spot_img
Friday, September 4, 2026
spot_img

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಗೆ ಚಾಲನೆ

ಜನಪ್ರತಿನಿಧಿ ವಾರ್ತೆ, ಬೈಂದೂರು] ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಇದರ ಸುವರ್ಣ ಮಹೋತ್ಸವ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಾಗೂ ಸಂಸ್ಮರಣೆ ದಿನಾಚರಣೆಯು ಸಂಘದ ಪ್ರಧಾನ ಕಚೇರಿಯಾದ ರೈತಸಿರಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆಯವರು ಕಾರ್ಯಕ್ರಮ ಉದ್ಘಾಟಿಸಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಅಧ್ಯಕ್ಷರಾದ ಪ್ರಕಾಶ್ ಚಂದ್ರ ಶೆಟ್ಟಿ ಅವರ ಆಡಳಿತದಲ್ಲಿ ಸಂಘವು ಸದೃಢವಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಅಲ್ಲದೆ ಐದು ಶಾಖೆಗಳನ್ನು ನಡೆಸಿಕೊಂಡು ಬಂದಿದೆ. ತುಂಬಾ ಪರಿಶ್ರಮದಿಂದ ಈ ಸಂಘವನ್ನು ಕಟ್ಟುವಲ್ಲಿ ಹಗಲಿರಲು ಶ್ರಮಿಸಿದ್ದಾರೆ. ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣಕರ್ತರಾಗಿರುತ್ತಾರೆ ಅಲ್ಲದೆ ಅಧ್ಯಕ್ಷರು ಅಭಿವೃದ್ಧಿಯ ಪಥದತ್ತ ನಡೆಸಿಕೊಂಡು ಹೋಗುತ್ತಿದ್ದಾರೆ. ಮುಂದಿನ ದಿನದಲ್ಲಿ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಹೋಗುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ ನಿ., ಇದರ ನಿರ್ದೇಶಕರಾದ ಎಂ ಮಹೇಶ್ ಹೆಗ್ಡೆಯವರು ಸುವರ್ಣ ಸಂಭ್ರಮದ ಲಾಂಛನವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ ಅವರು ನೂತನ ಪವರ್ ಬ್ಯಾಂಕಿಂಗ್ ತಂತ್ರಾಂಶವನ್ನು ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾಜಿ ಆಡಳಿತ ಅಧಿಕಾರಿ ಅಮೃತ ಹೊಳ್ಳ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ ಅಧ್ಯಕ್ಷರಾದ ಎಸ್.ಪ್ರಕಾಶ್ ಚಂದ್ರ ಶೆಟ್ಟಿ ವಹಿಸಿ, ಈ ಸಂಸ್ಥೆಯು ೫೦ ವರ್ಷಗಳನ್ನು ಪೂರೈಸುತ್ತಿದೆ. ಈ ಸಂಸ್ಥೆಯು ತುಂಬಾ ಕಷ್ಟದಲ್ಲಿ ಬೆಳೆದುಕೊಂಡು ಬಂದಿದ್ದು ಇದೀಗ ಸದೃಢವಾಗಿ ನಿಂತಿದೆ. ಮಾಜಿ ನಿರ್ದೇಶಕರುಗಳು ಮಾಜಿ ಸಿಬ್ಬಂದಿಗಳು ಮಾಜಿ ವ್ಯವಸ್ಥಾಪಕರು ಕಾರ್ಯನಿರ್ವನಾಧಿಕಾರಿಗಳು,ಜನರ ಸಹಕಾರದಿಂದ ಹೆಮ್ಮೆರವಾಗಿ ಬೆಳೆದು ನಿಂತಿದೆ ಮುಂದಿನ ಒಂದು ವರ್ಷದೊಳಗೆ ಕಂಬದಕೋಣೆಯಲ್ಲಿ ಸಿದ್ಧವಾಗುತ್ತಿರುವ ಅಗ್ರಿಮಾಲ್ ಲೋಕಾರ್ಪಣೆಯನ್ನು ಮಾಡಲಿದ್ದೇವೆ. ಎಲ್ಲ ರೈತರು ಮುಂದಿನ ದಿನಗಳಲ್ಲಿ ಸಂಘವನ್ನು ಬೆಳೆಯುವಲ್ಲಿ ಸಹಕಾರ ನೀಡಬೇಕು ಎಂದರು.

ಸಂಘದ ಉಪಾಧ್ಯಕ್ಷರಾದ ಮಂಜು ದೇವಾಡಿಗ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಮೋಹನ್ ಪೂಜಾರಿ ಗುರುರಾಜ ಹೆಬ್ಬಾರ್, ಭರತ್ ದೇವಾಡಿಗ, ಹೂವ ನಾಯ್ಕ, ಪ್ರಕಾಶ ಎನ್ ಪೂಜಾರಿ, ರಾಜೇಶ್ ದೇವಾಡಿಗ, ಉದಯಕುಮಾರ್ ಶೆಟ್ಟಿ, ಶ್ರೀಮತಿ ದೀನಿತಾ ಶೆಟ್ಟಿ, ಶ್ರೀಮತಿ ಲೀಲಾ ಪೂಜಾರ್ತಿ, ರಂಜಿತ್ ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಾಗರತ್ನ ಡಿ ಪ್ರಾರ್ಥಿಸಿದರು. ಸಂಘದ ವರದಿಯನ್ನು ಸಿ‌ಇ‌ಓ ವಿಷ್ಣು ಪೈ. ಎನ್ ವಾಚಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಸಿಬ್ಬಂದಿ ಚಂದ್ರಯ್ಯ ಶೆಟ್ಟಿ ವಂದಿಸಿದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!