ ಮಾಡಿ ಮನೆಯನ್ನು ಸೀಲ್ ಡೌನ್ ಮಾಡಿದಾಗ ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು, ವೈದ್ಯಕೀಯ ಮೂಲಭೂತ ವಸ್ತುಗಳನ್ನು ತಲುಪಿಸುವುದು, ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸೇವೆ ಒದಗಿಸಲು ನೆರವಾಗುವುದು, ಯಾರಾದರೂ ಮೃತರಾದರೆ ಆ ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಇಷ್ಟಲ್ಲದೇಯೂ ಹಲವು ಮಾನವೀಯ ಕಾರ್ಯಗಳ ಮೂಲಕ ಸೇವೆ ನೀಡುತ್ತಿದ್ದಾರೆ.


ಕಾರ್ಯಪಡೆಯಲ್ಲಿ ಉಳಿದ ಸದಸ್ಯರಂತೆ ಜೀವದ ಹಂಗು ತೊರೆದು ಈ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸಹಕರಿಸುತ್ತಿರುವ ಪಂಚಾಯಿತಿ ಪ್ರತಿನಿಧಿಗಳಿಗೆ ಕಾರ್ಯಪಡೆಯ ಉಳಿದ ಸದಸ್ಯರಿಗೆ ನೀಡುವಂತೆ ಕೋವಿಡ್ ವಾರಿಯರ್ಸ್ ವಿಮಾ ಭದ್ರತೆ ನೀಡಬೇಕಾಗುತ್ತದೆ. ಆದುದರಿಂದ ಪಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ, ಆರ್ಥಿಕ ಭದ್ರತೆಯನ್ನು ನೀಡುವಂತೆ ಕೆ.ಪ್ರತಾಪಚಂದ್ರ ಶೆಟ್ಟಿಯವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!