Sunday, September 8, 2024

ಸಹಕಾರಿ ಸಂಘಗಳ ನೌಕರರನ್ನು ಕೊರೊನಾ ಫ್ರಂಟ್ ವಾರಿಯರ್‍ಸ್ ಆಗಿ ಪರಿಗಣಿಸಲು ಸರ್ಕಾರಕ್ಕೆ ಮನವಿ

ಉಡುಪಿ: ಸಹಕಾರಿ ಸಂಘಗಳ ನೌಕರರನ್ನು ಕೊರೊನಾ ಫ್ರಂಟ್ ವಾರಿಯರ್‍ಸ್ ಆಗಿ ಪರಿಗಣಿಸುವಂತೆ ಹಾಗೂ ಪ್ರಥಮ ಪ್ರಾಶಸ್ತ್ಯ ನೀಡಿ ವ್ಯಾಕ್ಸಿನೇಷನ್ ಹಾಗೂ ವಿಮಾ ಭದ್ರತೆಯ ರಕ್ಷಣೆ ಒದಗಿಸುವಂತೆ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮನವಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಕೋವಿಡ್-19 ರ 2ನೇ ಅಲೆ ಹಾಗೂ ಮುಂದೆ ಬರಬಹುದಾದಂತಹ 3ನೇ ಅಲೆಯನ್ನು ಸಮಥವಾಗಿ ಎದುರಿಸಲು ಸಹಕಾರ ಸಂಘ ಸಂಸ್ಥೆಗಳು ಕಟಿಬದ್ದವಾಗಿ ಶ್ರಮಿಸುವ ಮೂಲಕ ಸರ್ಕಾರದ ಆದೇಶಗಳನ್ನು ಹಾಗೂ ಜನಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಘ ಸಂಸ್ಥೆಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಿವೆ. ಆರ್ಥಿಕ ಸಂಕಷ್ಟಕ್ಕೀಡಾದವರಿಗೆ ಸಹಕಾರಿಗಳಿಗೆ ಮತ್ತು ಜನಸಾಮಾನ್ಯರುಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಬ್ಯಾಂಕಿಂಗ್, ಸಾವಿರಾರು ಪಡಿತರದಾರರ ಕುಟುಂಬಗಳಿಗೆ ಪಡಿತರ ಆಹಾರ ಧಾನ್ಯಗಳ ನಿರಂತರ ವಿತರಣೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರೂ ಹೈನುಗಾರರ ಕ್ಷೇಮಾಭಿವೃದ್ದಿಗೆ ದುಡಿಯುತ್ತಿದ್ದಾರೆ.ಈ ಮೂಲಕ ಸಾರ್ವಜನಿಕರನ್ನು ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಸೇವೆಯೇ ಸಹಕಾರ ಕ್ಷೇತ್ರದ ಮೂಲ ಮಂತ್ರ ಎಂಬ ತತ್ವಕ್ಕೆ ಬದ್ಧವಾಗಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಹಲವಾರು ಸಹಕಾರಿ ನೌಕರರು ಕೊರೊನಾಕ್ಕೆ ಬಲಿಯಾಗಿದ್ದು, ನೌಕರರಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿದೆ. ಆತಂಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬಗ್ಗೆ ಗಮನಹರಿಸದೇ ಇರುವುದು ಹಾಗೂ ಸಹಕಾರಿ ನೌಕರರನ್ನು ಫ್ರಂಟ್ ವಾರಿಯರ್‍ಸ್‌ ಆಗಿ ಪರಿಗಣಿಸದೇ ಇರುವುದು ನೌಕರರ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.


ಸಹಕಾರ ಸಂಘಗಳ ನೌಕರರ ಕುಟುಂಬ ಹಾಗೂ ನೌಕರರ ಕ್ಷೇಮವು ಈ ಸಮಯದಲ್ಲಿ ಅಮೂಲ್ಯವಾಗಿದ್ದು, ಸಹಕಾರಿ ಸಂಘಗಳ ನೌಕರರನ್ನು ಕೊರೊನಾ ಫ್ರಂಟ್ ವಾರಿಯರ್‍ಸ್ ಆಗಿ ಪರಿಗಣಿಸಿ ಪ್ರಥಮ ಪ್ರಾಶಸ್ತ್ಯ ನೀಡಿ ವ್ಯಾಕ್ಸಿನೇಷನ್ ನೀಡುವಂತೆ ಹಾಗೂ ಇಂತಹ ಸಿಬ್ಬಂದಿಗಳ ಕುಟುಂಬಸ್ಥರಿಗೆ ಮತ್ತ್ತು ಅವಲಂಬಿತರಿಗೆ ಜೀವನ ಭದ್ರತೆಗಾಗಿ ವಿಮಾ ಭದ್ರತೆಯನ್ನು ಹಾಗೂ ರಕ್ಷಣೆಯನ್ನು ನೀಡುವಂತೆ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್, ರಾಜ್ಯದ ಗೃಹ ಮಂತ್ರಿಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವರಾಜ ಬೊಮ್ಮಯಿ, ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್‌ ಕತ್ತಿ, ಉಡುಪಿ ವಿಧಾನ ಸಭಾಕ್ಷೇತ್ರದ ಶಾಸಕರು ಹಾಗೂ ಭರವಸೆಗಳ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಟಿದೇವೇಗೌಡ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ. ಎಂ.ಎನ್‌.ರಾಜೇಂದ್ರಕುಮಾರ್ ಹಾಗೂ ಜಿಲ್ಲಾಧಿಕಾರಿ ಉಡುಪಿಜಿಲ್ಲೆ ಜಿ. ಜಗದೀಶ್‌ಇವರಿಗೆ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮನವಿ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!