spot_img
Monday, April 27, 2026
spot_img

ಜೆಸಿ‌ಐ ಶಂಕರನಾರಾಯಣ ವತಿಯಿಂದ ಯಕ್ಷಗಾನ ಕಲಾವಿದ ಶಂಕರ ನಾಯ್ಕ ಅವರಿಗೆ ‘ಸಲ್ಯೂಟ್ ದ ಸೈಲೆಂಟ್ ಸ್ಟಾರ್’ ಗೌರವ ಸಮರ್ಪಣೆ

ಶಂಕರನಾರಾಯಣ: ಜೆಸಿ‌ಐ ಶಂಕರನಾರಾಯಣ ಘಟಕದ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಸಲ್ಯೂಟ್ ದ ಸೈಲೆಂಟ್ ಸ್ಟಾರ್” ಸನ್ಮಾನ ಕಾರ್ಯಕ್ರಮದ ಅಡಿಯಲ್ಲಿ, ಯಕ್ಷಗಾನ ರಂಗದ ಹಿರಿಯ ಕಲಾವಿದ ಹಾಗೂ ಹಾಲಾಡಿ ಮೇಳದ ಪ್ರಧಾನ ಹಾಸ್ಯಗಾರರಾದ ಶಂಕರ ನಾಯ್ಕ ಅವರಿಗೆ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಯಿತು.

ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿರುವ ಶಂಕರ ನಾಯ್ಕ ಅವರು ತಮ್ಮ ವಿಶಿಷ್ಟ ಹಾಸ್ಯ ನಟನೆಯ ಮೂಲಕ ಕಲಾಭಿಮಾನಿಗಳ ಮನಗೆದ್ದವರು. ಇವರ ಕಲಾ ಸೇವೆಯನ್ನು ಗುರುತಿಸಿ ಜೆಸಿ‌ಐ ಶಂಕರನಾರಾಯಣ ಘಟಕವು ಏಪ್ರಿಲ್ ೨೬ರಂದು ಬೆದ್ರಕಟ್ಟೆಯಲ್ಲಿರುವ ಅವರ ಸ್ವಗೃಹದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಜೆಸಿ‌ಐ ಶಂಕರನಾರಾಯಣ ಘಟಕದ ಅಧ್ಯಕ್ಷರಾದ ಜೆಸಿ ಯೋಗೇಶ್ ಕಾಂಚನ್, ಕಾರ್ಯದರ್ಶಿ ಜೆಸಿ ರಂಜಿತ್ ಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಹೆಬ್ಬಾಡಿ, ರಾಘವೇಂದ್ರ ಕುಪ್ಪಾರು, ಪ್ರವೀಣ್ ಕುಮಾರ್ ಬಾಳೆ ಕೊಡ್ಲು ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!