spot_img
Tuesday, June 2, 2026
spot_img

ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಗೆ ಪೊಲೀಸ್ ಇಲಾಖೆಯಿಂದ ಮತ್ತೊಮ್ಮೆ ಪ್ರಶಂಸಾ ಪತ್ರ

ಕುಂದಾಪುರ: ಕೋಟೇಶ್ವರ ಸಮೀಪದ ಅಂಕದಕಟ್ಟೆಯಲ್ಲಿ ವೀಕ್ಷಣ ಕೇಂದ್ರವನ್ನು ಹೊಂದಿರುವ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕಾರ್ಯವೈಖರಿ, ಸೇವೆಗೆ ಪೊಲೀಸ್ ಇಲಾಖೆಯು ಮತ್ತೊಮ್ಮೆ ಪ್ರಶಂಸಾ ಪತ್ರವನ್ನು ನೀಡಿದೆ. ಸಂಸ್ಥೆಯ ಮುಖ್ಯಸ್ಥರಾದ ಕೃಷ್ಣ ಅವರಿಗೆ ಇತ್ತೀಚೆಗೆ ಕುಂದಾಪುರ ಡಿವೈ‌ಎಸ್.ಪಿ ಎಚ್.ಡಿ ಕುಲಕರ್ಣಿ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.

2026 ಎಪ್ರಿಲ್ 16ರಂದು ತ್ರಾಸಿಯಲ್ಲಿರುವ ಅಖಿಲ ಭಾರತ ಕೊಂಕಣ ಖಾರ್ವಿ ಮಹಾಜನ ಸಭಾ ಹಾಲ್ ನ ಪಶ್ಚಿಮ ಭಾಗದ ಒಂದನೇ ಮಹಡಿಯ ಸ್ಟೇಪ್ ಬಳಿ ಅಳವಡಿಸಿರುವ ಸೆಂಟ್ರಲ್ ಎಸಿಯ ತಾಮ್ರದ ಪೈಪ್‌ಗಳನ್ನು ಕಳವಿಗೆ ಯತ್ನಿಸಿದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ತ್ರಾಸಿಯ ಈ ಹಾಲ್‌ನಲ್ಲಿ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅಳವಡಿಸಲಾದ ಲೈವ್ ರೆಕಾರ್ಡಿಂಗ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳ ಚಹರೆಯನ್ನು ಆಧರಿಸಿ ಪ್ರಕರಣದ ಆರೋಪಿತರನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ನೀಡಿದ ಮಾಹಿತಿಯಿಂದ ಪ್ರಕರಣ ಶೀಘ್ರವಾಗಿ ಭೇದಿಸಲು ಸಹಕಾರಿಯಾಗಿತ್ತು.

ಸೈನ್ ಇನ್ ಸೆಕ್ಯುರಿಟಿ ಉಡುಪಿ, ದ.ಕ ಮಾತ್ರವಲ್ಲದೆ ಮಹಾರಾಷ್ಟ್ರ, ತೆಲಂಗಣ, ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ಭಾಗಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಿ ಅಪರಾಧ ಪ್ರಕರಣ ನಿಯಂತ್ರಣಕ್ಕೆ ಶ್ರಮಿಸುತ್ತಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!