spot_img
Monday, April 6, 2026
spot_img

ಬೈಂದೂರು : ಚಾಂದ್ರಮಾನ ಯುಗಾದಿಯ ಆಚರಣೆ

ಬೈಂದೂರು : ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ ಬಿಜೂರು ಗ್ರಾಮದ ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಯಿತು. ಪಂಚಾಂಗ ಶ್ರವಣ ಮಾಡಿ ಯುಗಾದಿಯ ಆಚರಣೆಯ ಕುರಿತು ವಿಶೇಷ ಉಪನ್ಯಾನ ನೀಡಿದ ವೇದಮೂರ್ತಿ ಯೋಗೀಶ್ ಭಟ್ ಇವರನ್ನು ಸನ್ಮಾನಿಸಲಾಯಿತು. ವಲಯದ ಮಹಿಳಾ ವೇದಿಕೆಯ ಸದಸ್ಯರು ವಿಷ್ಣುಸಹಶ್ರನಾಮ ಪಠಿಸಿದರು. ವಲಯಾಧ್ಯಕ್ಷ ಯು. ಸಂದೇಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ವೇದಮೂರ್ತಿ ಗುರುರಾಜ್ ಭಟ್, ಕೊಲ್ಲೂರು ಶ್ರೀ ಮುಕಾಂಬಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನಾಗರಾಜ ಭಟ್, ದೀಟಿ ಸೀತಾರಾಮ್ ಮಯ್ಯ, ರತ್ನಾಕರ ಉಡುಪ, ಜಗದೀಶ ರಾವ್ ಹೆಚ್, ಗಣೇಶ್ ಮಯ್ಯ, ಯುವ ವೇದಿಕೆಯ ಅಧ್ಯಕ್ಷ ಪದ್ಮನಾಭ ಹೆಬ್ಬಾರ್, ಅರುಣ್ ಶಾನುಭಾಗ್, ಮಹಿಳಾ ವೇದಿಕೆಯ ಅಧ್ಯಕ್ಷೆ ವೀಣಾ ಹೆಬ್ಬಾರ್, ಗುರುರಾಜ್ ಹೆಬ್ಬಾರ್, ಯೋಗೀಶ್ ಕಾರಂತ್ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಧ್ಯಾ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಷಿಕ ಅಧೀವೇಶನದ ಲೆಕ್ಕಾಚಾರವನ್ನು ಮಂಡಿಸಲಾಯಿತು, ಕಾರ್ಯಕಾರಿ ಮಂಡಳಿಯ ರಚನೆಯ ಕುರಿತು ವಿಶೇಷ ಮಹಾಸಭೆ ಕರೆಯಲು ತಿರ್ಮಾನಿಸಲಾಯಿತು, ಕಾರ್ಯದರ್ಶಿ ಪ್ರಶಾಂತ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!