spot_img
Saturday, September 5, 2026
spot_img

ಅಮಾಸೆಬೈಲು ಡ್ಯುಯಲ್‌ಸ್ಟಾರ್ ಶಾಲೆಯಲ್ಲಿ ವಿದ್ಯಾ ಸ್ಪೂರ್ತಿ ಪ್ರಶಸ್ತಿ ಪ್ರದಾನ

ಕುಂದಾಪುರ: ನಾಳಿನ ಭಾರತವನ್ನು ನಿರ್ಮಾಣ ಮಾಡಲು ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಬೇಕು, ರಾಷ್ಟ್ರ ಕಲ್ಪನೆಯನ್ನು ಮೂಡಿಸಬೇಕು ಎಂದು ಡ್ಯುಯಲ್ ಸ್ಟಾರ್ ರೂರಲ್ ಎಜುಕೇಷನ್ ಟ್ರಸ್ಟ್ ನ ಸದಸ್ಯರಾದ ರಘುಪತಿ ಭಟ್ ಗೆಣಸಿನಕುಣಿ ರವರು ಅಭಿಪ್ರಾಯ ಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ವಿದ್ಯಾ ಸ್ಪೂರ್ತಿ ಪ್ರಶಸ್ತಿಯನ್ನು ವಿಜ್ಞಾನ ಶಿಕ್ಷಕಿ ಅಮೃತಾ ಕುಮಾರಿರವರಿಗೆ ಪ್ರದಾನ ಮಾಡಿ, ಜಗತ್ತಿನ ಅತ್ಯಂತ ಶ್ರೇಷ್ಠ ಉದ್ಯೋಗವಾದ ಶಿಕ್ಷಕ ವೃತ್ತಿಯನ್ನು ಮನದಾಳದಿಂದ ಪ್ರೀತಿಸಬೇಕು. ಕೈಂಕರ್ಯ ಮಾಡಬೇಕು. ಆಗ ತನ್ನಿಂದ ತಾನಾಗಿಯೇ ಗೌರವ ಸಿಗುತ್ತದೆ ಎಂದು ಹೇಳಿದರು.

ವಿದ್ಯಾ ಸ್ಪೂರ್ತಿ ಪ್ರಶಸ್ತಿಯನ್ನು ಪಡೆದಿರುವ ವಿಜ್ಞಾನ ಶಿಕ್ಷಕಿ ಅಮೃತಾ ಕುಮಾರಿಯವರು ನನಗೆ ಈ ಶಾಲೆ ವೃತ್ತಿ ಸ್ವಾತಂತ್ರ್ಯವನ್ನು ನೀಡಿ ಬೋಧನೆಯ ಜೊತೆಗೆ ತಾಳಮದ್ದಳೆ,ನಾಟಕ, ಲೇಖನ ಬರವಣಿಗೆ ಮುಂತಾದ ಕ್ಷೇತ್ರಗಳಲ್ಲಿ ನನ್ನನ್ನು ತೊಡಗಿಸುವಂತೆ ಮಾಡಿ ನನ್ನಲ್ಲಿರುವ ಸೂಪ್ತ ಪ್ರತಿಭೆಯನ್ನು ಹೊರ ಹಾಕಲು ಮುಖ್ಯ ಕಾರಣವಾಗಿದೆ ಇಂತಹ ಶಾಲೆಯನ್ನು ನಾನು ಎಂದಿಗೂ ಮರೆಯೋದಿಲ್ಲ. ನನ್ನಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಅದನ್ನು ಖಂಡಿತ ಮಾಡುತ್ತೇನೆ ಎಂದು ಹೇಳಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸತ್ಯಮೂರ್ತಿ ಹೆಮ್ಮೆಣ್ಣ ಯಡಮೊಗೆಯವರು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ನಂತರ ದಿನಾಚರಣೆಯನ್ನು ಉದ್ಘಾಟಿಸಿ ಶಿಕ್ಷಕರು ನಿಷ್ಕಲ್ಮಶ ಮನಸ್ಸಿನಿಂದ ತಮ್ಮ ಮಕ್ಕಳಂತೆ ತಿಳಿದು ಪರಿಪೂರ್ಣ ಶಿಕ್ಷಣದ ಕಲ್ಪನೆಯೊಂದಿಗೆ ಬೋಧನೆಯನ್ನು ಮಾಡುತ್ತಾರೆ ಅವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ ರವರು ಮಾತನಾಡುತ್ತಾ , ಶಿಕ್ಷಕ ಮತ್ತು ಶಿಕ್ಷಣ ವಿದ್ಯಾರ್ಥಿಗಳ ಬೆನ್ನೆಲುಬು ಅದು ಸರಿಯಾಗಿ ಇದ್ದಲ್ಲಿ ರಾಷ್ಟ್ರ ನಿರ್ಮಾಣ ಉತ್ತಮವಾಗಿ ಆಗುತ್ತದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಸದಸ್ಯರಾದ ಹಿರಿಯರು ಶ್ರೀ ರಘುಪತಿ ಭಟ್ ಗೆಣಸಿನ ಕುಣಿರವರು ವಹಿಸಿದ್ದರು.ವೇದಿಕೆಯಲ್ಲಿ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ರಂಜನಿ ಹೆಗಡೆ, ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್, ಹಾಗೂ ವಿದ್ಯಾರ್ಥಿ ನಾಯಕಿ ಮಾನ್ಯ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಹಾಗೆಯೇ ಶಿಕ್ಷಕರಿಗಾಗಿ ವಿದ್ಯಾರ್ಥಿಗಳಿಂದ ಮನೋರಂಜನಾ ಕ್ರೀಡೆ ನಡೆಯಿತು. ಶಿಕ್ಷಕರೆಲ್ಲರೂ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಉತ್ಸಾಹದಿಂದ ಭಾಗವಹಿಸಿದರು.

ಸ್ವಾಗತವನ್ನು ಶಾಲೆಯ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ ರವರು ಮಾಡಿದರು, ವಿದ್ಯಾರ್ಥಿ ಅದಿತಿ ಹೆಮ್ಮಣ್ಣ ಮತ್ತು ಸಚ್ಚಿದಾನಂದ ಭಟ್ಟ ಪ್ರಾರ್ಥಿಸಿದರು, ಪ್ರಶಸ್ತಿ ಪತ್ರವನ್ನು ರಾಧಿಕಾ ರಾವ್ ವಾಚಿಸಿದರು, ಶ್ರೀಯುತ ಪ್ರಕಾಶ್ ಆಚಾರ್ಯ ರವರು ಪ್ರಸ್ತಾಪಿಸಿದರು, ಶಿಕ್ಷಕರಾದ ಸುಭಿಕ್ಷಾ ಮತ್ತು ವಿಘ್ನೇಶ್ ಜಿ ಎಲ್ ಶಾಲೆಯ ಬಗ್ಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು, ಸಂಚಾಲಕರಾದ ಶಶಿಧರ ಎನ್ ದೇವಾಡಿಗ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ನಳಿನಿ ರಾವ್ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!