spot_img
Monday, June 15, 2026
spot_img

ಜಾಗತಿಕ ತಾಪಮಾನಕ್ಕೆ ಅರಣ್ಯವೇ ಮದ್ದು -ನಾಗೇಶ್ ಬಿಲ್ಲವ

ಅರಣ್ಯವೆಂಬುದು ಸಂಪತ್ತಷ್ಟೇ ಅಲ್ಲ ಜೀವರಾಶಿಗಳ ಉಸಿರು. ಕೇವಲ ಗಿಡ ನೆಡುವುದರಿಂದ ಅರಣ್ಯ ಉಳಿಸಿದಂತಾಗುವುದಿಲ್ಲ. ನೆಟ್ಟ ಗಿಡವನ್ನು ಕಾಪಾಡಿ ಇರುವ ಅರಣ್ಯ ನಾಶವಾಗದಂತೆ ಎಚ್ಚರಿಕೆವಹಿಸಿ ಮಾನವ ಕುಲದ ಮಾರಕವಾದ ಪ್ಲಾಸ್ಟಿಕ್ ಭೂಮಿಗೆ ಸೇರದಂತೆ ಎಚ್ಚರಿಕೆ ವಹಿಸಬೇಕು. ಪರಿಸರದ ಬಗ್ಗೆ ಜ್ಞಾನವನ್ನು ಗಳಿಸಿ ಹಸಿರು ವಲಯವನ್ನು ಉಳಿಸಲು ಪ್ರಯತ್ನಿಸುವುದು ಇಂದಿನ ಅಗತ್ಯವಾಗಿದೆ. ಜಾಗತಿಕ ತಾಪಮಾನ ನಿಯಂತ್ರಿಸಲು ಮತ್ತು ವನ್ಯ ಸಂಪತ್ತು ಉಳಿಸಲು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ನಾಗರಿಕನು ಪ್ರಯತ್ನಿಸಬೇಕು ಎಂದು ಸಾಮಾಜಿಕ ಅರಣ್ಯ ಘಟಕ ಕುಂದಾಪುರ ವಲಯ ಇದರ ಅರಣ್ಯ ಅಧಿಕಾರಿ ನಾಗೇಶ್ ಬಿಲ್ಲವ ತಿಳಿಸಿದರು.
ಅವರು ಶಂಕರನಾರಾಯಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಪರಿಸರ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅರಣ್ಯ ಉಳಿದರೆ ಮಾತ್ರ ಈ ಜೀವ ಸಂಕುಲಗಳ ಅಸ್ತಿತ್ವ. ಸಾಧ್ಯವಾದ ಮಟ್ಟಿಗೆ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದ ಸಂಭ್ರಮ ಆಚರಣೆಗಳಲ್ಲಿ ಒಂದೊಂದು ಗಿಡ ನೆಟ್ಟರು ಅಪರಿಮಿತ ಅರಣ್ಯ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ಪರಿಸರ ಸಂಘದ ಸಂಚಾಲಕ ಮಹಾಲಿಂಗಪ್ಪ ಆರ್ ಸ್ವಾಗತಿಸಿದರು. ಎನ್ ಎಸ್ ಎಸ್ ಸಂಚಾಲಕಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ರೆಡ್ ಕ್ರಾಸ್ ಸಂಚಾಲಕ ರಮೇಶ್ ಎನ್ ಎಸ್ ವಂದಿಸಿದರು ಕಾಲೇಜಿನ ಗುಣಮಟ್ಟ ಮತ್ತು ಆಂತರಿಕ ಭರವಸಾ ಕೋಶ ಸಂಚಾಲಕಿ ಡಾ. ನಳಿನಶ್ರೀ ಮತ್ತು ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!