spot_img
Wednesday, June 24, 2026
spot_img

ಸೈಂಟ್ ಮೇರಿಸ್ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಸಮಾರಂಭ

ಕುಂದಾಪುರ; ಸೈಂಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 23 ರಂದು ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅ| ವಂ| ಫಾ. ಪಾವ್ಲ್ ರೇಗೊ ಮಾತನಾಡಿ ಕಾಲೇಜು ಸಂಸತ್ತಿನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, “ನಾಯಕತ್ವ ಗುಣಗಳು ನಿಮ್ಮಲ್ಲಿ ಬೆಳೆಯಬೇಕು.ಇಂದು ನೀವು ಸ್ವೀಕರಿಸಿರುವ ಈ ಹುದ್ದೆ ಸಮಾಜ ಸೇವೆಯಲ್ಲಿ ತೊಡಗುವಂತಾಗಬೇಕು.ನೀವು ವಿದ್ಯಾ ಸಂಸ್ಥೆಯಲ್ಲಿ ಮೀನುಗಬೇಕು, ನಿಮ್ಮ ಗುರಿ ಸಾಕಾರಗೊಳ್ಳಬೇಕು, ಎಲ್ಲರಿಗೂ ಶುಭವಾಗಲಿ” ಎಂದು ಹೇಳಿ ಪ್ರಮಾಣವಚನ ಬೋಧಿಸಿ ಎಲ್ಲಾ ಪದಾಧಿಕಾರಿಗಳಿಗೆ ಹರಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಸ್ರೂರು ಫಿಲಿಫ್ ನೇರಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾಗಿರುವ ವಂ| ಧರ್ಮಗುರು ಡ್ಯಾನ್ಸಿ ಸುನಿಲ್ ಮಾರ್ಟೀಸ್ ಶುಭ ಹಾರೈಸಿದರು
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಮಿ. ಇಷಾನ್ ಡಿಸೋಜ ತನ್ನನ್ನು ಮತನೀಡಿ ಆರಿಸಿದ್ದಕ್ಕೆ ವಂದನೆ ಸಲ್ಲಿಸಿದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ|ಧರ್ಮಗುರು ರೋಲ್ವಿನ್ ಫೆರ್ನಾಂಡಿಸ್, ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕರಾದ ಪ್ರಾದ್ಯಪಕಿ ರೇಷ್ಮಾ ಫೆರ್ನಾಂಡಿಸ್ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಪುಷ್ಪ ನೀಡಿ ಸನ್ಮಾನಿಸಿದರು. ಸಂಸತ್ತಿನ ಬೇರೆ ಬೇರೆ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಕಾರ್ಯಕ್ರಮದ ಸಂಯೋಜಕಿ ಪ್ರಫುಲ್ಲಾ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತನ ಕಾರ್ಯದರ್ಶಿ ಪ್ರಿನ್ಸಿಯ ಬರೆಟ್ಟೋ ವಂದಿಸಿದರು. ಪ್ರಥಮ ಪಿ.ಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜೆನೆಸ್ಸಾ ಬರೆಟ್ಟೊ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!