spot_img
Friday, June 5, 2026
spot_img

‘ಅಪರ್ಣಾಳ ಸೆರೆಮನೆಗಳು-ಅಶ್ವತಿಯದ್ದೂ’ ಅನುವಾದಿತ ಕಾದಂಬರಿ ಬಿಡುಗಡೆ

ಕುಂದಾಪುರ : ಖ್ಯಾತ ಲೇಖಕಿ ಡಾ.ಪಾರ್ವತಿ ಜಿ. ಐತಾಳ್ ಅನುವಾದಿಸಿದ ಮಲೆಯಾಳದ ಪ್ರಸಿದ್ಧ ಕಥೆಗಾರ್ತಿ ಚಂದ್ರಮತಿಯವರ ಕಾದಂಬರಿ ’ಅಪರ್ಣಾಳ ಸೆರೆಮನೆಗಳು-ಅಶ್ವತಿಯದ್ದೂ’ ಅನ್ನುವ ಕಾದಂಬರಿಯನ್ನು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟ್ರಾಮ ಭಟ್ ಬಿಡುಗಡೆ ಮಾಡಿದರು.

ಕೃತಿಯ ಬಗ್ಗೆ ಮಾತನಾಡುತ್ತ ಇದು ಸಂಪ್ರದಾಯ ಮತ್ತು ಆಧುನಿಕತೆಗಳ ನಡುವೆ ಆಯ್ಕೆ ಮಾಡಲರಿಯದೆ ತೊಳಲಾಡುತ್ತಿರುವ ಇಂದಿನ ಯುವಜನತೆಯ ದುಸ್ಥಿತಿಯನ್ನು ಚಿತ್ರಿಸುವ ಕಾದಂಬರಿ.ಆದ್ದರಿಂದ ಇಂದಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾದದ್ದು’ ಎಂದು ಪಾರ್ವತಿ ಐತಾಳ್ ಹೇಳಿದರು.

ವಿಶ್ವ ಮಲೆಯಾಳ ಮಹಾಮಂಡಲದ ಉಡುಪಿ ಪ್ರಾವಿನ್ಸ್ ವತಿಯಿಂದ ಕಾಲೇಜು ಗ್ರಂಥಾಲಯಕ್ಕೆ ಪುಸ್ತಕ ದಾನ ಸಮಾರಂಭದಲ್ಲಿ WMCಯ ಚೇರ್ಮನ್ ಶಿನೋದ್ ಟಿ,ಆರ್, ಅಧ್ಯಕ್ಷ ಬಿನೇಶ್ , ಕಾರ್ಯದರ್ಶಿ ಬಿನಿಲ್ ವಿ., ಮತ್ತು ಕಾಲೇಜಿನ ಗ್ರಂಥಾಲಯ ಸಮಿತಿಯ ಸಂಯೋಜಕ ಪ್ರಸ್ತುತ ವೈ.ಎನ್. ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಉಪನ್ಯಾಸಕಿ ಪ್ರಜ್ಞಾ ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ಮಾನಸಾ ವಂದಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!