spot_img
Thursday, June 25, 2026
spot_img

ಸರ್ಕಾರಿ ಪ್ರೌಢಶಾಲೆ ಬೀಜಾಡಿ: ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ

ಸರ್ಕಾರಿ ಪ್ರೌಢ ಶಾಲೆ ಬೀಜಾಡಿ ಇಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ ರಚನೆಯು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ವಿದ್ಯುನ್ಮಾನ ಮತಯಂತ್ರ(ELECTRONIC VOTING MACHINE APP) ಬಳಸಿ ನಡೆಸಲಾಯಿತು. ಚುನಾವಣಾ ಅಧಿಸೂಚನೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರ, ಚುನಾವಣಾ ದಿನಾಂಕ, ಮತ ಎಣಿಕೆ ದಿನಾಂಕ ಇತ್ಯಾದಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲಾಯಿತು. ಅಲ್ಲದೇ ವಿಶೇಷವಾಗಿ NOTA ಮತದಾನಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಬೂತ್ ಮಟ್ಟದ ಅಧಿಕಾರಿಗಳಾಗಿ ಪ್ರತೀ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ವಿದ್ಯಾರ್ಥಿಗಳಾದ ಭೂಮಿಕಾ, ಸಾನ್ವಿ, ಶ್ರೀಶಾ ಮತ್ತು ಅಂಕಿತಾ ನೀಡಿದರು. ಮತದಾನ ಅಧಿಕಾರಿಗಳಾಗಿ ವಿದ್ಯಾರ್ಥಿಗಳಾದ ಸಪ್ತಮಿ, ತನ್ಮಯಿ, ಪ್ರತಿಭಾ ಮತ್ತು ಸಾನ್ವಿ ಕರ್ತವ್ಯ ನಿರ್ವಹಿಸಿದರು.

ಮತದಾನದ ಕಂಟ್ರೋಲ್ ಯುನಿಟ್‌ಗಳನ್ನು ಶಿಕ್ಷಕಿಯರಾದ ಶ್ರೀಮತಿ ಗೀತಾ ಹಾಗೂ ಶ್ರೀಮತಿ ಲಿಖಿತಾ ಅವರು ನಿರ್ವಹಿಸಿದರು. ಮತದಾನ ಅಧಿಕಾರಿಗಳಿಗೆ ಮತ್ತು ಎಲ್ಲಾ ನಾಲ್ಕು ಅಭ್ಯರ್ಥಿಗಳಿಗೆ ವಿದ್ಯಾರ್ಥಿ ಮತದಾರರ ಪಟ್ಟಿಯನ್ನು ನೀಡಲಾಗಿತ್ತು. ಮತದಾನ ಕೇಂದ್ರದಲ್ಲಿ ತಮ್ಮ ಶಾಲಾ ಐಡಿ, ಆಧಾರ್ ಅಥವಾ ರೇಶನ್ ಕಾರ್ಡ್ ಹಾಜರುಪಡಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಮತದಾನ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ, ಸಹಿ ಪಡೆಯಲಾಯಿತು. 143 ವಿದ್ಯಾರ್ಥಿಗಳಲ್ಲಿ 137 ವಿದ್ಯಾರ್ಥಿಗಳು ಹಾಜರಿದ್ದು ಮುಕ್ತವಾಗಿ ನ್ಯಾಯಸಮ್ಮತವಾಗಿ ತಮ್ಮ ಮತ ಚಲಾಯಿಸಿದರು. ಮತದಾನ ನೀಡಿದ ಗುರುತಾಗಿ ಎಡಗೈ ತೋರುಬೆರಳಿಗೆ ಅಳಿಸಲಾಗದ ಮಸಿ ಗುರುತು ಹಾಕಲಾಯಿತು. ಮತದಾನದ ಸಂದರ್ಭದಲ್ಲಿ ಆಗಬಹುದಾದ ವಿವಿಧ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ಅನುಭವ ಮಾಡಿಕೊಡಲಾಯಿತು. ಮತದಾನ ಮುಗಿದ ನಂತರ ಪ್ರಿಸೈಡಿಂಗ್ ಅಧಿಕಾರಿಯವರಿಂದ ಮತದಾನದ ಲೆಕ್ಕಪತ್ರ, ಇನ್ನಿತರ ಸಾಮಗ್ರಿಗಳನ್ನು ಕೌಂಟರಿನಲ್ಲಿ ಪಡೆಯಲಾಯಿತು. ಮತ ಎಣಿಕೆಯು ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಿತು. ಮತ ಎಣಿಕೆಯ ನಂತರ ಚುನಾವಣಾಧಿಕಾರಿಗಳು ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು.

ಶಾಲಾ ನಾಯಕನಾಗಿ 10ನೇ ತರಗತಿಯ ಕುಮಾರ ಮಣಿಕಂಠ, ಶಾಲಾ ಉಪನಾಯಕನಾಗಿ 9ನೇ ತರಗತಿಯ ಕುಮಾರ ಮನ್ವಿತ್.ಎಂ ಆಯ್ಕೆಯಾದರು. ಶಾಲಾ ವಿದ್ಯಾರ್ಥಿ ಸಂಸತ್‌ನ ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ವಿನೋದಾ ಎಂ ಚುನಾವಣಾ ಆಯುಕ್ತರಾಗಿ, ಶಿಕ್ಷಕರಾದ ಶ್ರೀಮತಿ ಅರ್ಪಣಾ ಬಾಯಿ ಚುನಾವಣಾಧಿಕಾರಿಗಳಾಗಿ, ಶ್ರೀಮತಿ ಸುಪ್ರಿಯಾ ಮೈಕ್ರೋ ಅಬ್ಸರ್ವರ್ ಆಗಿ, ನಟರಾಜ ಸೆಕ್ಟರ್ ಆಫೀಸರ್ ಆಗಿ, ಉದಯ ಮೊಗವೀರ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಿ ಸೆಕ್ಯೂರಿಟಿ ಚೀಫ್ ಆಗಿ, ಹಾಗೂ ಶ್ರೀಮತಿ ಗೀತಾ, ಶ್ರೀಮತಿ ರಮ್ಯಾ ಮತ ಎಣಿಕೆ ಅಧಿಕಾರಿಗಳಾಗಿ, ಶ್ರೀಮತಿ ಪ್ರೇಮ ಮತ್ತು ಶ್ರೀಮತಿ ಲಿಖಿತಾ ತಾಂತ್ರಿಕ ಸಹಾಯಕರಾಗಿ ಸಹಕರಿಸಿದರು.
ಚುನಾವಣಾ ಪ್ರಕ್ರಿಯೆಯ ಸಂಘಟನೆಯನ್ನು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಡಾ.ಸದಾನಂದ ಬೈಂದೂರ್ ನಿರ್ವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!