spot_img
Friday, June 5, 2026
spot_img

ಬಸ್ರೂರು ಶ್ರೀ ಆದಿನಾಥೇಶ್ವರ ದೇವರಿಗೆ ಪ್ರಭಾವಳಿ ಮತ್ತು ಬೆಳ್ಳಿ ಮುಖವಾಡ ಸಮರ್ಪಣೆ

ಬಸ್ರೂರು: ಮೂರು ನಾಲ್ಕನೇ ಶತಮಾನದ ಪುರಾತನ ಇತಿಹಾಸದ ಶ್ರೀ ಆದಿನಾಥೇಶ್ವರ ದೇವರಿಗೆ ಸ್ಥಳೀಯ ವಕೀಲರಾದ ಶರ್ಮಿಳಾ ಯೋಗೀಶ್ ಆಚಾರ್ಯ ಅವರು ಪ್ರಭಾವಳಿಯನ್ನು ಹಾಗೂ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕುಟುಂಬಸ್ಥರು ಬೆಳ್ಳಿ ಮುಖವಾಡವನ್ನು ಸಮರ್ಪಿಸಿದರು.
ಈ ನಿಮಿತ್ತ ಹಮ್ಮಿಕೊಳ್ಳಲಾದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಭಾಗವಹಿಸಿ, ಇಂತಹ ಪುರಾತನ ದೇವಾಲಯಗಳ ಜೀರ್ಣೋದ್ಧಾರದ ಕಡೆಗೆ ಜನರು ಗಮನಹರಿಸಬೇಕು. ಇದರಿಂದ ಐತಿಹಾಸಿಕವಾಗಿ ಪೌರಾಣಿಕವಾಗಿ ಶ್ರೀಮಂತವಾಗಿರುವ ಬಸ್ರೂರು ಪ್ರೇಕ್ಷಣೀಯ ಸ್ಥಳವಾಗುತ್ತದೆ ಎಂದರು.
ರವಿ ಬಸ್ರೂರು ಅವರ ಸಂಗೀತ ಕ್ಷೇತ್ರದ ಸಾಧನೆಗಾಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ೨೪ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ ಯೋಧ ಕರುಣಾಕರ ಗಾಣಿಗ ಅವರನ್ನು ಗೌರವಿಸಲಾಯಿತು.
ಖ್ಯಾತ ವಾಸ್ತು, ಪ್ರಸಂಗಕರ್ತ ಡಾ.ಬಸವರಾಜ ಶೆಟ್ಟಿಗಾರ್ ಅವರು ಧಾರ್ಮಿಕ ಪ್ರವಚನ ನೀಡಿದರು.
ಯುವ ಉದ್ಯಮಿ ಹರ್ಷವರ್ಧನ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು ಇನ್ಫೋಟೆಕ್ ಕುಂದಾಪುರ, ಸೇವಾಕರ್ತರಾದ ಶರ್ಮಿಳ ಯೋಗೇಶ್ ಆಚಾರ್ಯ, ಉದ್ಯಮಿ ಶಿವರಾಮ ಮೇಸ್ತ್ರಿ, ನಿರುಪಮಾ ಹೆಗ್ಡೆ ಉಪಸ್ಥಿತರಿದ್ದರು.
ಅಶೋಕ್ ಕೆರೆಕಟ್ಟೆ ಸ್ವಾಗತಿಸಿ, ಅಶೋಕ್ ಬಿ.ಕೆ ವಂದಿಸಿದರು. ಸಾರಿಕಾ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!