spot_img
Friday, September 4, 2026
spot_img

ಸೆ.7: ಕುಂದಾಪುರ-ಸಾಸ್ತಾನ ತನಕ ‘ವಂದೇ ಮಾತರಂ’ ಕಾಲ್ನಡಿಗೆ ಜಾಥಾ

ಕುಂದಾಪುರ: ವಂದೇ ಮಾತರಂ ಎಂದರೆ ಶಕ್ತಿ, ವಂದೇ ಮಾತರಂ ಎಂದರೆ ಸ್ಪೂರ್ತಿ, ವಂದೇ ಮಾತರಂ ಎಂದರೆ ಭಾರತೀಯರ ಧ್ಯೇಯ ಮಂತ್ರ, ಇದು ಕೇವಲ ಗೀತೆಯಲ್ಲ, ದೇಶದ ಆತ್ಮ, ರಾಷ್ಟ್ರಪೇಮ ಜಾಗೃತಗೊಳಿಸುವುದು, ಸಾರ್ವತ್ರಿಕ ಅಭಿಪ್ರಾಯ ಕ್ರೋಢೀಕರಿಸುವ ಉದ್ದೇಶದಿಂದ ವಂದೇ ಮಾತರಂ ಅಭಿಯಾನ ಕುಂದಾಪುರದಿಂದ ಸಾಸ್ತಾನ ತನಕ ಕಾಲ್ನಡಿಗೆ ಜಾಥಾ ಸೆ.7 ಸೋಮವಾರ ಬೆಳಿಗ್ಗೆ 8.30 ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಚಾಲನೆಗೊಳ್ಳಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರ ಶಾಸಕರ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಕೇರಳದ ರಾಜ್ಯ ಸಭಾ ಸದಸ್ಯರದ ಸದಾನಂದ ಮಾಸ್ತರ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ಪೂರ್ವಾಹ್ನ 11-30ಕ್ಕೆ ಕಾಲ್ನಡಿಗೆ ಜಾಥಾ ಕೋಟೇಶ್ವರ ಪೇಟೆ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ತೆಕ್ಕಟ್ಟೆ, ಮಧ್ಯಾಹ್ನ 3 ಗಂಟೆಗೆ ಕೋಟ, 4 ಗಂಟೆಗೆ ಸಾಲಿಗ್ರಾಮ, 5 ಗಂಟೆಗೆ ಸಾಸ್ತಾನ ಟೋಲ್‌ಗೇಟ್, 5-30ಕ್ಕೆ ಸಾಸ್ತಾನ ಪೇಟೆಯಲ್ಲಿ ಸಮಾರೋಪಗೊಳ್ಳಲಿದೆ. 18 ಕಿ.ಮೀ ಪಾದಯಾತ್ರೆಯಲ್ಲಿ ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ 98ರ ವಯೋಮಾನದ ಮಟ್ಟಾರು ವಿಠಲ್ ಕಿಣಿ ಪಾದಯಾತ್ರೆಯಲ್ಲಿ ಭಾಗವಹಿಸಲಿರುವುದು ವಿಶೇಷವಾಗಿದೆ ಎಂದರು.

ಈ ಕಾಲ್ನಡಿಗೆ ಜಾಥಾದಲ್ಲಿ ತ್ರಿವರ್ಣ ದ್ವಜಕ್ಕೆ ಪುಷ್ಪರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯತೆಯ ವಿಚಾರದಲ್ಲಿ ಸಾವಿರಾರು ಮಂದಿ ಒಟ್ಟಾಗಿ ಹೆಜ್ಜೆ ಹಾಕುವ ವಿಶಿಷ್ಠವಾದ ಜಾಥಾ ಇದಾಗಲಿದೆ ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಂದೇ ಮಾತರಂ ಕಾಲ್ನಡಿಗೆ ಜಾಥಾ ಯುವ ಸಮುದಾಯದಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಕಾರ್ಯಕ್ರಮವಾಗಿದೆ. ಕುಂದಾಪುರದಿಂದ ಸಾಸ್ತಾನ ತನಕ ಕಾಲ್ನಡಿಗೆಯ ಜಾಥಾದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾಥಾವನ್ನು ಯಶಸ್ವಿಗೊಳಿಸಬೇಕು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಕೆ.ಎಸ್., ಸತೀಶ ಪೂಜಾರಿ ವಕ್ವಾಡಿ, ಪಕ್ಷದ ಪ್ರಮುಖರಾದ ಸದಾನಂದ ಉಪ್ಪಿನಕುದ್ರು, ರಾಜೇಶ ಕಾವೇರಿ, ಸದಾನಂದ ಬಳ್ಕೂರು ಹಾಗೂ ವಿವಿಧ ಮೋರ್ಚಗಳ ಮುಖಂಡರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!