Sunday, September 8, 2024

ಕುಂದಾಪುರ ತಾಲೂಕು ಯುವ ಬಂಟರ ಸಂಘ: ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ

ಕುಂದಾಪುರ, ಜ.23: ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾನವತೆಯ ಕೆಲಸಗಳನ್ನು ಮಾಡುತ್ತಾ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು. ಬದುಕಿನ ಗುರಿ ಸ್ಪಷ್ಟವಾಗಿದ್ದು, ಉದ್ಯೋಗಕ್ಕಾಗಿ ಪದವಿಯಾಗದೇ ಜೀವನ ಮೌಲ್ಯಗಳನ್ನು ಶಿಕ್ಷಣದೊಂದಿಗೆ ಪಡೆಯಬೇಕು. ಮಾನವತೆಯ ಕಾರ್ಯಗಳೊಂದಿಗಿನ ನಮ್ಮ ಬದುಕು ಸುಂದರ ಭಾವಗೀತೆಯಾಗಬೇಕು ಎಂದು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.


ಕುಂದಾಪುರ ತಾಲೂಕು ಯುವ ಬಂಟರ ಸಂಘ ರಿ., ಕುಂದಾಪುರ ನೇತೃತ್ವದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಡಾ|ಮಧುಕರ ಶೆಟ್ಟಿ ಐ.ಪಿ.ಎಸ್. ಸಂಸ್ಮರಣಾ ಪ್ರಶಸ್ತಿ-2020 ಹಾಗೂ ದಿ|ಎಂ.ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣಾ ಪ್ರಗತಿಪರ ಕೃಷಿಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಡಾ|ಮಧುಕರ ಶೆಟ್ಟಿ ಐ.ಪಿ.ಎಸ್. ಸಂಸ್ಮರಣಾ ಪ್ರಶಸ್ತಿ-2020ನ್ನು ಅಲಮಟ್ಟಿ ಕೃಷ್ಣಭಾಗ್ಯ ಜಲನಿಗಮದ ಪ್ರಧಾನ ಮುಖ್ಯ ಹಣಕಾಸು ಅಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಇವರಿಗೆ ಮಂಗಳೂರು ಡಿ.ಸಿ.ಪಿ ಹರೇರಾಮ್ ಶಂಕರ್ ಪ್ರದಾನ ಮಾಡಿದರು.

ಈ ಸಂದರ್ಭ ಮಾತನಾಡಿದ ಹರೇರಾಂ ಶಂಕರ್, ಡಾ|ಮಧುಕರ ಶೆಟ್ಟಿ ನಮಗೆ ದೊಡ್ಡ ಹೆಮ್ಮೆ. ದಕ್ಷ ಅಧಿಕಾರಿಯಾಗಿ ಹೆಸರು ಗಳಿಸಿದ ಅವರು ಮಾನವೀಯ ಹೃದಯುಳ್ಳವರು. ಅವರಂತಹ ಅಧಿಕಾರಿಗಳು ಹುಟ್ಟಿ ಬರಬೇಕು. ಆ ಮೂಲಕ ಸಮಾಜದ ಸುಧಾರಣೆ ಆಗಬೇಕು ಎಂದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಜಿತ್ ಕುಮಾರ ಹೆಗ್ಡೆ ಅವರು, ಡಾ|ಮಧುಕರ ಶೆಟ್ಟಿ ಅವರ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಸ್ಥಾಪಿಸಿದ ಮುಂಗಾರು ಪತ್ರಿಕೆಯಲ್ಲಿ ಬ್ರಹ್ಮಾವರದಲ್ಲಿ ವರದಿಗಾರನಾಗಿ ಕೆಲಸ ಮಾಡಿದ ಹೆಮ್ಮೆ ನನಗಿದೆ. ಐಪಿ‌ಎಸ್, ಐ‌ಎ‌ಎಸ್ ಬ್ರಹ್ಮಾಂಡವಲ್ಲ. ವಿದ್ಯಾರ್ಥಿಗಳು ಆಡಳಿತಾತ್ಮಕವಾಗಿ ಉನ್ನತ ಹುದ್ದೆ ಅಲಂಕರಿಸಬೇಕು. ಐಪಿ‌ಎಸ್, ಐ‌ಎ‌ಎಸ್ ಮಾಡುವ ಬಗ್ಗೆ ಅಲೋಚನೆ ಮಾಡಬೇಕು ಎಂದರು.


ದಿ.ಎಂ.ಗೋಪಾಲಕೃಷ್ಣ ಶೆಟ್ಟಿ ಕಂದಾವರ ಕೆಳಾಮನೆ ಸಂಸ್ಮರಣಾ ಪ್ರಗತಿಪರ ಕೃಷಿ ಪ್ರಶಸ್ತಿಯನ್ನು ದಿ|ಹದ್ದೂರು ರಾಜೀವ ಶೆಟ್ಟಿ ಅವರ ಪರವಾಗಿ ಅವರ ಪತ್ನಿ ಮಮತಾ ಆರ್.ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.


ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ,ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ಇದರ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಗದಗದ ವಿಶ್ವ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನ ಉದ್ಯಮಿ ವಿಶ್ವನಾಥ ಶೆಟ್ಟಿ, ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಇದರ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟಿ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇದರ ಸ್ಥಾಪಕಾಧ್ಯಕ್ಷ ಅಶೋಕ್ ಶೆಟ್ಟಿ ಸಂಸಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಪ್ರಥಮ ದರ್ಜೆ ಗುತ್ತಿಗೆದಾರರಾದ ವಿಜಯಾನಂದ ಶೆಟ್ಟಿ ಹಳ್ನಾಡು, ಇಂಜಿನಿಯರ್ ಕಂದಾವರ ಸತೀಶ್ ಶೆಟ್ಟಿ, ಕೆ.ಪಿ ಶಂಕರ ಶೆಟ್ಟಿ, ವತ್ಸಲಾ ದಯಾನಂದ ಶೆಟ್ಟಿ ಅಂಕದಕಟ್ಟೆ, ಯುವ ಬಂಟರ ಸಂಘದ ಗೌರವಾಧ್ಯಕ್ಷ ಡಾ|ರಂಜನ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಶೆಟ್ಟಿ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಹುಂಚನಿ, ವಿದ್ಯಾರ್ಥಿ ವೇತನ ನಿರ್ವಹಣಾ ಸಮಿತಿ ಸಂಚಾಲಕ ರಾಜೀವ ಶೆಟ್ಟಿ ನಿಡುಟಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಎಸ್.ಎಸ್.ಎಲ್,ಸಿ ಪರೀಕ್ಷೆಯಲ್ಲಿ ಬಂಟ ಸಮುದಾಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿ ಸುರಭಿ ಶೆಟ್ಟಿ ಉಪ್ಪುಂದ, ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಬಂಟ ಸಮುದಾಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿ ಅನ್ವಿತಾ ಶೆಟ್ಟಿ ಇಡೂರು ಕುಂಜ್ಞಾಡಿ ಇವರ ಪರವಾಗಿ ಪೋಷಕರನ್ನು ಅಭಿನಂದಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಆರೋಗ್ಯ ಭಾಗ್ಯ ಯೋಜನೆಯಡಿ ನೆರವು ನೀಡಲಾಯಿತು.

ಯುವ ಬಂಟರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಸ್ವಾಗತಿಸಿ, ಸುಕುಮಾರ ಶೆಟ್ಟಿ ಕಮಲಶಿಲೆ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿದರು. ಪ್ರತಾಪಚಂದ್ರ ಶೆಟ್ಟಿ ಹಳ್ನಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಚಿನ್ ಕುಮಾರ್ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ಕೊವಾಡಿ ಪ್ರಶಸ್ತಿ ಪತ್ರ ವಾಚಿಸಿದರು. ಸಂತೋಷ ಶೆಟ್ಟಿ ಹೈಕಾಡಿ, ರಾಜೀವ ಶೆಟ್ಟಿ ಸಾಧಕರ ಪರಿಚಯಿಸಿದರು. ಮನೋರಾಜ್ ಶೆಟ್ಟಿ ಜಾಂಬೂರು ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಆರ್.ಜೆ ನಯನ ಶೆಟ್ಟಿ ಯರುಕೋಣೆ ಮತ್ತು ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಮಚ್ಚಟ್ಟು ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!