spot_img
Monday, April 13, 2026
spot_img

ಶ್ರೀ ಹಂದೆ ವಿಷ್ಣುಮೂರ್ತಿ ಮತ್ತು ಹಂದೆ ವಿನಾಯಕ ದೇವಸ್ಥಾನದ ಶ್ರೀ ದೇವರ ಶ್ರೀಮನ್ಮಹಾರಥೋತ್ಸವ

ಬ್ರಹ್ಮಾವರ ತಾಲೂಕು ಕೋಟ ವಿವೇಕ ಪ್ರೌಢಶಾಲೆ ಹತ್ತಿರದ ಹಂದಟ್ಟು ಗ್ರಾಮದಲ್ಲಿ ವಿರಾಜಮಾನವಾಗಿರುವ ಶ್ರೀ ಹಂದೆ ವಿಷ್ಣುಮೂರ್ತಿ ಮತ್ತು ಹಂದೆ ವಿನಾಯಕ ದೇವಸ್ಥಾನವು ಸುಮಾರು 1200 ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ಕೋಟ ಮಹಾಜಗತ್ತಿನ ಪ್ರಮುಖ ಮನೆತನದವರಾದ ಹಂದೆ ಅವರ ಕುಟುಂಬದ ಪಾರಂಪರಿಕ ಪರಮಾರಾಧ್ಯ ದೇವರಾದ್ದರಿಂದಲೂ ಆಡಳಿತವನ್ನು ಅವರೇ ನಿರ್ವಹಿಸುತ್ತಾ ಬಂದ ಕಾರಣದಿಂದಲೂ ಹಂದೆ ದೇವಸ್ಥಾನ ಎಂಬ ಹೆಸರು ವಾಡಿಕೆಯಲ್ಲಿದೆ. ಈ ದೇವಾಲಯದ ಇನ್ನೊಂದು ವೈಶಿಷ್ಟವೆಂದರೇ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವರ ಅವಭೃತೋತ್ಸವ ನಡೆಯುವುದು ಈ ದೇವಳದ ಪುಷ್ಕರಣಿಯಲ್ಲಿ. ಕಳೆದ ವರ್ಷ ಶ್ರೀ ದೇವಳದ ಅನುವಂಶಿಕ ಮೊಕ್ತೇಸರರಾದ ಹೆಚ್. ಅಮರ ಹಂದೆಯವರ ನೇತೃತ್ವದಲ್ಲಿ ವೇದ ಮೂರ್ತಿ ಹೆಚ್ ಸದಾಶಿವ ಐತಾಳ ಹಂದಟ್ಟು ಇವರ ಮಾರ್ಗದರ್ಶನದಲ್ಲಿ ಹಾಗೆ ಭಕ್ತಾಧಿಗಳ ಸಹಕಾರದಲ್ಲಿ ಅಷ್ಟಬಂಧ ಮಹೋತ್ಸವವು ನೆರವೇರಿರುತ್ತದೆ. ಈ ಎಲ್ಲಾ ಕಾರ್ಯಗಳ ಮುಂದುವರಿದ ಭಾಗವಾಗಿ ಇವರಿಬ್ಬರ ಮಾರ್ಗದರ್ಶನ, ಸಮಾಜದ ಗಣ್ಯರು ಹಾಗೂ ಊರ ಹಿರಿಯರ ತೀರ್ಮಾನದಂತೆ ಶ್ರೀ ಮಹಾವಿಷ್ಣು ದೇವರ ಗರ್ಭಗುಡಿ ಹಾಗೂ ಎಡನಾಳಿ ತೀರ್ಥಮಂಟಪ ಮೇಲ್ಛಾವಣಿಗೆ 60 ಲಕ್ಷ ರೂಪಾಯಿ ಅಂದಾಜಿನ ತಾಮ್ರದ ಹೊದಿಕೆ ಮಾಡುವುದೆಂದು ನಿಶ್ಚಯಿಸಿ, ಹೊದಿಕೆ ಕಾರ್ಯ ಮುಗಿಯುವ ಹಂತದಲ್ಲಿದೆ. ಹಾಗೇ ಸುಮಾರು 1200 ವರ್ಷಗಳ ಪ್ರಾಚೀನತೆಯನ್ನು ಹೊಂದಿದ ಶ್ರೀ ಹಂದೆ ವಿಷ್ಣುಮೂರ್ತಿ ಮತ್ತು ಹಂದೆ ವಿನಾಯಕ ದೇವಸ್ಥಾನದ ಶ್ರೀ ದೇವರ ಶ್ರೀ ಮನ್ಮಹಾರಥೋತ್ಸವವು 20-04-2026ನೇ ಸೋಮವಾರ ಅಕ್ಷಯ ತೃತೀಯದಂದು ನಡೆಯಲಿದೆ. ಶ್ರೀ ದೇವರ ಧಾರ್ಮಿಕ ಕಾರ್ಯಕ್ರಮ 15-04-2026 ರಿಂದ ನಡೆಯಲಿದೆ. 19-04-2026 ರಿಂದ 21-04-2026ರ ತನಕ ಪ್ರತಿದಿನ ಸಂಜೆ 5.30ಗೆ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ದೇವರ ರಂಗ ಮಂಟಪದಲ್ಲಿ ನಡೆಯಲಿದೆ ಎಂದು ದೇವಳದ ಅನುವಂಶಿಕ ಮೊಕ್ತೇಸರರಾದ ಹೆಚ್. ಅಮರ ಹಂದೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!